ಯಾದಗಿರಿ:ಭಾರತದ ಅತ್ಯಂತ ಗೌರವಾನ್ವಿತ ಯೋಧರು ಮತ್ತು ಆಡಳಿತಗಾರರಲ್ಲಿ ಒಬ್ಬರಾದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಪ್ರತಿ ವರ್ಷ ಫೆಬ್ರವರಿ 19 ರಂದು ಶಿವಾಜಿ ಜಯಂತಿಯನ್ನು ಆಚರಿಸಲಾಗುತ್ತದೆ. 1630 ರಲ್ಲಿ ಜನಿಸಿದ ಶಿವಾಜಿ ಮಹಾರಾಜರು ಭಾರತೀಯ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ ಪೌರಾಣಿಕ ಮರಾಠ ರಾಜರಾಗಿದ್ದರು. ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸುವುದರಲ್ಲಿ ಅವರ ಕೊಡುಗೆ ಅಪಾರವಾದುದ್ದು. 2025ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜನ್ಮ ವಾರ್ಷಿಕೋತ್ಸವವನ್ನು ಫೆಬ್ರವರಿ 19ರಂದು ಯಾದಗಿರಿ ಜಿಲ್ಲೆಯ ಸುರಪುರ ದಂಡಾಧಿಕಾರಿ ಕಚೇರಿಯಲ್ಲಿ ಬುಧವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸಮಾಜದ ಮುಖಂಡರು
ಶ್ರೀ ರಾಮಚಂದ್ರ, ರಾಜು ಫುಲ್ಸೆ, ಧನ್ಪಾಲ್ ಹಂಚಾಟೆ, ಮುರುಳಿಧರ್ ಅಂಬುರೆ, ಬಲಭಿಮಾರಾವ್ ದಳಪತಿ ಹಾವಿನಾಳ, ವಿವೇಕಾನಂದ್, ವಿನೋದ್ ಕುಮಾರ್, ಧೀರಜ್, ಭೀಮಶಂಕರ್ ಶಿಂದೆ, ಬಲಭಿಮ, ತುಳಜಾರಾಮ್ ಅಮ್ಮಪುರ್, ಅಂಬರೀಶ್ ಮರಾಠ ಜಾಲಿಬೆಂಚಿ, ವೆಂಕೋಬ್ ಮಾಸ್ತರ್ ಪಡಕೋಟೆ, ಸತೀಶ್ ರಂಗಂಪೆಟ್, ರಾಕೇಶ್ ಹಂಚಾಟೆ ಇನ್ನಿತರ ಸಮಾಜದ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here