ಭಾರತದ ಶುದ್ಧ ಇಂಧನ ಸಾಗಣೆಯ ವಿಶಾಲ ದೃಷ್ಟಿಕೋನದ ಭಾಗವಾಗಿ, ರೈಲ್ವೆಯು 2023-24ರಲ್ಲಿ 35 ಹೈಡ್ರೋಜನ್ ಇಂಧನ ಕೋಶ ಆಧಾರಿತ ರೈಲುಗಳನ್ನು ಅಭಿವೃದ್ಧಿಪಡಿಸಲು 2,800 ಕೋಟಿ ರೂ.ಗಳನ್ನು ಹಂಚಿಕೆ ಮಾಡಿತ್ತು.
ಈ ಅದ್ಭುತ ಕ್ರಮವು ಸುಸ್ಥಿರ ಸಾರಿಗೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಶುದ್ಧ ಇಂಧನ ಮೂಲಗಳನ್ನು ಅಳವಡಿಸಿಕೊಳ್ಳುವ ಭಾರತದ ಬದ್ಧತೆಯ ಪರಿಚಯ ಮಾಡಿಕೊಡುತ್ತದೆ
ಹೈಡ್ರೋಜನ್ ರೈಲುಗಳು, ಪರಿಸರ ಸ್ನೇಹಿ ರೈಲು ಸಾರಿಗೆಯ ಭವಿಷ್ಯದ ಪ್ರತೀಕದಂತಿವೆ. ಏಕೆಂದರೆ ಅವು ಹೈಡ್ರೋಜನ್ ಇಂಧನ ಕೋಶಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತವೆ, ನೀರು ಮತ್ತು ಶಾಖವನ್ನು ಮಾತ್ರ ಉತ್ಪಾದಿಸುತ್ತವೆ. ಸಾಂಪ್ರದಾಯಿಕ ಡೀಸೆಲ್ ರೈಲುಗಳಿಗಿಂತ ಭಿನ್ನವಾಗಿ, ಈ ರೈಲುಗಳು ಇಂಗಾಲದ ಹೊರಸೂಸುವಿಕೆ ಮತ್ತು ಶಬ್ದ ಮಾಲಿನ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ, ಇದು ಪ್ರಯಾಣಿಕರ ಪ್ರಯಾಣಕ್ಕೆ ಸ್ವಚ್ಛ ಪರ್ಯಾಯವಾಗಿದೆ.
ಇದು ಭಾರತದ ಅತ್ಯಂತ ಸುಧಾರಿತ ರೈಲುಗಳಲ್ಲಿ ಒಂದಾಗಿದೆ. ರೈಲು ಗಂಟೆಗೆ 110 ಕಿ.ಮೀ ಗರಿಷ್ಠ ವೇಗದಲ್ಲಿ ಪಯಣಿಸುತ್ತದೆ. 2,638 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ ಈ ರೈಲು 1,200 ಎಚ್ ಪಿ ಎಂಜಿನ್ ಅನ್ನು ಹೊಂದಿರುತ್ತದೆ, ಇದು ವಿಶ್ವದ ಅತಿ ಹೆಚ್ಚು ಸಾಮರ್ಥ್ಯದ ಹೈಡ್ರೋಜನ್ ಚಾಲಿತ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ(Mallikarjun reddy Facebook)