ತುಮಕೂರು:ತುಮಕೂರು ಜಿಲ್ಲೆಯ ಬಿದರಕಟ್ಟೆ ಗ್ರಾಮದಲ್ಲಿರುವ ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವು ಇಂದು ಲೋಕಾರ್ಪಣೆಗೊಂಡಿತು.
ವಿದ್ಯಾರ್ಥಿಗಳು ಹಾಗೂ ಯುವ ಜನತೆಯಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ತುಮಕೂರು ವಿಶ್ವವಿದ್ಯಾನಿಲಯದ ಬಿದರಕಟ್ಟೆ ನೂತನ ಕ್ಯಾಂಪಸ್‌ನಲ್ಲಿ 5 ಏಕರೆ ಜಾಗದಲ್ಲಿ ಉಪ – ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. 4 ಕೋಟಿ ರೂಪಾಯಿಗಳ ವೆಚ್ಚದಲ್ಲಿ, ಉಪ – ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಟ್ಟಡ ನಿರ್ಮಿಸಲಾಗಿದೆ. 18 ಲಕ್ಷದ ವೆಚ್ಚದಲ್ಲಿ ಹೊರಾಂಗಣ ಪ್ರಾತ್ಯಕ್ಷತೆಗಳನ್ನು, 55 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಒಳಾಂಗಣ ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ಅಳವಡಿಸಲಾಗಿದೆ.
“ತುಮಕೂರು ಉಪ – ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು, ಮುಂದಿನ ದಿನದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನಾಗಿ ಉನ್ನತೀಕರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಹಾಗೆಯೇ, ಈ ಕೇಂದ್ರದ ಆವರಣದಲ್ಲಿ ತಾರಾಲಯ ನಿರ್ಮಿಸಲಾಗುವುದು. ಈ ಕೇಂದ್ರದ ಅಭಿವೃದ್ದಿಗೆ ನಮ್ಮ ಸರಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ” ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜ್ ತಿಳಿಸಿದ್ದಾರೆ.