ವಿಜಯಪುರ ನಗರದ ರಾಣಿ ಚೆನ್ನಮ್ಮ ಸ್ವಸಹಾಯ ಸಂಘ. ಜೋಟಿಕ ಲೇಔಟ್ ಸಾಯಿ ಪಾರ್ಕ್ ಸಂಘದ ವತಿಯಿಂದ
ಆಯೋಜಿಸಿದ್ದ ಮಹಿಳಾ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗೌರಮ್ಮ ರೆಡ್ಡಿ ಅಧ್ಯಕ್ಷರಾಗಿ, ಸುನಿತಾ ಪಾಟೀಲ್ ಉದ್ಘಾಟಕರಾಗಿ, ಅತಿಥಿಗಳಾಗಿ ಇಂದಿರಾ ಬಿದರಿ, ಶೋಭಾ ಮೆಂಡೆಗಾರ್ ಸಂಘದ ಅಧ್ಯಕ್ಷರಾದ ಅಧ್ಯಕ್ಷರಾದ ಗೌರಬಾಯಿ ಕುಬಕಡ್ಡಿ ಉಪಾಧ್ಯಕ್ಷರಾದ ಶಾಂತಾ ಬಿರಾದಾರ್ ಕಾಲೋನಿಯ ಹಿರಿಯರಾದಂತ ಶಾಂತಕ್ಕ ಇಜೇರಿ, ಮಂಜುಳಾ ಚಕ್ರವರ್ತಿ, ಮಂಗಳ ರೋಗಿ, ಲಕ್ಷ್ಮಿ ಚಿಮ್ಮುಲಗಿ, ಲಕ್ಷ್ಮಿ ಮೂಲಿಮನಿ, ನಂದಿನಿ ಹಜೇರಿ, ಕಾಶಮ್ಮ ವಾಲಿಕಾರ್ ಇನ್ನೂ ಅನೇಕರು ಉಪಸ್ಥಿತರಿದ್ದರು ಶೋಭಾ ಕಸನಕ್ಕೆ ಸ್ವಾಗತಿಸಿದರು. ಗೌರಾಬಾಯಿ ಕುಬಕಡ್ಡಿ ನಿರೂಪಣೆ ಮಾಡಿದರು. ವಿಜಯಲಕ್ಷ್ಮಿ ಹುರುಗಡ್ಲೆ ಅವರು ವಂದಿಸಿದರು. ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಶಿಲ್ಪಾ ಕುಲಕರ್ಣಿ, ಪವಿತ್ರ ಕಂಪ್ಲಿಕರ್ ಮೀರಾ ಕಂಪ್ಲಿಕರ್, ದೇವಕಿ ನಾಯಕ್, ಸವಿತಾ ಬೋಳೆಗಾಂವ್ ಉಪಸ್ಥಿತರಿದ್ದರು. ಮಹಿಳೆಯರ ಕುರಿತು ಕಾರ್ಯಕ್ರಮದಲ್ಲಿ ಅತಿಥಿಗಳು ಸುಂದರವಾಗಿ ಮಾತನಾಡಿದರು. ಕಾಲೋನಿಯ ಮಹಿಳೆಯರು ಅನೇಕ ನೃತ್ಯಗಳನ್ನು ಮಾಡಿದರು. ಒಳ್ಳೆಯ ಹಾಡುಗಳನ್ನು ಹಾಡಿ ಕೇಳುಗರ ಮನರಂಜಿಸಿದರು. ಈ ಎಲ್ಲ ಕಾರ್ಯಕ್ರಮವನ್ನು ಬಡಾವಣೆಯ ಮಹಿಳೆಯರು ಅಚ್ಚುಕಟ್ಟಾಗಿ ಆಯೋಜಿಸಿದ್ದರು.