ಕಲಬುರ್ಗಿ: ಆದಿ ಬಣಜಿಗ ಸಮಾಜದವರು ಪುರಾತನ ಕ್ರಿಸ್ತಶಕ 4 – 5 ನೇ ಶತಮಾನದಿಂದಲೂ ಕೃಷಿ ಕಾಯಕ ಮಾಡುತ್ತಾ ಬಂದಿರುವ ಸಮಾಜ ಜ್ಯೋತಿಗೆ ಶಿವನ (ಪರಮಾತ್ಮನ) ಆರಾಧಕರು ಶಿವನ ವಾಹನ ನಂದಿಯ ಆಂಶಿಕ ಪಶುಗಳ ಪಾಲಕರು ಆದಿಶಕ್ತಿ ಕುಲದೇವತೆ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿಯನ್ನು ಪೂಜಿಸುವರು ಇದೇ ರೀತಿ ಚಿತ್ತಾಪುರದ ಪ್ರಸಿದ್ದ ನಾಗಾವಿ ಶ್ರೀ ಯಲ್ಲಮ್ಮ ದೇವಿಯ ಕೋಳಕೂರ ರೇಣಕಾ ಯಲ್ಲಮ್ಮ ದೇವಿಯ ಆರಾಧಕರು ಜೊತೆಗೆ ಇಟಗಾ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನದ ಜಮೀನು ಆದಿ ಬಣಜಿಗರ ಹೆಸರಿನಲ್ಲಿ ಇರುವುದು ಕೂಡಾ ಅತ್ಯಂತ ಮಹತ್ವದ ವಿಷಯ ಸಮಾಜವು ತನ್ನದೇ ಆದ ಇತಿಹಾಸ ಹೊಂದಿದೆ ಲಿಂಗಾಯತ ವೀರಶೈವ ಒಳಪಂಗಡಗಳ ಏಳಿಗೆಯನ್ನು ಬಯಸುವ ಗುಣ ಸಮಾಜವು ಹೊಂದಿದೆ ಬಂಧುಗಳು ಸಂಸ್ಕಾರದ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವ ಮೂಲಕ ಉನ್ನತಿ ಸಾಧಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಸಮಾಜದವರು ಲಿಂಗ ಭೇದವನ್ನು ಪರಿಗಣಿಸದೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ವ್ಯಾಖ್ಯಾ ಘೋಷಣೆಯೊಂದಿಗೆ ಪುರುಷರು ಮಹಿಳೆಯರು ಸಮಾನರೆಂದು ಸಾರಿ ಸಾರಿ ಹೇಳಬೇಕು ಮಗನಂತೆ ಮಗಳಿಗೂ ಉನ್ನತ ಶಿಕ್ಷಣ ನೀಡಿದಾಗ ಗಂಡು ಹೆಣ್ಣು ಭೇದವನ್ನು ತೊಡೆದು ಹಾಕಬೇಕು ಸಮಾಜದ ಅಧಿಕಾರಿಗಳ ವರ್ಗ ರಾಜಕೀಯ ಮುಖಂಡರು ಸರ್ಕಾರದಿಂದ ಸಿಗುವ ನ್ಯಾಯಯುತ ಸವಲತ್ತುಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಲು ಮುಂದಾಗಬೇಕಾದ ಅಗತ್ಯತೆ ಇದೆ ಸುಮಾರು 2000 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಆದಿ ಸಮಾಜವು ಇಲ್ಲಿವರೆಗೂ ಕಾಣಬೇಕಾದ ಅಭಿವೃದ್ದಿ ಹೊಂದಿರುವುದಿಲ್ಲ ಮೂಲತ ನಾವು ಕೃಷಿಕರು ಪಶು ಪಾಲಕರು ಶಿವನ ಆರಾಧಕರು ಮತ್ತು ಪಂಚಪೀಠಕ್ಕೂ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ ಪ್ರಸ್ತುತ ಪ್ರಬಲ ಸಂಘಟನೆಯತ್ತ ನಾವು ಸಾಗಬೇಕಾಗಿದೆ ಅದರ ಜೊತೆಗೆ ಶಿವಾ ಅಥವಾ ರೇಣುಕಾ ಎಲ್ಲಮ್ಮ ದೇವಿ ಮತ್ತು ಸುಪುತ್ರ ಪರಶುರಾಮ ಇವರೆಲ್ಲೊಬ್ಬರನ್ಧು ಆರಾಧಿಸಲು ಸಮಾಜ ಮುಂದಾಗ ಬೇಕಿದೆ ಸಮಾಜಕ್ಕಿರುವ ಆಸ್ತಿನೆ ಇವರು ಇವರನ್ನು ಆರಾಧಿಸುವ ಮೂಲಕ ಸಮಾಜವು, ಋಣ ಸಂದಾಯ ಮಾಡುವ ಅಗತ್ಯತೆ ಕರ್ತವ್ಯ ನಮ್ಮ ಸಮಜಕ್ಕಿದೆ ಬಂಧುಗಳು ಪಾಲಿಸುವರೆಂಬ ನಂಬಿಕೆಯೊಂದಿಗೆ ಸಮಾಜದಲ್ಲಿ ಮಹಿಳೆಯರ ಪಾತ್ರ ಮುಖ್ಯ

ಸಮಾಜದ ಮಹಿಳೆಯರು ಸಂಘ ಸಂಸ್ಥೆಗಳ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ಮೂವರು ಶಾಸಕರಾಗಿ ಸಚಿವರಾಗಿ ಸೇವೆ ಸಲ್ಲಿಸಿದ್ದು ಸಂತೋಷದ ವಿಷಯ ಜೊತೆಗೆ ಜಿಪಂ ಅಧ್ಯಕ್ಷ ಸದಸ್ಯ ನಗರ ಪುರಸಭೆ ಸಭೆ ಅಧ್ಯಕ್ಷ ಸದಸ್ಯರಾಗಿ ಗ್ರಾಪಂ ಅಧ್ಯಕ್ಷ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಇದರ ಜೊತೆಗೆ ಮಹಿಳೆಯರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಉನ್ನತ ಶಿಕ್ಷಣ ನೀಡವಲ್ಲಿ ಹೆಚ್ಚು ಗಮನ ಹರಿಸಬೇಕು ಜೊತೆಗೆ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ವಿಶ್ವನಾಥ ಪಾಟೀಲ್ ಗವನಳ್ಳಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here