ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. BBMP ಆಯಸ್ಸು ಮುಗಿದಿದೆ. ಇನ್ಮುಂದೆ BBMP ಯುಗಾಂತ್ಯ ಆಗುತ್ತಿದ್ದು, ರಾಜಧಾನಿ ಬೆಂಗಳೂರಿನ ಆಡಳಿತದ ಚಿತ್ರಣವೇ ಅದಲು ಬದಲಾಗುತ್ತಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈಗ ಮುಕ್ತಾಯ ಆಗುತ್ತಿದೆ. ರಾಜ್ಯ ಸರ್ಕಾರ  GBAಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಯಾಗುತ್ತದೆ. ನಾಳೆಯಿಂದ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬರುತ್ತಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನ ವಿಸ್ತರಣೆ ಮಾಡಿಕೊಳ್ಳಲು ಅವಕಾಶ ಇದೆ. ಅಂದ್ರೆ ಹಾಲಿ 709 ಚದರ ಕಿಲೋ ಮೀಟರ್‌ನಿಂದ 1 ಸಾವಿರ ಚದರ ಕಿ.ಮೀ ವ್ಯಾಪ್ತಿಗೆ GBA ವಿಸ್ತರಣೆ ಮಾಡಲಾಗುತ್ತಿದೆ. GBAಗೆ ಬಿಬಿಎಂಪಿ ಅಧೀನದಲ್ಲಿದ್ದ ಪ್ರದೇಶಗಳ ಜತೆಗೆ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿರುವ ಸಾಕಷ್ಟು ಪ್ರದೇಶಗಳೂ ಸೇರ್ಪಡೆ ಆಗುತ್ತದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ 3 ಅಥವಾ 5 ಪಾಲಿಕೆ ರಚನೆ ಮಾಡಿಕೊಳ್ಳಲು ಅವಕಾಶಗಳಿದೆ. ಬೆಂಗಳೂರಿನ ಪ್ರಾದೇಶಿಕತೆ, ಭೌಗೋಳಿಕತೆಯ ವ್ಯಾಪ್ತಿ, ವಿಸ್ತೀರ್ಣ ಕೂಡ ಏರಿಕೆಯಾಗುತ್ತದೆ. ಸದ್ಯಕ್ಕೆ ಬಿಬಿಎಂಪಿಯನ್ನು 3 ಪಾಲಿಕೆಗಳನ್ನಾಗಿ ವಿಂಗಡಣೆ ಮಾಡಲಾಗುತ್ತಿದ್ದು, ಒಂದೊಂದು ಪಾಲಿಕೆಯು 125 ವಾರ್ಡ್‌ಗಳನ್ನು ಹೊಂದಿರುತ್ತೆ.

3 ಪಾಲಿಕೆ ಹೆಸರು ‘ಬೆಂಗಳೂರು’

– ಬೆಂಗಳೂರು ಕೇಂದ್ರ ನಗರ ಪಾಲಿಕೆ
– ಬೆಂಗಳೂರು ಉತ್ತರ ನಗರ ಪಾಲಿಕ
– ಬೆಂಗಳೂರು ದಕ್ಷಿಣ ನಗರ ಪಾಲಿಕೆ

GBAನಲ್ಲಿ ಏನೆಲ್ಲಾ ಬದಲಾಗಲಿದೆ?

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಮುಖ್ಯಮಂತ್ರಿಗಳೇ ಅಧ್ಯಕ್ಷರು ,ಬೆಂಗಳೂರು ಅಭಿವೃದ್ಧಿ ಸಚಿವರೇ GBAನ ಉಪಾಧ್ಯಕ್ಷ,ತಲಾ 125 ವಾರ್ಡ್‌ಗಳನ್ನು ಒಳಗೊಂಡ ಮೂರು ನಗರ ಪಾಲಿಕೆಪ್ರತಿ ಪಾಲಿಕೆಗೂ ಗ್ರೇಟರ್ ಬೆಂಗಳೂರು ಪ್ರದೇಶದ ಗಡಿ ನಿಗಧಿ ಮಾಡಲಾಗುತ್ತೆ. ಇಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ ಬೊಮ್ಮಸಂದ್ರ

ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ ಸೇರ್ಪಡೆ

ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯೂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆಗ್ರೇಟರ್ ಬೆಂಗಳೂರು ಕಟ್ಟಡಗಳ ಗಾತ್ರ, ಎತ್ತರ ನಿಯಮಗಳು ಬದಲು ಸಾಧ್ಯತೆವಸತಿ ಕಟ್ಟಡಗಳಿಗೆ ಶೇ. 50ರಷ್ಟು & ವಾಣಿಜ್ಯ ಕಟ್ಟಡಗಳಿಗೆ ಶೇ. 25ರಷ್ಟು ಕಡಿತ ತರುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here