ಬೆಂಗಳೂರು:ಸಂವಿಧಾನ ಮುಖ್ಯಸ್ಥರು, ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರು ರಾಜ್ಯದ ಸರ್ಕಾರದ ಸಾಧನೆಗಳನ್ನು ಹಾಗೂ ಅಭಿವೃದ್ಧಿ ಕಾರ್ಯದ ಮುನ್ನೋಟವನ್ನು ಬಹಳ ಸಂತೋಷದಿಂದ ಮಂಡಿಸಿದ್ದಾರೆ. ನಮ್ಮ ಸರ್ಕಾರ ಕಳೆದ ಆಯವ್ಯಯದಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಕೃಷಿ, ಹೈನುಗಾರಿಕೆ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ವಸತಿ, ಬಂಡವಾಳ ಹೂಡಿಕೆ, ರೇಷ್ಮೆ, ಮೂಲಭೂತ ಸೌಕರ್ಯ, ಶಿಕ್ಷಣ ಸೇರಿದಂತೆ ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿ ಬಗ್ಗೆ ಶ್ಲಾಘಿಸಿದ್ದಾರೆ. ಅಲ್ಲದೆ, ನಮ್ಮ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ ಅವರು ಘೋಷಣೆ ಮಾಡಿದ್ದ 334 ಭರವಸೆಗಳಲ್ಲಿ 331 ಭರವಸೆಗಳನ್ನು ಜಾರಿ ಮಾಡಿ ಜನಕಲ್ಯಾಣಕ್ಕೆ ಕಾಂಗ್ರೆಸ್‌ ಸರ್ಕಾರ ನೆರವಾಗಿದೆ. ಶೇ.99. ಅಂಕಗಳನ್ನು ನಮ್ಮ ರಾಜ್ಯಪಾಲರು ನೀಡಿದ್ದಾರೆ. ನಮ್ಮ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿರುವಂಥ 117 ವಿಷಯಗಳನ್ನು ಸದನ ಮತ್ತು ರಾಜ್ಯದ ಜನತೆಯ ಮಧ್ಯೆ ಮಂಡಿಸಿರುವುದನ್ನು ಸನ್ಮಾನ್ಯ ವಿರೋಧ ಪಕ್ಷದ ನಾಯಕರು ಕೂಲಂಕಷವಾಗಿ ಓದಬೇಕು. ಅದನ್ನು ಬಿಟ್ಟು ಟೀಕೆ ಮಾಡಬೇಕೆಂದೇ ಟೀಕೆ ಮಾಡುವುದು ಸರಿಯಲ್ಲ.

– ದಿನೇಶ್‌ ಗೂಳಿಗೌಡ, ಶಾಸಕರು, ವಿಧಾನ ಪರಿಷತ್‌

LEAVE A REPLY

Please enter your comment!
Please enter your name here