ಬೆಂಗಳೂರು:2025ನೇ ಸಾಲಿನ SSLC & II PUC ಪರೀಕ್ಷೆಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನಿಬಂಧನೆಗಳು
1) ಶೇ.90 ಮತ್ತು ಅದಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು (ಸಂಘದ ಸದಸ್ಯರು ಮಕ್ಕಳು ಮಾತ್ರ) ಅರ್ಜಿ ಸಲ್ಲಿಸಬಹುದು.
2) ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ/ತಾಯಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಸದಸ್ಯರಾಗಿರಬೇಕು.
3) ಸಂಘವು ನಿಗಧಿಪಡಿಸಿರುವ ನಮೂನೆಯಲ್ಲಿ ಜಿಲ್ಲಾ ಸಂಘದ ದೃಢೀಕರಣದೊಂದಿಗೆ ನಿಗಧಿತ ದಿನಾಂಕದೊಳಗೆ ರಾಜ್ಯ ಸಂಘಕ್ಕೆ ಸಲ್ಲಿಸಬೇಕು.
4) ಸೂಕ್ತ ದಾಖಲೆಯೊಂದಿಗೆ
ಜಿಲ್ಲಾ ಸಂಘದ ಮೂಲಕ ಅರ್ಜಿ ಸಲ್ಲಿಸದಿದ್ದರೆ, ಅರ್ಜಿ ಅಪೂರ್ಣವಾಗಿದ್ದರೆ, ತಡವಾಗಿ ಬಂದರೆ ಪ್ರತಿಭಾ ಪುರಸ್ಕಾರಕ್ಕೆ ಪರಿಗಣಿಸುವುದಿಲ್ಲ.
5)ವಿದ್ಯಾರ್ಥಿಯ ಅಂಕ ಪಟ್ಟಿಯ ನಕಲನ್ನು ಶಾಲಾ/ ಕಾಲೇಜಿನ ಮುಖ್ಯಸ್ಥರಿಂದ ದೃಢೀಕರಿಸಿ ಅರ್ಜಿಯ ಜೊತೆ ಲಗ್ಗತ್ತಿಸಿ
6)ಆಧಾರ್ ಜೆರಾಕ್ಸ್ ಮತ್ತು ಸಂಘದ ಐಡಿ ಕಾರ್ಡ್ ಜೆರಾಕ್ಸ್ ಹಾಗೂ ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರವನ್ನು ಲಗತ್ತಿಸಿ.
7)ಚೆಕ್ ಬರೆಯಲು ವಿದ್ಯಾರ್ಥಿ ಹೆಸರು ಸ್ಪಷ್ಟವಾಗಿ ಬ್ಯಾಂಕ್ ಪಾಸ್ ಬುಕ್ ನಲ್ಲಿ ಇರುವಂತೆ ಇಂಗ್ಲೀಷ್ ನಲ್ಲೇ ಬರೆಯಿರಿ. ಪಾಸ್ ಬುಕ್ ಜೆರಾಕ್ಸ್ ಲಗತ್ತಿಸಿ.

ಅರ್ಜಿ ಮತ್ತು ಇತರೆ ಮಾಹಿತಿಗಾಗಿ ಆಯಾ ಜಿಲ್ಲಾ ಸಂಘವನ್ನು ಸಂಪರ್ಕಿಸಿ ಪಡೆಯುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-05-2025
ಶಿವಾನಂದ ತಗಡೂರು
ಅಧ್ಯಕ್ಷರು
ಜಿ.ಸಿ.ಲೋಕೇಶ
ಪ್ರಧಾನ ಕಾರ್ಯದರ್ಶಿ,ಗಳು ತಿಳಿಸಿದ್ದಾರೆ.