ಬೆಂಗಳೂರು:ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ನಗರದ ಹೃದಯ ದಂತಿರುವ ರಾಜಾಜಿನಗರವು ಸರ್ವ ಜಾತಿ,ಧರ್ಮ,ಭಾಷೆಗೆಗಳ ಸಂಗಮವಾಗಿದೆ. ಈ ಪ್ರತಿಷ್ಠಿತ ಬಡಾವಣೆಯಲ್ಲಿ ಡಾಕ್ಟರ್ ರಾಕಕುಮಾರ್ ರಸ್ತೆ ಮತ್ತು ಪುತ್ಥಳಿ ಹಾಗೂ ಪುನೀತ್ ರಾಜಕುಮಾರ್ ಪುತ್ಥಳಿ,ಡಾಕ್ಟರ್ ವಿಷ್ಣುವರ್ಧನ್ ರವರ ಪುತ್ಥಳಿಗಳುಸೇರಿದಂತೆ ಹಲವಾರು ಮಹಾನ್ ದಾರ್ಶನಿಕರ,ಕಲಾವಿದರ,ಕವಿಗಳ ಹೆಸರುಗಳು,ಪುತ್ಥಳಿಗಳು,ವೃತ್ತಗಳನ್ನು ಕಾಣಬಹುದು. ಇದಲ್ಲದೆ ಮುಖ್ಯವಿಷಯಕ್ಕೆ ಬರುವುದಾದರೆ ರಾಜಾಜಿನಗರದ ಶ್ರೀ ರಾಮಮಂದಿರವು ಈ ಪ್ರದೇಶಕ್ಕೆ ಕಳಸವಿದ್ದಂತೆ.ಇಲ್ಲಿ ಹತ್ತು ಹಲವಾರು ಪ್ರಗತಿಪರರು,ಚಿಂತಕರು,ಪತ್ರಕರ್ತರು,ರಾಜಕೀಯ ಪಕ್ಷಗಳ ಕಾರ್ಯಕರ್ತರು,ಕಲಾಭಿಮಾನಿಗಳು,ಸಮಾಜಿಕ ಕಾರ್ಯಕರ್ತರು ಎಲ್ಲರೂ ಯಾವುದೇ ತಾರತಮ್ಯಗಳಿಲ್ಲದೆ ಪ್ರತಿದಿನ ಸಂಜೆ ಇದೇ ರಾಮಮಂದಿರದ ಹತ್ತಿರ ಪರಸ್ಪರರು ಅನ್ಯೋನ್ಯತೆಯಿಂಬ ಮಾತಾಡ್ತಾ ಹಸ್ತಲಾಘವಮಾಡ್ತ ತಮ್ಮ ಕುಶಲೋಪಚರಿ ಮಾತಾಡ್ತಾ ಇರ್ತಾರೆ.
ಇಲ್ಲಿ ಶ್ರೀ ರಾಮಮಂದಿರದ ಬಳಿ ಬೃಹತ್ ಗಾತ್ರ ಎತ್ತರದ ಶ್ರೀ ರಾಮನ ವಿಗ್ರಹವನ್ನು ಪ್ರತಿಸ್ಥಾಪಿಸಿದ್ದಾರೆ.ಆದರೆ ರಾಮಾಯಣ ಬರೆದು ಶ್ರೀ ರಾಮಚಂದ್ರನ ಇತಿಹಾಸ ಸೃಷ್ಟಿಸಿದ ಐತಿಹಾಶಿಕ ಋಷಿಮುನಿ ಶ್ರೀ ವಾಲ್ಮೀಕಿ ಮಹರ್ಷಿಯ ಪುತ್ಥಳಿ ಈ ಭಾಗದಲ್ಲಿಲ್ಲದಿರುವುದು ಅತ್ಯಂತ ನೋವಿನ ವಿಷಯ. ಆದ್ದರಿಂದ ಈ ಭಾಗದ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಲಕ್ಷ್ಮೀಪತಿಯವರು ಈ ಭಾಗದ ಸರ್ವಜನರ ಸದಭಿಪ್ರಾಯದಂದೆ ಶ್ರೀ ರಾಮಮಂದಿರದ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯನ್ನು ಪ್ರತಿಷ್ಠಾನ ಮಾಡಿ ಶ್ರೀ ರಾಮಚಂದ್ರನ ಕೃಪೆಗೆ ಪಾತ್ರರಾಗಲೆಂದು ಸಂಬಂಧಿಸಿದ ಶ್ರೀ ರಾಮಮಂದಿರದ ಆಡಳಿತ ಮಂಡಳಿಯಾಗಲಿ ಅಥವಾ ಬಿಬಿಎಂಪಿಯಾಗಲಿ,ಸಂಘಸ್ಥೆಗಳಾಗಲಿ ಅಥವಾ ಶಾಸಕರೇ ಆಗಲಿ ಈ ಸಾರ್ವಜನಿಕರ ಅಭಿಪ್ರಾಯಕ್ಕೆ ಗೌರವಿಸಿ ಕೂಡಲೇ ಶ್ರೀ ರಾಮಮಂದಿರದ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ನಿರ್ಮಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಶ್ರೀ ಲಕ್ಷ್ಮೀಪತಿಯವರು ವಿನಂತಿಸಿದ್ದಾರೆ.
Home ಸಾರ್ವಜನಿಕ ಧ್ವನಿ ರಾಜಾಜಿ ನಗರದ ಶ್ರೀ ರಾಮಮಂದಿರದ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆ ಇಡವಂತೆ ಶ್ರೀ ಲಕ್ಷ್ಮೀಪತಿಯವರಿಂದ ಮನವಿ