ರಾಮನಗರ: ರಾಮನಗರ ಜಿಲ್ಲೆಯ, ಮಾಗಡಿ ಟೌನ್ ನಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 134ನೇ ಹಾಗೂ ಡಾ. ಬಾಬು ಜಗಜೀವನ ರಾಮ್ ರವರ 118ನೇ ಜಯಂತ್ಯೋತ್ಸವ ಮತ್ತು ಮಾಗಡಿ ಪಟ್ಟಣದಲ್ಲಿ ನೂತನ ಬಿ.ಆರ್ ಅಂಬೇಡ್ಕರ್ ಭವನದ ಶಂಕು ಸ್ಥಾಪನಾ ಸಮಾರಂಭದಲ್ಲಿ ಮಾಜಿ ಸಚಿವ ಹೆಚ್ ಎಂ.ರೇವಣ್ಣ ಭಾಗಿಯಾಗಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಈ ಮಹಾನ್ ವ್ಯಕಿಗಳು ಭಾರತಕ್ಕೆ ಕೊಟ್ಟ ಕೊಡುಗೆಯನ್ನು ನೆನಪಿಸಿಕೊಳ್ಳುತ್ತಾ, ಗೌರವ ನಮನ ಸಲ್ಲಿಸಿದರು.

ಈ ವೇಳೆ ಮಾಗಡಿ ತಾಲೂಕಿನ ಪಾಲನಹಳ್ಳಿ ಮಠದ ಪೀಠಧಿಪತಿಗಳಾದ ಡಾ. ಶ್ರೀಶ್ರೀಶ್ರೀ ಸಿದ್ದರಾಜು ರವರು, ಮೈಸೂರಿನ ಶ್ರೀ ಉರಿಲಿಂಗಪೆದ್ದಿ ಮಠದ ಪೀಠಧಿಪತಿಗಳಾದ ಶ್ರೀಶ್ರೀ ಜ್ಞಾನ ಪ್ರಕಾಶ್ ಸ್ವಾಮಿಗಳು, ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ರವರು, ಮಾನ್ಯ ಆಹಾರ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ರವರು,ಮಾಜಿ ಸಂಸದರಾದ ಶ್ರೀ ಡಿ. ಕೆ. ಸುರೇಶ್ ರವರು, ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹೆಚ್.ಸಿ. ಬಾಲಕೃಷ್ಣ ರವರು, ಮಾಗಡಿ ಪುರಸಭೆ ಅಧ್ಯಕ್ಷರಾದ ಶ್ರೀಮತಿ ರಮ್ಯಾ ನರಸಿಂಹ ಮೂರ್ತಿ ರವರು, ರಾಮನಗರ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ಎಂ.ವಿ.ಶಿವಕುಮಾರ್ ರವರು, ಮಾಗಡಿ ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಹೆಚ್. ಎನ್. ಅಶೋಕ್ ರವರು,ಮಾಗಡಿ ತಾಲೂಕು ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ಕಲ್ಕೆರೆ ಶಿವಣ್ಣ ರವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದುಕೊರತೆ ಸಮಿತಿ ಸದಸ್ಯರಾದ ಶ್ರೀ ನರಸಿಂಹ ಮೂರ್ತಿ ರವರು,
ಸೇರಿದಂತೆ ಹಲವು ಪ್ರಮುಖ ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here