ಒಕ್ಕಲಿಗ ಮತ್ತು ಲಿಂಗಾಯತರಿಗೂ ಮೀಸಲಾತಿ ಹೆಚ್ಚಳ ಮಾಡುತ್ತಿರುವುದರಿಂದ ಜಾತಿ ಜನಗಣತಿ ವರದಿ ಸುಸೂತ್ರವಾಗಿ ಜಾರಿಯಾಗುತ್ತದೆ ಎನ್ನುವ ಕಾರಣಕ್ಕೆ ‘ಮುಸ್ಲಿಮರೇ ನಂಬರ್ 1, ಜನಗಣತಿ ಸರಿ ಇಲ್ಲ’ ಎನ್ನುವ ಪ್ರಪೋಗಂಡಾ ಮಾಡಲಾಗುತ್ತಿದೆ.

ಇದು ಮುಸ್ಲಿಮರ ವಿರುದ್ಧ ಇತರರನ್ನು ಎತ್ತಿಕಟ್ಟಿ ಜಾತಿ ಜನಗಣತಿ ವರದಿ ಜಾರಿ ತಡೆಯುವ ಷಡ್ಯಂತ್ರ.

ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ 1,16,89,533 (ಶೇಕಡಾ 19.55) ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ ನಂಬರ್ 1.

76,76,247 (ಶೇಕಡಾ 12.83) ಜನಸಂಖ್ಯೆ ಇರುವ ಮುಸ್ಲಿಮರು ನಂಬರ್ 2.

ಮೊದಲ ಮತ್ತು ಎರಡನೇ ಹೆಚ್ಚು ಜನಸಂಖ್ಯೆ ಇರುವ ಸಮುದಾಯಗಳ ನಡುವೆ 40,13,286 (ಶೇಕಡಾ 06.69) ಜನರ ಅಂತರವಿದೆ.

2011ರ ಜನಗಣತಿಯಲ್ಲಿ ಶೇಕಡಾ 12.92ರಷ್ಟಿದ್ದ ಮುಸ್ಲಿಂ ಜನಸಂಖ್ಯೆ ಈಗ ಶೇಕಡಾ 12.83ಕ್ಕೆ ಕುಸಿದಿದೆ.

ಮುಸ್ಲಿಂ ಎನ್ನುವುದು ಧರ್ಮ, ಪರಿಶಿಷ್ಟ ಜಾತಿಗಳು ಎನ್ನುವುದು ವರ್ಗ, ಧರ್ಮ ಮತ್ತು ವರ್ಗದ ನಡುವೆ ವ್ಯತ್ಯಾಸವೇ ಇಲ್ಲ ಎನ್ನುವಂತೆ ಎರಡನ್ನೂ ಒಂದೇ ಮಾಡಲಾಗುತ್ತಿದೆ.

ಇಷ್ಟೆಲ್ಲಾ ಇದ್ದರೂ ಮುಸ್ಲಿಮರೇ ನಂಬರ್ 1 ಎಂದು ಬಿಂಬಿಸಲಾಗುತ್ತಿದೆ.ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಚಾರ.ಆದರೆ ಕೆಲಮಾಧ್ಯಮಗಳು ಹಾಗೂ ಕೆಲ ಜನರ ಅಪಪ್ರಚಾರವೆಂದು ಮಾತುಗಳೂ ಕೇಳಿಬರುತ್ತಿವೆ.

LEAVE A REPLY

Please enter your comment!
Please enter your name here