ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ನಗರದ ಹೃದಯಭಾಗ ರಾಜಾಜಿನಗರ ಮೂರನೇ ಹಂತ 46,ನೇ ಅಡ್ಡರಸ್ತೆ ರಾಮಮಂದಿರ ಹತ್ತಿರ ವಿಷ್ಣುವರ್ಧನ್ ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಅದ್ದೂರಿಯಾಗಿ ೭೬,ನೇ ಗಣರಾಜ್ಯೋತ್ಸವ ವನ್ನು ಆಚರಿಸಲಾಯಿತು.ಸಮಿತಿಯು ನ್ಯಾಯವಾದಿ ಶ್ರೀ ರಮೇಶ್ ಆರ್.ಎ.ಗೌಡ ಅವರ ಸಲಹೆ ಸೂಚನೆಯಂತೆ ಬೆಳಿಗ್ಗೆ 9.30ಗಂಟೆಗೆ ಸ್ಥಳೀಯ ಮುಖಂಡರ ಸಮಕ್ಷಮದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀ ಮೋಹನ್ ಕುಮಾರ್ ರವರು ಮತ್ತು ಬಿಬಿಎಂಪಿ ಮಾಜಿ ಮಹಾ ಪೌರರಾದಶ್ರೀಮತಿ ಮಂಜುಳಾನಾಯ್ಡು ರವರುಮೊದಲು ರಾಷ್ಟ್ರಪಿತ ಮಹಾತ್ಮಾಗಾಂಧಿಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆಮಾಡಿ ದ್ವಜಾರೋಹಣ ನೆರವೇರಿಸಿದರು.
ನಂತರ ವಿಷ್ಣುವರ್ಧನ್ ಕನ್ನಡ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಎಸ್.ಸುರೇಶ್,ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ(ಬಾಬು),ಬಿಎಂ.ಮಂಜುನಾಥ್,ಆರ್.ರವಿ,ಪ್ರಧಾನಕಾರ್ಯದರ್ಶಿ ಹರ್ಷವರ್ಧನ್,ಗೌರವಾಧ್ಯಕ್ಷ ವಿಪಿ.ವಿಜಯಕುಮಾರ್ ರವರ ಉಪಸ್ಥಿತಿಯಲ್ಲಿ ಡಾಕ್ಟರ್ ವಿಷ್ಣುವರ್ಧನ್ ರವರ ೧೫,ನೇ ಪುಣ್ಯಸ್ಮರಣೆ ಅಂಗವಾಗಿ ವಿಷ್ಣುವರ್ಧನ್ ರವರ ಪುಥ್ಥಳಿಗೆ ಪುಷ್ಪಾರ್ಚಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.