ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ 54,964 ಕೋಟಿ ವೆಚ್ಚದಲ್ಲಿ ಡಬಲ್ ಡೆಕರ್ ಹಾಗೂ ಟನಲ್ ರಸ್ತೆ ನಿರ್ಮಾಣ ವಿಚಾರವಾಗಿ ಪ್ರಶ್ನೆ.
ಈ ಯೋಜನೆಗೆ ಹಣಕಾಸು ವ್ಯವಸ್ಥೆಗೆ ಸರ್ಕಾರ ಏನು ಯೋಜನೆ ಮಾಡಿದೆ.?
ಡಿಸಿಎಂ ಡಿಕೆಶಿ ಉತ್ತರ.
ನಮ್ಮ ಜನಸಂಖ್ಯೆ ಹೆಚ್ಚಿದೆ.ನಾನು ಈ ಇಲಾಖೆ ಜವಾಬ್ದಾರಿಯಾಗಿ ತೆಗೆದುಕೊಂಡಿದ್ದೇನೆ.70ಲಕ್ಷ ಇದ್ದ ಜನಸಂಖ್ಯೆ, 1.40 ಕೋಟಿಗೆ ಹೋಗಿದೆ.ನಮ್ಮ ರಸ್ತೆ ಓಲ್ಡ್ ದೆಹಲಿ ತರ ಇಲ್ಲ.ಮಲ್ಲೇಶ್ವರ, ಬಸವನಗುಡಿ ಒಂದಷ್ಟು ಪ್ಲಾನ್ ರಾಸ್ತೆ ಇದೆ.ನೈಸ್ ಸಂಸ್ಥೆ ರಸ್ತೆ ಮಾಡಿರೋದ್ರಿಂದ ನಮಗೆ ಕೊಂಚ ಅನುಕೂಲ ಆಗಿದೆ.ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಮಾಡಿ ಜೀವ ಕೊಡಲು ಮುಂದಾಗಿದ್ದೇವೆ.ಜಾರ್ಜ್ ಅವರು ಸ್ಟೀಲ್ ಬ್ರಿಡ್ಜ್ ಮಾಡಲು ಮುಂದಾದ್ರು, ವಿರೋಧ ಆಗಿದ್ರಿಂದ ಸಮಸ್ಯೆ ಆಗಿದೆ.ಈಗ ಟನಲ್ ರಸ್ತೆ ಮಾಡಲು ನಿರ್ಧಾರ ಮಾಡಿದ್ದೇವೆ.
ನಾರ್ತ್ ಸೌಥ್ ಎಸ್ಟೀಮ್ ಮಾಲಿಂದ, ಸಿಲ್ಕ್ ಬೋರ್ಡಿಗೆ ಟನಲ್ ಮಾಡಲು ಸಾಲ ಮಾಡ್ತಿದ್ದೇವೆ.
ಈಸ್ಟ್ ವೆಸ್ಟ್ ಟನಲ್ ಕೂಡ ಮಾಡುವ ಪ್ಲಾನ್ ಇದೆ.ಎಲಿವೇಟೆಡ್ ಕಾರಿಡಾರ್, ಡಬಲ್ ಡಕ್ಕರ್ ರಸ್ತೆ ಕೂಡ ಮಾಡ್ತಿದ್ದೇವೆ.ಎಲ್ಲಾ ಹೈವೆಗಳಿಂದ ಬಂದು, ಬೆಂಗಳೂರಲ್ಲಿ ಜಾಮ್ ಆಗ್ತಿದೆ.ಅದಕ್ಕಾಗಿ ಎಲಿವೇಟೆಡ್ ಕಾರಿಡಾರ್ ಮಾಡುವ ಪ್ಲಾನ್ ಇದೆ.3 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದು, ಜಾಗ ಅಕ್ವೈರ್ ಮಾಡ್ತಿದ್ದೇವೆ.
50 ಮೀಟರ್ ಬಫರ್ ಝೋನ್ಅಡ್ತಿದ್ದೇವೆ.
ಅಲ್ಲಿ ಯಾರೂ ಏನನ್ನೂ ಕಟ್ಟಡ ಕಟ್ಟುವಂತಿಲ್ಲ.
ಆ ಜಾಗಕ್ಕೆ TDR ಕೂಡ ಕೊಡ್ತಿದ್ದೇವೆ.300ಕಿ.ಮೀ ಹೊಸ ರಸ್ತೆ ನಿರ್ಮಾಣ ಮಾಡಲಿದ್ದೇವೆ.ಹೆಬ್ಬಾಳ to ಹೆಣ್ಣೂರು ರಸ್ತೆಗೆ ಪ್ಲಾನ್ ಇದೆ.ವೈಟ್ ಟಾಪಿಂಗ್ ರಸ್ತೆ ಮಾಡುತ್ತೇವೆ.ಈ ವರ್ಷ 9 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ.ಸ್ಟಾರ್ಮ್ ವಾಟರ್ ಲೇನ್ ಕೂಡ ಮಾಡುತ್ತಿದ್ದೇವೆ.
ಇದೆಲ್ಲಾ ಜನರಿಗೆ ಅನುಕೂಲ ಆಗಲಿದೆ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ.