ಬೆಂಗಳೂರು: 1ನೇ ತರಗತಿಗೆ ಮಕ್ಕಳನ್ನು ಸೇರ್ಪಡೆ ಮಾಡಲು ವಯೋಮಿತಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಈ ಕುರಿತು ಮಾತನಾಡಲೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ನಿವಾಸಕ್ಕೆ ಪೋಷಕರು ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವರನ್ನ ಜೊತೆಗೆ ಕರೆದುಕೊಂಡು ಬಂದಿದ್ದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಿಡಿಮಿಡಿಗೊಂಡಿದ್ದಾರೆ.

ಮಕ್ಕಳ ಪೋಷಕರ ಜೊತೆ ಮಾಧ್ಯಮದವರನ್ನು ನೋಡುತ್ತಿದ್ದಂತೆ ಫುಲ್ ಗರಂ ಆದ ಸಚಿವ ಮಧು ಬಂಗಾರಪ್ಪ, ನಿಮ್ಮನ್ನು ಕರೆದಿದ್ದು ಯಾರು, ನೀವು ಏಕೆ ಇಲ್ಲಿಗೆ ಬಂದ್ರಿ ಎಂದು ಉಡಾಫೆಯಾಗಿ ಕೂಗಾಡಿದ್ದಾರೆ. ಪೋಷಕರ ಜೊತೆಗೆ ಮಾಧ್ಯಮದವರು ಬಂದರೆ RUBBISH ಎನ್ನುವ ಪರ ಬಳಕೆ ಮಾಡಿದ್ದಾರೆ. ಮೀಡಿಯಾದವರನ್ನು ಕರೆದುಕೊಂಡು ಬಂದಿದ್ದೀರಿ. ಅವರ ಜೊತೆ ನೀವೇ ಮಾತನಾಡಿ ಎಂದಿದ್ದಾರೆ.
ಎನ್​ಇಪಿ ಅಡಿ ನೋಂದಣಿಗೊಂಡ ಮಕ್ಕಳ ಪೋಷಕರು, ಎನ್​ಇಪಿ ನಿಯಮದ ಪ್ರಕಾರವೇ ಪ್ರೀ ಸ್ಕೂಲ್​ನಲ್ಲಿ‌ ಮಕ್ಕಳನ್ನ ದಾಖಲು‌‌ ಮಾಡಿದ್ದೇವೆ. ಐದು ವರ್ಷ ಆರು ತಿಂಗಳು ಇರುವ ಮಕ್ಕಳಿಗೆ 1ನೇ ತರಗತಿಗೆ ಅವಕಾಶ ಮಾಡಿ ಎಂದು ಪೋಷಕರು ಮನವಿ ಮಾಡಿದ್ದಾರೆ. ಸೆಪ್ಟೆಂಬರ್​ನಿಂದಲೂ ಪೋಷಕರ ಹೋರಾಟ ಮಾಡುತ್ತಿದ್ದಾರೆ. ವಯೋಮಿತಿ ಗೊಂದಲವನ್ನು ಬಗೆಹರಿಸಿಕೊಡಿ, ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎಂದು ಕೇಳಿಕೊಂಡರೂ ಸಚಿವರು ಸರಿಯಾದ ಉತ್ತರನೇ ಕೊಡುತ್ತಿಲ್ಲವಂತೆ.

ಏನಿದು ಗೊಂದಲ..?
ಶಿಕ್ಷಣ ಇಲಾಖೆಯು 2022ರಲ್ಲಿ ಒಂದು ಆದೇಶ ಹೊರಡಿಸಿತ್ತು. ಜೂನ್ 1 ರಿಂದ ಶೈಕ್ಷಣಿಕ ವರ್ಷ ಆರಂಭ ಆಗೋದು ವಾಡಿಕೆ. ಈ ಅವಧಿಯಲ್ಲಿ ಅಂದರೆ ಜೂನ್ 1 ರಿಂದ 1ನೇ ತರಗತಿಗೆ ಅಡ್ಮಿಷನ್​​​ ಮಾಡಿಸಿಕೊಳ್ಳಲು ಮಗುವಿಗೆ 6 ವರ್ಷ ತುಂಬಿರಬೇಕು ಎಂದು ಆದೇಶ ನೀಡಿತ್ತು. ಇದರಿಂದ ಮಗುವಿಗೆ 6 ವರ್ಷ ತುಂಬಲು ಒಂದೆರಡು ದಿನ ಕಡಿಮೆ ಇದ್ದರೂ ಅಡ್ಮಿಷನ್ ಭಾಗ್ಯ ಸಿಗುತ್ತಿರಲಿಲ್ಲ. ಪರಿಣಾಮ ಮುಂದಿನ ಜೂನ್ 1ರವರೆಗೆ ವಿದ್ಯಾರ್ಥಿ ಅಡ್ಮಿಷನ್​​ಗಾಗಿ ಕಾಯಬೇಕಾಗಿತ್ತು. ಇದು ಮಗುವಿನ ಕಲಿಕೆ ಮೇಲೂ ಹೊಡೆತ ಬೀಳುತ್ತಿತ್ತು. ಜೊತೆಗೆ ಆ ಒಂದು ವರ್ಷ ಕಾಲ ವ್ಯರ್ಥ ಆಗುತ್ತದೆ.

ಈ ಸರ್ಕಾರಕ್ಕೆ ಮಕ್ಕಳ ಭವಿಷ್ಯ ಮುಖ್ಯವಲ್ಲಾ.ಯಾವುದ್ಯಾವುದಕ್ಕೋ ಕಾನೂನು ತಿದ್ದುಪಡಿ ಮಾಡ್ತಾರೆ ಆದರೆ ಮಕ್ಕಳ ಭವಿಷ್ಯದ ಕುರಿತು ಚಿಂತನೆಯಿಲ್ಲಾ.ಕೂಡಲೇ ಶಾಲಾದಾಖಲಾತಿಗಾಗಿ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಮುಖ್ಯಮಂತ್ರಿ ಯವರು ಕ್ರಮ ಕೈಗೊಳ್ಳಬೇಕೆಂದು ಮಕ್ಕಳ ಪೋಷಕರ ಆಗ್ರಹವಾಗಿದೆ

LEAVE A REPLY

Please enter your comment!
Please enter your name here