ಆಲಮೇಲ- ಪಟ್ಟಣದ ವಿಶ್ವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಅಧ್ಯಕ್ಷರು ಹಾಗೂ ಸಮಾಜ ಸೇವಕರು ಶ್ರೀಶೈಲಪ್ಪ ಆಯ್. ಜೋಗೂರ ರವರಿಗೆ ಮೈಸೂರಿನ ಕನ್ನಡ ಸಾಹಿತ್ಯ ಭವನದ ನಾಲ್ವಡಿ ಕೃಷ್ಣರಾಜ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಸಾಂಸ್ಕೃತಿಕ ವೈಭವ ಸಮ್ಮೇಳನದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು .ಪ್ರಶಸ್ತಿಯನ್ನು ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್(ರಿ.) ಕರ್ನಾಟಕನ ಸಂಸ್ಥಾಪಕ ಅಧ್ಯಕ್ಷರು ಡಾ.ಜಿ.ಶಿವಣ್ಣ ,ಚಲನಚಿತ್ರ ನಟರು,ನಾಡು ನುಡಿ ಚಿಂತಕರು ಡಾ.ಚಿಕ್ಕಹೆಜ್ಜಾಜಿ ಮಹದೇವ, ಡಾ.ಆರೂಢ ಭಾರತೀ ಸ್ವಾಮಿಗಳು,ಸಮ್ಮೇಳನದ ಸರ್ವಾಧ್ಯಕ್ಷರು ಪಂಡಿತ ಅವಜಿ ,ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷರು ಮಡ್ಡಿಕೇರೆ ಗೋಪಾಲ ,ಚೇತನ ಫೌಂಡೇಶನ್ ನ ಅಧ್ಯಕ್ಷರು ಡಾ.ಚಂದ್ರಶೇಖರ ಮಾಡಲಗೇರಿ, ದತ್ತಿ ದಾನಿಗಳು ಲೂಸಿ ಸಾಲ್ಡಾನ ವಿತರಿಸಿದರು.
ಪ್ರಶಸ್ತಿ ಸ್ವೀಕರಿಸಿದಕ್ಕಾಗಿ ಸಂಸ್ಥೆಯ ಕಾರ್ಯದರ್ಶಿಗಳು ಪ್ರಶಾಂತ ಬಡದಾಳ, ಕೋಶಾಧ್ಯಕ್ಷರು ಅರವಿಂದ ಕುಲಕರ್ಣಿ, ಸದಸ್ಯರಾದ ಅಲೋಕ ಬಡದಾಳ,ಅಶೋಕ ವಾರದ,ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ,ಶಿಕ್ಷಕರಾದ ಚಂದ್ರಕಾಂತ ದೇವರಮನಿ,ಪ್ರಶಾಂತ ಗಡದೆ,ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸರುಬಾಯಿ ಬಂಡಗರ,ಸುನೀತಾ ಗುಂಡದ ವೀಣಾ ಗುಡಿಮಠ ಮುಂತಾದವರು ಹರ್ಷ ವ್ಯಕ್ತಪಡಿಸಿದ್ದಾರೆ