ಹೂವಿನಹಡಗಲಿ: ಪೌರಕಾರ್ಮಿಕರು ಬೆಳಗ್ಗೆ ಎದ್ದು ಇಡೀ ಪಟ್ಟಣವನ್ನು ಸ್ವಚ್ಛತೆಗೊಳಿಸಿ ಸುಂದರ ನಗರವನ್ನಾಗಿ ಮಾಡಿ ನಮ್ಮ ದೇಹದ ಆರೋಗ್ಯಕ್ಕೆ ಪ್ರಮುಖ ಕಾರಣರಾಗಿದ್ದಾರೆ. ಕಾಯಕವೇ ಕೈಲಾಸ ಎಂದು ನಂಬಿ ನಡೆದವರು ನಿಜಕ್ಕೂ ಅವರ ಕೆಲಸ, ಕಾರ್ಯ ತುಂಬಾ ಶ್ಲಾಘನೀಯವಾದದ್ದು, ಎಂದು ಡಾ. ಹಿರಿಶಾಂತವೀರ ಮಹಾಸ್ವಾಮಿಗಳು ಶಾಖಾಗವಿಮಠ ಹೇಳಿದರು.
ಪಟ್ಟಣದ ಜಿಪಿಜಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಕರ್ನಾಟಕ ಸಾರ್ವಜನಿಕ ಸೇವಾ ಸಂಘ (ರಿ) ರಾಜ್ಯ ಘಟಕ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ವತಿಯಿಂದ ಹಮ್ಮಿಕೊಂಡಿದ್ದ ” ಅಕ್ಷರ, ಅನ್ನ, ಆರೋಗ್ಯ ಅರಿವು ಕಾರ್ಯಕ್ರಮ ಕುರಿತು ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಕ್ರಾಂತಿ ನೆರಳು ಪತ್ರಿಕೆ ಸಂಪಾದಕ ಬುಡ್ಡಿ ಬಸವರಾಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಕ್ಷರದಿಂದ ಅನ್ನ, ಅನ್ನದಿಂದ ಆರೋಗ್ಯ, ಅಕ್ಷರ ಕಲಿತರೆ ಮಾತ್ರ ನಾಗರಿಕರು ಆಗುವುದಕ್ಕೆ ಸಾಧ್ಯ! ಅಕ್ಷರ ಕಲಿತರೆ ಮಾತ್ರ ಆರೋಗ್ಯದಿಂದರಲು ಸಾಧ್ಯ ಇಲ್ಲದಿದ್ದರೆ ಅನಾರೋಗ್ಯಕ್ಕೆ ತುತ್ತಾಗುತ್ತೇವೆ, ನಿಮ್ಮ ನಿಮ್ಮ ಮಕ್ಕಳನ್ನು ಮೊದಲು ಅಕ್ಷರವಂತರನ್ನಾಗಿ ಮಾಡಿ, ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಪೌರಕಾರ್ಮಿಕರು ಪ್ರಥಮ ವೈದ್ಯರು, ಅವರು ಬೀದಿಬೀದಿ ಚರಂಡಿಗಳನ್ನು ಸ್ವಚ್ಛತೆ ಮಾಡದಿದ್ದರೆ ನಾವ್ಯಾರು ಆರೋಗ್ಯದಿಂದಿರಲು ಸಾಧ್ಯವಿರುತ್ತಿರಲಿಲ್ಲ. ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡ ಪತ್ರಕರ್ತರಾದ ಹೆಚ್. ಹನುಮಂತಪ್ಪ ಇವರ ಹೋರಾಟ ಮೆಚ್ಚುವಂಥದ್ದು ಎಂದರು.

ಪರಮಪೂಜ್ಯ ಸದ್ಗುರು ಗಾಡಿ ತಾತನವರು, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪಿಡಿಒ ಮಹಮ್ಮದ್ ಬಿಲ್ಲುಖಾನ್ ಪತ್ರಕರ್ತ ಮಡ್ಡಿ ಜಗದೀಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಆರ್. ಮಂಜುನಾಥ ಗೌಡ, ಗ್ರಾ.ಪಂ. ಸದಸ್ಯ ಜಿ. ಶರಣಗೌಡ, ತಾಲೂಕು ಅಂಗನವಾಡಿ ಫೆಡರೇಶನ್ ಅಧ್ಯಕ್ಷೆ ಬಿ. ವಿಜಯಲಕ್ಷ್ಮಿ, ಕಾರ್ಯಕ್ರಮ ಕುರಿತು ಮಾತನಾಡಿದರು.
ಈ ಒಂದು ಸಂದರ್ಭದಲ್ಲಿ ವಿಶೇಷವಾಗಿ ಮಾನವೀಯ ಮೌಲ್ಯಗಳ ನೇತಾರ ಬಸವ ತತ್ವಪರಿಪಾಲಕರು ಶ್ರೀ ಎಸ್ ಎಸ್ ಕುಮಾರ್ ರವರಿಗೆ “ಸಾರ್ವಜನಿಕ ಉತ್ತಮ ಸೇವಾ ಸಿರಿ, ಹಾಗೂ ಸಿದ್ಧಗಂಗಾ ಶ್ರೀ ಗಳ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿದರು
ಪುರಸಭೆಯ ಪೌರಕಾರ್ಮಿಕರಿಗೆ ಹಾಗೂ ಗ್ರಾಮ ಸಹಾಯಕರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಪತ್ರಕರ್ತರಿಗೆ, ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ವಿಶೇಷವಾಗಿ ಒಟ್ಟು, 100 ಕ್ಕೂ ಹೆಚ್ಚು ಜನರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿ ಗೌರವಹಿಸಲಾಯಿತು.
ಪ್ರಾರ್ಥನೆ ಪಿಡಿಒ ಮಹಮದ್ ಗೌಸ್ ಬಿಲ್ಲುಖಾನ್ ನೆರವೇರಿಸಿದರೆ ಶ್ರೀ ವಾತ್ಸವ್ ಪಾಟೀಲ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ವೇಳೆ ಕರ್ನಾಟಕ ಸಾರ್ವಜನಿಕ ಸೇವಾ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಪತ್ರಕರ್ತ ಹೆಚ್.ಹನುಮಂತಪ್ಪ,ಹೆಚ್ ಮಾರುತಿ, ಅಖಿಲ ಕರ್ನಾಟಕ ರಾಜ್ಯ ರೈತ ಸಂಘದ ಶಿವರಾಜ, ಗೌರವ ಅಧ್ಯಕ್ಷ ಹೆಚ್. ಸಿದ್ದಪ್ಪ, ವಕೀಲರಾದ ಪಾಂಡುರಂಗ, ಸುರೇಶ,ಕಲಾವಿದ ಅಂಜಿನಪ್ಪ, ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷರು ಸುಭಾನ್ ಸಾಬ್, ಆರ್ ಟಿ ಐ ಕಾರ್ಯಕರ್ತ ಸುರೇಶ್ ಹೊಳಗುಂದಿ, ಪತ್ರಕರ್ತ ಅಯ್ಯನಗೌಡ, ಎಂ. ರಾಜಪ್ಪ ವಿರೇಶ ಆರ್ ಮಂಜುನಾಥ ಗೌಡ ಜಿ ಶರಣು ಗೌಡ ಇತರರಿದ್ದರು.