ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೆತ್ರದ ಬಿಬಿ ಎಂ ಪಿ ವಾರ್ಡ್ 03ರ ವ್ಯಾಪ್ತಿಯ ಅಟ್ಟೂರ್ ಬಡಾವಣೆಯ ಶ್ರೀ ಶನಿ ಮಹಾತ್ಮಾಸ್ವಾಮಿ ದೇವಸ್ಥಾನದ ಮುಖ್ಯರಸ್ತೆಯ ಸರ್ಕಲ್ ನಲ್ಲಿ ನಟ ಸಾರ್ವಭೌಮ. ಗಾನಗಂಧರ್ವ. ಕನ್ನಡ ಚಿತ್ರರಂಗದ ಸುಪ್ರಸಿದ್ದ ಮೇರು ನಟ. ಕನ್ನಡದ ಕಣ್ಮಣಿ ಪದ್ಮ ಭೂಷಣ ಡಾ. ರಾಜ್ ಕುಮಾರ್ ಅವರ 96ನೇ ಜನ್ಮದಿನದ ಈ ದಿನದಂದು ಸರಳವಾಗಿ ಅರ್ಥಗಂಭೀತವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪವರ್ ಸ್ಟಾರ್ ಡಾ ಪುನೀತ್ ರಾಜ್ ಕುಮಾರ್ ರವರನ್ನು ಸಹ ಸ್ಮರಣೆ ಮಾಡಿಕೊಂಡು ಸಿಹಿ ಹಂಚಿ ಮತ್ತು ಅನ್ನಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಗಳಾಗಿ ಅವಿಭಜಿತ ಯಲಹಂಕ ವಿಧಾನಸಭಾ ಕ್ಷೆತ್ರದ ಕನ್ನಡ ಸಾಹಿತ್ಯ ಪರಿಷತ್ತುನ ನಿಕಟ ಪೂರ್ವ ಅಧ್ಯಕ್ಷರು. ಸಮಾಜ ಸೇವಕರು ಮತ್ತು ಜೆಡಿಎಸ್ ಸೇವಾದಳ ರಾಜ್ಯಾಧ್ಯಕ್ಷರಾದ ಶ್ರೀ ಬಸವರಾಜು ಪಾದಯಾತ್ರಿ ರವರು ಭಾಗವಹಿಸಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಮಾಲಿಕೆ ಅರ್ಪಿಸಿ ಸ್ಮರಣೆ ಮಾಡಿಕೊಂಡು ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ಹಾಗೂ ಶ್ರೀ ವೆಂಕಟೇಶ್ ಸ್ವಾಮಿ ಶನಿ ಮಹಾತ್ಮಾ ದೇವಸ್ಥಾನ ಸಂಸ್ಥಾಪಕರು ಹಾಗೂ ಅರ್ಚಕರು ಮತ್ತು ಸ್ಥಳೀಯ ಮುಖಂಡರುಗಳಾದ ಲಕ್ಷ್ಮೀ ವೆಂಕಟೇಶ್ವರ ವುಡ್ ಡಿಸೈನ್ ನ ಶ್ರೀ ಭಾಸ್ಕರ್ ರವರು.ಶ್ರೀ ಮುರುಳಿ ರವರು.ಶ್ರೀ ಸಂತೋಷ್ ಕುಮಾರ್ ರವರು ಸೊಣ್ಣೆಗೌಡ್ರು ರವರು.ಶ್ರೀ ಮುನಿರಾಜು ರವರು. ಶ್ರೀ ಶ್ರೀನಿವಾಸ್ ರವರು. ಶ್ರೀ ಪ್ರಮೋದ್ ಕುಮಾರ್ (ಆರ್ ಎಸ್ ಪಮ್ಮಿ )ರವರು. ಶ್ರೀ ಜಯರಾಜಪ್ಪ ರವರು. ಶ್ರೀ ಚೇತನ್ ಕುಮಾರ್ ರವರು ಶ್ರೀ ರಾಮ್ ರವರು. ಶ್ರೀ ಭರತ್ ಸಂಭ್ರಮ್ ರವರು ಹಾಗೂ ಅಭಿಮಾನಿಗಳೊಂದಿಗೆ ಕಾರ್ಯಕ್ರಮವನ್ನು ಮೆರುಗಿನಿಂದ ನೆಡೆಸಿಕೊಟ್ಟರು
ಈ ಸಂದರ್ಭದಲ್ಲಿ ಡಾ ರಾಜ್ ಕುಮಾರ್ ರವರ ಹಾಗೂ ಡಾ ಪುನೀತ್ ರಾಜ್ ಕುಮಾರ್ ರವರ ಅಭಿಮಾನಿಗಳು ಹಾಗೂ ಕನ್ನಡ ಅಭಿಮಾನಿಗಳು ನಾಗರೀಕ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.