ಕಲಬುರಗಿ:
2024-25ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಮುಂಗಾರು ಬೇಳೆಗಳಾದ ಹೆಸರು, ಉದ್ದು, ಸೋಯಾ, ತೊಗರಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು, 19865 ಹೇಕ್ಷರ ಪ್ರದೇಶವೆಂದು ಗುರುತಿಸಿ ಕೃಷಿ ಇಲಾಖೆ ಸರ್ಕಾರಕ್ಕೆ ವರದಿ ನೀಡಿರುತ್ತದೆ. ಆದರೆ ವಾಸ್ತವವಾಗಿ 50,000 ಹೇಕ್ಟರ್ ಪ್ರದೇಶದಲ್ಲಿ ಮುಂಗಾರು ಬೆಳೆಗಳು ಹಾನಿಯಾಗಿರುತ್ತವೆ ಎಂದು ರೈತ ಹೋರಾಟ ಸಮಿತಿಯವರು ಸುದ್ದಿಗೋಷ್ಠಿಯಲ್ಲಿ ವಿವರಿಸುತ್ತಾ
ಹಿಂಗಾರಿನಲ್ಲಿ 6.6 ಲಕ್ಷ ತೊಗರಿ ಬಿತ್ತನೆಗಳನ್ನು ಇರದಲ್ಲಿ ನೇಟೆರೋಗ, ಕಳಪೆ ಬೀಜದಿಂದ 1,82,963 ಹೇಕ್ಷರ ಹಾನಿಯಾಗಿರುತ್ತದೆ ಎಂದು ಕೃಷಿ ಇಲಾಖೆ ವರದಿ ಸರ್ಕಾರಕ್ಕೆ ನೀಡಿರುತ್ತದೆ. ಆದರೆ ಶೇ.60% ರಷ್ಟು ಬೆಳೆ ಹಾನಿಯಾಗಿದ್ದು, ಸುಮಾರು 4 ಲಕ್ಷ ಹೇಕ್ಷರ ಪ್ರದೇಶದಲ್ಲಿ ವಾಸ್ತವವಾಗಿ ತೊಗರಿ ಹಾಳಾಗಿರುತ್ತದೆ. ಇದರಿಂದ ರೈತರು ಕಂಗಾಲಾಗಿದ್ದು, ತುಂಬಾ ಕಷ್ಟದಲ್ಲಿದ್ದರೆ, ಇದರಿಂದಾಗಿ ರೈತರ ನೋವು ತಾಳಲಾರದೆ ಆತ್ಮ ಹತ್ಯೆಗೆ ಶರಣನಾಗುತ್ತಿದ್ದಾರೆ. ಉದಾಹರಣೆ ದಿನಾಂಕ: 21-02-2024ರಲ್ಲಿ ಕಾಳಗಿ ತಾಲೂಕಿನ ಹುಳಗೇರಾ ಗ್ರಾಮದ ರವೀಂದ್ರ ಎಂಬ ರೈತ ಸಾಲದ ಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಹಿಗಾಗಿ ಸರ್ಕಾರ ರೈತರ ನೆರವಿಗೆ ಧಾವಿಸಿ 500 ಕೋಟಿ ರೂಪಾಯಿ ತೊಗರಿ ಪರಿಹಾರ ಘೋಷಣೆ ಮಾಡಬೇಕೆಂದು ಅಗ್ರಹಿಸಿದ್ದಾರೆ.
2023-24ನೇ ಸಾಲಿನಲ್ಲಿ ಬಿತ್ತನೆಯಾಗಿದ್ದು ಇದರಲ್ಲಿ 2.7 ಲಕ್ಷ ನೇಟೆರೋಗದಿಂದ ತೊಗರಿ ಬೆಲೆ ಹಾಳಾಗಿದೆ ಎಂದು ಕೃಷಿ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತಾರೆ. ನಂತರ ರೈತ ಸಂಘಟನೆಗಳ ಹೋರಾಟದ ಫಲವಾಗಿ ಮತ್ತು ಉಸ್ತುವಾರಿ ಸಚಿವರಾದ ಸನ್ಮಾನ್ಯಶ್ರೀ ಪ್ರಿಯಾಂಕ್ ಖರ್ಗೆ, ಸಚಿವರಾದ ಸನ್ಮಾನ್ಯಶ್ರೀ ಶರಣಪ್ರಕಾಶ ಪಾಟೀಲ, ಇತರೆ ಜನಪ್ರತಿನಿಧಿಗಳು ಪ್ರತಿ ಎಕರೆ 25000/- ಪರಿಹಾರ ನೀಡುವಂತೆ ಬೀದಿಗಿಳಿದು ಹೋರಾಟ ಮಾಡಿದ ನಂತರ 733.02 ಕೋಟಿ ರೂಪಾಯಿ ರೈತರಿಗೆ ಪರಿಹಾರವನ್ನು ಹಿಂದಿನ ಸರ್ಕಾರ ನೀಡಿತ್ತು. ಕಲಬುರಗಿ ಜಿಲ್ಲೆಗೆ ನೀಡಿತ್ತು.
