ವಿಜಯಪುರ :ಓಡಿಸ್ಸಾ ರಾಜ್ಯದ ಕೋನಾರ್ಕ್ ದ ಸೂರ್ಯ ದೇವಾಲಯದಂತೆ ಇತಿಹಾಸ ಪ್ರಸಿದ್ದವಾಗಿದ್ದ ವಿಜಯಪುರದ ಮೂಡಣ ಕೇರಿಯ ಸ್ವಯಂಭು ವಿನಾಯಕ ದೇವಸ್ಥಾನ ಹಾಗೂ ಸಂರಕ್ಷಿತ ಕೋಟೆಗೆ ಧಕ್ಕೆ ಉಂಟುಮಾಡಿ ಸಚಿವ ಎಂ ಬಿ ಪಾಟೀಲ ಅಧ್ಯಕ್ಷತೆಯ ಬಿ ಎಲ್ ಡಿ ಇ ಸಂಸ್ಥೆ ಅವರು ಅನಧಿಕೃತ ಕಟ್ಟಡ ನಿರ್ಮಿಸುವ ಮೂಲಕ ಹಿಂದು ಧಾರ್ಮಿಕ ಪರಂಪರೆ ಹಾಳು ಮಾಡಲು ಮುಂದಾಗಿರುವುದು ಖಂಡನೀಯ ಎಂದು ನ್ಯಾಯವಾದಿ ಸುಪ್ರೀತ ದೇಸಾಯಿ ಹೇಳಿದ್ದಾರೆ. ವಿಜಯಪುರ ನಗರದ ಮೂಡಣ ಕೇರಿಯಲ್ಲಿನ ಸಂರಕ್ಷಿತ ಕೋಟೆ ಹಾಗೂ ಹಿಂದು ದೇವಸ್ಥಾನದ ಪಾರಂಪರಿಕ ಕಟ್ಟಡ ಹಾಳು ಮಾಡಿ ಮಹಾನಗರ ಪಾಲಿಕೆ ಹಾಗೂ ಪುರಾತತ್ವ ಇಲಾಖೆಯಿಂದ ಯಾವುದೇ ಪರವಾನಿಗೆ ತೆಗೆದುಕೊಳ್ಳದೆ ಅಧಿಕಾರ ದುರುಪಯೋಗ ಮಾಡಿಕೊಂಡು ಬಿ ಎಲ್ ಡಿ ಇ ಸಂಸ್ಥೆ ಯಿಂದ ನಿರ್ಮಿಸುತ್ತಿರುವ ಅನಧಿಕೃತ ಕಟ್ಟಡ ಕಾಮಗಾರಿ ತಡೆ ಹಿಡಿದು 1958 ರ ಭಾರತೀಯ ಪುರಾತತ್ವ ಕಾಯ್ದೆ ಅಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ವಿಜಯಪುರ ಜಿಲ್ಲಾಧಿಕಾರಿ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ದೇವಗಿರಿ ಯಾದವ ಹಾಗೂ ಕಲಚೂರಿಗಳ ಕಾಲದಲ್ಲಿ ಸೂರ್ಯ ಕೇಂದ್ರಿತ ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಉತ್ಸವಗಳಿಗೆ ಹೆಸರುವಾಸಿಯಾಗಿದ್ದ ಧಾರ್ಮಿಕ ಕೇಂದ್ರವು ಇಂದು ಅತಿಕ್ರಮಣದಾರರ ಹಾವಳಿಯಿಂದ ಚಾಲುಕ್ಯರ ನಾಡಿನ ಐತಿಹಾಸಿಕ ಪರಂಪರೆಯ ದೇವಸ್ಥಾನ ಹಾಗೂ ಕೋಟೆಗೋಡೆ ಅವಸಾನದ ಅಂಚಿಗೆ ತಲುಪಿದೆ ಕೂಡಲೇ ಅದರ ಸಂರಕ್ಷಣೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ಹಿಂದು ಮುಖಂಡ ವಿಕಾಸ ಪದಕಿ ಅವರು ಮಾತನಾಡಿ ವಿಜಯಪುರ ನಗರದಲ್ಲಿ ಕಲ್ಯಾಣ ಚಾಲುಕ್ಯರ ಮತ್ತು ದೇವಗಿರಿ ಯಾದವರ ಕಾಲಕ್ಕೆ ಸೇರಿದ ಉಪಲಬ್ದ ಇರುವ ಸುಮಾರು 7 ಶಾಸನಗಳಲ್ಲಿ ದಕ್ಷಿಣ ವಾರಣಾಸಿ ವಿಜಯಾಪುರ ಎಂದು ಕರೆಯಲಾಗಿದೆ.