ವಿಜಯಪುರ:ವಿಜಯಪುರ ತಾಲೂಕಿನ ಹೊನಗನಹಳ್ಳಿಯ ಗ್ರಾಮಪಂಚಾಯತ್ ಕಟ್ಟಡದ ಅಡಿಗಲ್ಲು ಸಮಾರಂಭ ಹಾಗೂ ಎನ್.ಆರ್.ಎಂ.ಎಲ್.ಎಂ.ಘಟಕ ವನ್ನು ಕರ್ನಾಟಕ ಸರ್ಕಾರದ ಭೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರವರು ಉದ್ಘಾಟಿಸಿ ಮಾತನಾಡಿದರು.
ಜನಪರ ಹಾಗೂ ಅಭಿವೃದ್ಧಿ ಪರ ಕೆಲಸ ಮಾಡಲು ನಾನು ಸದಾ ಸಿದ್ದನಾಗಿರುತ್ತೇನೆ ಎಂಬ ಭರವಸೆ ಮಾತುಗಳನ್ನಾಡಿ ಮನವಿಗಳನ್ನು ಸ್ವೀಕರಿಸಿ, ಹೊನಗನಹಳ್ಳಿ, ಸವನಹಳ್ಳಿ ಜನರಿಗೆ ಹಲವಾರು ಭರವಸೆಯನ್ನು ನೀಡಿ ಸಂತೋಷದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಊರಿನ ಹಿರಿಯರು ಅವರಿಗೆ ಚಪ್ಪಾಳೆಯ ಮೂಲಕ ಕೃತಜ್ಞತೆಯನ್ನು ಸಲ್ಲಿಸಿ ಬೀಳ್ಕೊಟ್ಟರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ ಶ್ರೀ ನಚಿಕೇತ ಬಿದರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಮಹಾಂತೇಶ ಹಳ್ಳಿ ಭಾಗವಹಿಸಿದ್ದರು. ಊರಿನ ಹಿರಿಯರು ಮಹಿಳೆಯರು ಮಕ್ಕಳು ಯುವಕರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ವಲಯಕ್ಕೆ ಸಂಬಂಧಪಟ್ಟಂತ ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು. ಒಟ್ಟಾರೆ ಗ್ರಾಮದ ಅಭಿವೃದ್ಧಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಇದು ಎಂಬ ಭಾವ ಅಲ್ಲಿತ್ತು.
ಹೊನಗನಹಳ್ಳಿ ಗ್ರಾಮದಲ್ಲಿ ಎನ್ ಆರ್ ಎಂ ಎಲ್ ಎಮ್ ಘಟಕ ಉದ್ಘಾಟನಾ ಹಾಗೂ ಬಸ್ ನಿಲ್ದಾಣ ಅಡಿಗಲ್ ಸಮಾರಂಭ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಮತ್ತು ಉದ್ಘಾಟನೆಗಾಗಿ ಡಾ. ಎಂ.ಬಿ ಪಾಟೀಲ್ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಕರ್ನಾಟಕ ಸರ್ಕಾರ. ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಚಿಕೇತ್ ಅಶೋಕ್ ಬಿದರಿ ವಹಿಸಿದ್ದರು. ಅವಳಿ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮ ಮುಗಿದ ನಂತರ ಗ್ರಾಮಸ್ಥರ ಕುಂದು ಕೊರತೆಗಳನ್ನು ಆಲಿಸಲಾಯಿತು, ಡಾಕ್ಟರ್ , ಎಂ. ಬಿ ಪಾಟೀಲ್ ಅವರು ಎಲ್ಲಾ ಮನವಿಗಳದ್ದು ಸ್ವೀಕರಿಸಿ ಮುಂಬರುವ ದಿವಸಗಳಲ್ಲಿ ಮಾಡಿಕೊಡುವ ಕಡ್ಡಾಯ ಭರವಸೆ ನೀಡಿದ್ದಾರೆ. ಕೆಲವೊಂದು ಮೂಲಭೂತ ಕೆಲಸ ಮಾಡಲು ಆಗಿಂದಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪ್ರಸ್ತಾವಿಕವಾಗಿ ಶಶಿಧರ್ ಬಿದರಿ ಮಾತನಾಡಿದರು. ಮತ್ತು ಸಂಗಮೇಶ್ ಬಬಲೇಶ್ವರ ಮಾತನಾಡಿ ನಿಮ್ಮೂರಿಗೆ ಕಾಮಧೇನುವಿನಂತ ಒಳ್ಳೆಯ ಆಡಳಿತಗಾರರು ತೊರೆತಿದ್ದಾರೆ. ಅವರಿಂದ ಒಳ್ಳೆಯ ಕೆಲಸಗಳನ್ನು ತೆಗೆದುಕೊಳ್ಳಿ ಒಂದು ದೇವಸ್ಥಾನಕ್ಕಿಂತ ಶಿಕ್ಷಣ ಕ್ಷೇತ್ರವನ್ನು ಸುಧಾರಿಸುವಂತ ಮೌಲ್ಯಯುತವಾದ ಅಭಿವೃದ್ಧಿ ಕೆಲಸಗಳನ್ನು ಸಾಹೇಬರಿಂದ ಪಡೆದುಕೊಂಡು ಗ್ರಾಮದ ಮಕ್ಕಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಬನ್ನಿ. ಮುಂದೊಂದು ದಿನ ನಿಮ್ಮೂರೇ ಮಾದರಿ ಗ್ರಾಮವಾಗಬಹುದು. ಎಂಬ ಸಲಹೆಯನ್ನು ನೀಡಿದರು. ನಂತರ ಮನವಿಗಳನ್ನು ಸ್ವೀಕರಿಸಿದ ಮಾನ್ಯ ಸಚಿವರು ಊರಿನ ಬಗ್ಗೆ ಅಭಿಮಾನದಿಂದ ಮಾತನಾಡುತ್ತಾ ಶ್ರೀಯುತ ರಾಮಪ್ಪ ಬಿದರಿ ಅವರನ್ನು ನೆನೆಸಿಕೊಂಡು ಅಂಥಾ ದೊಡ್ಡ ರಾಜಕಾರಣಿಯನ್ನು ಕೊಟ್ಟಂತ ಊರು ನಿಮ್ಮದು. ನೀವು ಸರಿಯಾಗಿ ಕೊಟ್ಟಿರುವ ಸೌಲಭ್ಯಗಳನ್ನು ಬಳಸಿಕೊಂಡು ಊರನ್ನು ಪ್ರಗತಿಯ ಕಡೆಗೆ ತೆಗೆದುಕೊಂಡು ಬರಲು ಪ್ರಯತ್ನ ಮಾಡಿರಿ. ಇಷ್ಟೊಂದು ಚಟಗಳಿಂದ ದೂರವಿರಿ. ಒಳ್ಳೆಯ ಕೆಲಸದ ಕಡೆಗೆ ಗಮನ ಕೊಡಿರಿ. ನಾನು ಅದಕ್ಕೆ ಸಾಕಷ್ಟು ಸಹಕಾರ ನೀಡುತ್ತೇನೆ ಮುಂದಿನ ಪ್ರಜೆಗಳಾದ ಮಕ್ಕಳ ಭವಿಷ್ಯಕ್ಕೆ ಬೇಕಾದ ಸಾಕಷ್ಟು ಶಿಕ್ಷಣ ಸೌಲಭ್ಯಗಳನ್ನು ಹಾಗೂ ಮಹಿಳಾ ಸಬಲೀಕರಣ ಕೆಲಸಗಳನ್ನು ಮಾಡಿಕೊಳ್ಳಲು ನಾನು ಸದಾ ಸಿದ್ದ ಎಂದು ಸಚಿವರು ಭರವಸೆಯ ಮಾತುಗಳನ್ನಾಡಿದರು.(ವರದಿ:ಶ್ರೀ ಮತಿ ಇಂದಿರಾ ಬಿದರಿ)

LEAVE A REPLY

Please enter your comment!
Please enter your name here