2024-25ನೇ ಸಾಲಿನ ತೊಗರಿ ಪರಿಹಾರಕ್ಕಾಗಿ ಸುಮಾರು 4 ತಿಂಗಳಿಂದ ರೈತ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಮತ್ತು ಈ ಹಿಂದೆ ರೈತರ ಪರ ಹೋರಾಟ ಮಾಡಿರುವ ಜನಪ್ರತಿನಿಧಿಗಳಾದ ಇಲ್ಲಿ ಪ್ರಿಯಾಂಕ ಖರ್ಗೆ ರವರು ಮತ್ತು ಶರಣಪ್ರಕಾಶ ಪಾಟೀಲ ಇತರೆ ಜನಪ್ರತಿನಿಧಿಗಳ ಸರ್ಕಾರ ಆಡಳಿತದಲ್ಲಿ ಇದ್ದು ತಮ್ಮ ಬಗ್ಗೆ ರೈತರಿಗೆ ವಿಶ್ವಾಸವಿದ್ದು, ಹಿಂದಿನ ತಮ್ಮ ಬೇಡಿಕೆಯಂತೆ ಇಂದು ಕೂಡಾ ಪ್ರತಿ ಎಕರೆ 25000/- ರೂ ಯಂತ ತೊಗರಿ ಪರಿಹಾರ ಕೊಡಿಸಬೇಕು. ಇಲ್ಲವಾದಲ್ಲಿ ಕನಿಷ್ಠ 800 ಕೋಟಿ ಪರಿಹಾರ ಘೋಷಣೆ ಮಾಡಬೇಕಾಗಿ ರೈತ ಪರವಾಗಿ ಮನವಿ ಸಲ್ಲಿಸುತ್ತೇವೆಂದು ಹೇಳಿದರು.
ಒಂದು ವೇಳೆ ತಾವುಗಳು ರೈತರಿಗೆ ಪರಿಹಾರ ಘೋಷಣೆ ಮಾಡದಿದ್ದರೆ, ದಿನಾಂಕ:05-03-2025 ರಂದು ಎತ್ತಿನ ಬಂಡಿಗಳೊಂದಿಗೆ, ರೋಟ್ಟಿ ಬುತ್ತಿ, ಪುಂಡಿ ಪಲ್ಯಾ ಕಟ್ಟಿಕೊಂಡು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಎತ್ತುಗಳ ಕೊಳ್ಳು ಹರಿದು ಬುತ್ತಿ ಬಿಚ್ಚಿಕೊಂಡು ಪುಂಡಿ ಪಲ್ಯಾ & ರೋಟಿ ಊಟ ಮಾಡುತ್ತಾ ಕುರುತ್ತೇವೆ. ತಾವು ಪರಿಹಾರ ಘೋಷಣೆ ಮಾಡಿದ ಮೇಲೆ ಮಾತ್ರ ನಾವು ಅಲ್ಲಿಂದ ತೆರಳುತ್ತೇವೆ ಇದು ನಮ್ಮ ದೃಢ ನಿರ್ಧಾರವಾಗಿದೆ. ಕಾರಣ ತಾವುಗಳು ಇದನ್ನು ಗಂಭಿರವಾಗಿ ಪ್ರಮುಖವಾಗಿ ಈ 1 ) ತೊಗರಿ ಪರಿಹಾರಕ್ಕಾಗಿ 800 ಕೋಟಿ ಪರಿಹಾರ ನೀಡಬೇಕು
2) ಖಾಸಗಿ ಬೆಳೆ ವಿಮೆಯಿಂದ ರೈತರಿಗೆ ತಾರತಮ್ಯವಾಗಿ ಅನ್ಯಾಯವಾಗುತ್ತಿದೆ ಸರ್ಕಾರವೇ ಸಂಪೂರ್ಣ ವಿಮೆ ಮಾಡಿಸಬೇಕು.
3) ಕಲಬುರಗಿ ಜಿಲ್ಲೆಯ ತೊಗರಿ ಬೆಳೆಗಾರರಿಗೆ ಜಿ.ಆಯ್ ಟ್ಯಾಗ್ ಮಾನ್ಯತೆ ನೀಡಬೇಕು.
4) ತೊಗರಿ ಬೇಳೆಗೆ 10,000/-ರೂಪಾಯಿ ಕನಿಷ್ಠ ಬೆಂಬಲ ಬೆಲೆ ನೀಡಬೇಕು.
5) ಮುಂದಿನ ವರ್ಷ ನೇಟೆ ರೋಗ ಬರದಂತೆ ಮುಂಜಾಗೃತೆ ಕ್ರಮ ತೆಗೆದುಕೊಳ್ಳಬೇಕೆಂದು ಹಲವು ಬೇಡಿಕೆಗಳ ಈಡೇರಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರೈತ ಪರವಾದ ಈ ಹೋರಾಟಕ್ಕೆ ಬೆಂಬಲಿಸಿ ಪೂಜ್ಯ ಮಠಾಧೀಶರು, ಎ.ಪಿ.ಎಮ್.ಸಿ ವರ್ತಕರು, ಕಾರ್ಮಿಕರು, ಕಲ್ಯಾಣ ಕರ್ನಾಟಕ ವಾಣಿಜ್ಯ ಮಂಡಳಿ, ವಿವಿಧ ಸಮಾಜದ ಸಂಘ ಸಂಸ್ಥೆಗಳು, ಪ್ರಗತಿಪರ ಚಿಂತಕರು, ಜನಪ್ರತಿನಿಧಿಗಳು, ರೈತ ಮುಖಂಡರು ವಿದ್ಯಾರ್ಥಿಗಳು, ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಡಾಕ್ಟರ್ ಸುರೇಶ್ ಸಜ್ಜನ್,ಡಾಕ್ಟರ್ ಗಿರಿರಾಜ್ ಎಸ್ ಯಳಮೇಲಿ,ರಾಜೇಂದ್ರ ಕರೆಕಲ್,ಚಂದ್ರಶೇಖರ್ ಹರಸೂರ್,ವಿಶ್ವನಾಥ್ ಪಾಟೀಲ್ ಕಾನಳ್ಳಿ ರಾಜುಗೌಡ ಎನ್ ನಾಗನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.