ಬೆಂಗಳೂರು:ಎಸ್.ಎಸ್.ಎಲ್.ಸಿ.ಪರೀಕ್ಷಾರ್ಥಿಗಳಿಗಾಗಿ ಶ್ರೀ ಮೌರ್ಯ ರೂರಲ್ ಎಜುಕೇಷನ್ ಟ್ರಸ್ಟ್ ನವರಿಂದ ಉಚಿತ ವಿತರಣೆಗಾಗಿ ತಯಾರಿಸಿದ ಪ್ರಶ್ನೋತ್ತರ ಜ್ಞಾನ ಭಂಡಾರವೆಂಬ ಪುಸ್ತಕವನ್ನು ಕೋಟಿಗೊಬ್ಬ ಡಾ!! ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಮುನಿಸ್ವಾಮಿ ಕಪಾಲಿ ಅವರು ಉಚಿತ ಜ್ಞಾನ ಭಂಡಾರ ಪುಸ್ತಕವನ್ನು ಸಾಣೆಗೊರವನಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ಕೋಟಿಗೊಬ್ಬ ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿಗಳ ಸಂಘದಿಂದ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಮುನಿಸ್ವಾಮಿ ಕಪಾಲಿಯವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟು ಅದರೊಂದಿಗೆ ಕಲೆ,ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಉನ್ನತ ಪದವಿ ಮತ್ತು ಉನ್ನತ ಪದಕ ಪಡೆಯುವತ್ತ ಶ್ರಮಿಸಬೇಕು.ಕಾಲ ಮಿಂಚಿಹೋದರೆ ಮತ್ತೆ ವಿದ್ಯಾರ್ಥಿಜೀವನ ವಾಪಸ್ ಬರದು.ಆದ್ದರಿಂದ ಈಗಿದ್ದ ಸಮಯವನ್ನು ಸದ್ಬಳಕೆಮಾಡಿಕೊಂಡು ತಂದೆ ತಾಯಿಗೆ ಹಾಗೂ ನಾಡಿಗೆ ಕೀರ್ತಿ ತರುವಂಥವರಾಗಿರಿ ಮತ್ತು ಈ ಪುಸ್ತಕದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ಸಮಯ ವ್ಯರ್ಥಮಾಡದೇ ಓದಿ ಪರೀಕ್ಷೆ ಬರೆದು ಹೆಚ್ಚು ಅಂಕಗಳಿಸುವಮುಖಾಂತರ ತೇರ್ಗಡೆ ಹೊಂದಿ ಶಾಲೆಗೂ ಕೀರ್ತಿ ತರಬೇಕು ಎಂದು ಶುಭ ಹರಸಿದರು.ಎಂದು ಸಿಂಹಸೇನಾನಿ ಹರ್ಷವರ್ಧನ್ ತಿಳಿಸಿದ್ದಾರೆ.