ವಿಜಯಪುರ: ದೇಶದಲ್ಲಿ ಮೂಲದಲ್ಲಿ ಬುಡಕಟ್ಟು ಜನಾಂಗ ಇರುವದರಿಂದ ಅವಗಳಲ್ಲಿ ನಾಥ.ಸಿದ್ಧ.ನಾಗ.ಅಘೋರಿ.ಕಾಳಾಮುಖ.ಪಾಶುಪತ ಹಲವಾರು ಜೀವನ ಪದ್ಧತಿ ಅನುಸರಿಸಿ ಬದುಕುತ್ತಿದ್ದರು. ಅವರದೇ ಆದ ನಂಬುಗೆ.ಪದ್ಧತಿ.ಪೂಜಾ ವಿಧಾನ. ಶಿವ ಮತ್ತು ಶಕ್ತಿಯನ್ನೂ ಪೂಜಿಸುತ್ತಿದ್ದರು.ಈ ದೇಶಮೂಲ ನಿವಾಸಿ ದ್ರಾವಿಡರದಾದ ಕಾರಣ ಇವರ ಮೇಲೆ ಆರ್ಯರ ವೈದಿಕ ಪರಂಪರೆಯ ಜನ ಆಕ್ರಮಣ ಮಾಡಿ. ಸಂಸ್ಕಾರ ಸಂಸ್ಕೃತಿ ಆಚಾರ ವಿಚಾರ ಬದಲಾದವು. ಮೂಲ ನಿವಾಸಿ ದ್ರವಿಡರನ್ನು ಶುದ್ರತ್ವಕ್ಕೆ ತಳ್ಳಿ ಅವರ ನಂಬಿದ ದೇವರು. ರಾಜರನ್ನು ರಾಕ್ಷಸರನ್ನು ಮಾಡಿ ಕಥೆ ಪುರಾಣ ಇತಿಹಾಸ ಸಂಸ್ಕೃತದಲ್ಲಿ ರಚಿಸಿ ತಮ್ಮ ಹಿರಿಮೆ ಹೆಚ್ಚಿಸಿಕೊಂಡರು.ಇದರಿಂದ ಬೇಸತ್ತ ಆರ್ಯರ ವೈದಿಕ ಪರಂಪರೆಯ ಆಚರಣೆಗಳಿಗೆ ಕಂದಾಚಾರ ಮೌಡ್ಯ ಗಳಿಂದ ಜನರನ್ನು ರಕ್ಷಿಸಲು ಬೌದ್ಧ.ಜೈನ.ಸಿಖ್.ಲಿಂಗಾಯತ ಧರ್ಮ ಉದಯಿಸಿದವು.ಮೊಘಲರ ಬ್ರಿಟಿಷರ ಆಗಮನದೊಂದಿಗೆ ಇಸ್ಲಾಂ.ಕ್ರೈಸ್ತ ಧರ್ಮ ಬಂದವು. ರೇವಣಸಿದ್ಧರು ಹಾಲುಮತ ಮೂಲ ಪುರುಷರು ಪಶು. ಕುರಿ ಪಾಲಕರು. ಶಿವ ಭಕ್ತರು.ಬಸವಾದಿ ಶರಣರ ಹಿರಿಯ ಸಮಕಾಲೀನರು.ಬಸವನ್ನನವರಿಂದ ಲಿಂಗ ದೀಕ್ಷೆ ಪಡೆದು ಶರಣಪರಂಪರೆಯಲ್ಲಿ ಪತ್ನಿ ರೆಕವ್ವ ರೊಂದಿಗೆ ವಚನ ಸಾಹಿತ್ಯ ರಚಿಸಿದವರು. ಇವರ ಮಗ ರುದ್ರಮುನಿ ವಚನ ಸಾಹಿತ್ಯ ರಕ್ಷಣೆ ಮಾಡಿದ ಶ್ರೇಷ್ಟ ವೀರ ಶರಣ. ಸುಮಾರು 14ನೆಯ ಶತಮಾನದಲ್ಲಿ ಆಂಧ್ರದ ಆರಾಧ್ಯ ಪರಂಪರೆಯ ಲಿಂಗಿ ಬ್ರಾಹ್ಮಣರ ಪ್ರಭಾವದಿಂದ. ಕೆಲವು ಶೈವ ಸಂಪ್ರದಾಯದವರು ಸುಳ್ಳು ಸಿದ್ದಾಂತ ಶಿಖಾಮಣಿ ಗ್ರಂಥ ರಚಿಸಿ.ಲಿಂಗೋ ದ್ಭವ ಪಂಚಾಚಾರ್ಯರ ಕಥೆ ಕಟ್ಟಿ ವೈದಿಕರ ಹುನ್ನಾರದಿಂದ ಬಸವಾದಿ ಶರಣರ ತತ್ವ ಸಿದ್ದಾಂತ ಚಂತನೆಗಳನ್ನು ಬಗ್ಗು ಬಡಿಯಲು ಒಳಗೆ ನುಸುಳಿ 12ನೆಯ ಶತಮಾನದಿಂದ 21ನೆಯ ಶತಮಾನದವರೆಗೆ ಕಾಡುತ್ತ ಲಿಂಗಾಯತರಿಗೆ ಈ ವೈದಿಕ ಪರಂಪರೆಯ ವೀರಶೈವರು ಲಿಂಗಾಯತರಿಗೆ ಬೆನ್ನು ಬಿಡದ ಬೆತಾಳವಾಗಿದ್ದಾರೆ. ಹಾಲು ಮತದಲ್ಲಿ ಲಿಂಗ ದೀಕ್ಷೆ ಪಡೆದವರು ಲಿಂಗಾಯತರು ಎಂದಾದರೆ.ಇನ್ನೂ ಮಹಾರಾಷ್ಟ್ರದಲ್ಲಿ ಧನಗರ ಎಂದು ಕರೆಯಲ್ಪಡುತ್ತಾರೆ. ಅಪಾರ ಶಿವ ಭಕ್ತರು. ಮತ್ತು ಶಕ್ತಿದೇವತೆ ಅಂಬಾ ಭವಾನಿಯ ಆರಾಧಕರು. ಅಹಲ್ಯಾ ಬಾಯಿ ಹೋಲ್ಕರ. ಶಿವಾಜಿ ಮಹಾರಾಜ. ಶಾಹು ಮಹಾರಾಜರು ಮುಂತಾದವರನ್ನು ಹೆಸರಿಸಬಹುದು