“ಪತ್ರಿಕೆ” ಪದ ಸಣ್ಣದಲ್ಲ. ಇದರ ವಿವರಣೆಯೂ ಕೆಲವು ವಾಕ್ಯಗಳಲ್ಲಿ ಸಾಧ್ಯವಿಲ್ಲ. ಅದೀಗ ಮೂರ್ಖರ ಕೈಗೆ ಸಿಕ್ಕಿದೆ. ಪೆನ್ನನ್ನು ಹೇಗೆ ಹಿಡಿಯಬೇಕು ಎಂದು ಗೊತ್ತಿಲ್ಲದವರು, ಕುಳಿತು ಹತ್ತು ಶುದ್ಧ ವಾಕ್ಯ ರಚಿಸದವರು, ನಿರೂಪಣೆ ಗೊತ್ತಿಲ್ಲದವರು, ತಾವೇ ಪತ್ರಿಕೆ ಸರಾಗವಾಗಿ ಓದಲಿಕ್ಕೆ ಸಾಧ್ಯವಾಗದವರು ಪತ್ರಿಕೆ ಎನ್ನತೊಡಗಿದ್ದಾರೆ. ಮಾಮೂಲಿ ಜನಗಳ ವಿಷಯ ಬಿಡಿ, ಕನ್ನಡದಲ್ಲಿ ಪದವಿ ಪಡೆದವರದೂ ಇದೇ ಪರಿಸ್ಥಿತಿ ಇದೆ. ಆದರೂ ಪತ್ರಕರ್ತ ಅಂದುಕೊಳ್ಳುತ್ತಾರೆ, ವರದಿಗಾರ ಎಂದುಕೊಳ್ಳುತ್ತಾರೆ, ಸಂಪಾದಕ ಎಂದುಕೊಳ್ಳುತ್ತಾರೆ. ನನಗೆ ನಗು ಬರುತ್ತದೆ. ಕಳೆದ ಒಂದು ವರ್ಷದಿಂದ ನಾನು ಪತ್ರಿಕೆ ಪ್ರಕಟಿಸಲಿಲ್ಲ. ಕಾರಣ: ಅದನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಬೇಕಿತ್ತು, ಪ್ರತಿದಿನ ಅದಕ್ಕಾಗಿ ಒಂದು ಗಂಟೆ ಮೀಸಲಿಟ್ಟೆ. ಇದಕ್ಕೂ ಮುನ್ನ ಬರೆದಿದ್ದೇನೆ, ಬರೆಯುತ್ತಲೇ ಇದ್ದೇನೆ. ಅದು ನನ್ನ ಸ್ವಂತ ಮಾದರಿ ಸ್ವಂತ ಶೈಲಿಯಾಗಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅದು ಭಾವಲಹರಿಯಂತಿತ್ತು. ಎಷ್ಟೋಸಲ ನನ್ನ ಬರವಣಿಗೆಗಳನ್ನು ನಾನೇ ಓದಿ ಇದನ್ನು ಯಾವ ವರ್ಗೀಕರಣಕ್ಕೆ ಸೇರಿಸಲಿ ಎಂದು ಒದ್ದಾಡಿದ್ದೇನೆ. ಅದಿರಲಿ, ಪ್ರಸ್ತುತ ಪತ್ರಿಕೆ ಎನ್ನುವ ಪದ ಅರ್ಥ ಕಳೆದುಕೊಂಡಿದೆ. ಅದನ್ನು ಓದುವವರೂ ದಿಕ್ಕಿಲ್ಲ. ಓದುವವರು ದಿಕ್ಕಿಲ್ಲದಿರುವಾಗ ಅದನ್ನು ಪ್ರಕಾಶಿಸುವುದರಲ್ಲಿ ಯಾವ ಅರ್ಥವಿದೆ? ಒಂದು ಕಚೇರಿ ಇಲ್ಲದ, ಅಕ್ಷರ ಜ್ಞಾನವಿಲ್ಲದ, ಮುದ್ರಣಾಲಯ ಇಲ್ಲದ, ಪ್ರಸಾರವಿಲ್ಲದ…

ಒಬ್ಬನ್ಯಾವನೋ ಟೈಟಲ್ ಬದಲಿಸಿ ಪಿಡಿಎಫ್ ಮಾಡುತ್ತಾನೆ.
ಅದು ವಾಟ್ಸಪ್ಪಿನ ಗ್ರೂಪುಗಳಲ್ಲಿ ಹಂಚಿಕೊಳ್ಳಲಾಗುತ್ತದೆ.
ಅದನ್ನು ಪತ್ರಿಕೋದ್ಯಮ ಎಂದುಕೊಳ್ಳಲಾಗುತ್ತದೆ.

ನಾನು ನಗುತ್ತೇನಷ್ಟೇ!

ನೀವೂ ನಗಿ!

ಪತ್ರಿಕೋದ್ಯಮ ಈ ಕೆಳಗಿನ ಚಾರ್ಟ್‌ನಂತಿರುತ್ತದೆ, ಅದು ನಿಜವಾದ ಪತ್ರಿಕೋದ್ಯಮ.(ಸೋಷಿಯಲ್‌ ಮೀಡಿಯಾ ಕೃಪೆ)

LEAVE A REPLY

Please enter your comment!
Please enter your name here