ಇಂತಹ ದಕ್ಷಿಣ ವಾರಣಾಸಿ ಕ್ಷೇತ್ರ ಇರುವ ಸಂರಕ್ಷಿತ ಪ್ರದೇಶವನ್ನು ಕರ್ನಾಟಕ ಸರಕಾರದ ಬೃಹತ್ ಮಧ್ಯಮ ಕೈಗಾರಿಕೆ ಮೂಲಭೂತ ಸೌಕರ್ಯ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅಧ್ಯಕ್ಷತೆಯ ಬಿ ಎಲ್ ಡಿ ಇ ಸಂಸ್ಥೆ ಅವರು ಅತಿಕ್ರಮಣ ಮಾಡಿಕೊಂಡು ಸಂರಕ್ಷಿತ ಸ್ಮಾರಕ ಹಾಳು ಮಾಡಿ ಅನಧಿಕೃತ ಕಟ್ಟಡ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಕೂಡಲೇ ಅನಧಿಕೃತ ಕಟ್ಟಡ ಕಾಮಗಾರಿ ತೆರುವುಗೊಳಿಸಿ ಸಂರಕ್ಷಿತ ಸ್ಮಾರಕ ರಕ್ಷಣೆ ಮಾಡಬೇಕೆಂದು ಅವರು ಆಗ್ರಹಿಸಿದ ಅವರು ಕಲ್ಯಾಣ ಚಾಲುಕ್ಯರು, ದೇವಗಿರಿ ಯಾದವರು ಸೇರಿದಂತೆ ತರ್ದವಾಡಿ ನಾಡಿನ ಪ್ರಮುಖರು ವಿವಿಧ ದೇವಸ್ಥಾನದ ಉತ್ತರೋತ್ತರ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಹೋಗಲು ಹಲವು ದಾನ -ದತ್ತಿ ನೀಡಿರುವುದನ್ನು ಶಾಸನಗಳ ಮೂಲಕ ತಿಳಿದು ಬರುತ್ತದೆ. ಇದು ಅವರ ಧಾರ್ಮಿಕ ಶ್ರದ್ಧೆಗೆ ಹಿಡಿದ ಕೈಗನ್ನಡಿಯಾಗಿದೆ ರಾಜ ಮಹಾರಾಜರಂತೆ ಮಾದರಿ ಆಗಬೇಕಾಗಿದ್ದ ಪ್ರಭಾವಿ ಸಚಿವರಿಂದ ಹಿಂದು ದೇವಸ್ಥಾನ ಹಾಳಾಗುತ್ತಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ ಚಾಲುಕ್ಯರ ಕಾಲದಲ್ಲಿ ಕೇಂದ್ರವೆಂದರೆ ದಕ್ಷಿಣ ವಾರಣಾಸಿ ವಿಜಯಪುರದ ಸ್ವಯಂಭು ವಿನಾಯಕ ದೇವಸ್ಥಾನ ಇಂತಹ ದೇವಸ್ಥಾನ ನಾಶ ಮಾಡಲು ಹೊರಟಿರುವ ಬಿ ಎಲ್ ಡಿ ಇ ಸಂಸ್ಥೆ ಮತ್ತು ಸಚಿವ ಎಂ ಬಿ ಪಾಟೀಲರಿಗೆ ಶೋಭೆ ತರುವ ಕೆಲಸವಲ್ಲ. ಕೂಡಲೇ ಹಿಂದು ವಿರೋಧಿ ಕಾರ್ಯ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here