ಕರ್ನಾಟಕದ ಹೆಮ್ಮೆಯ ಸಾಬೂನು ಮತ್ತು ಮಾರ್ಜಕಗಳ ನಿಯಮಿತ KSDL ವತಿಯಿಂದ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿರುವ ‘ಮೈಸೂರು ಸ್ಯಾಂಡಲ್ ಸಾಬೂನು ಮೇಳ’ವನ್ನು ಉದ್ಘಾಟಿಸಲಾಯಿತು.
ಸಾಬೂನು ಮೇಳವು ಇಂದಿನಿಂದ ಜನವರಿ 20ರ ವರೆಗೆ, ಬೆಳಗ್ಗೆ 9.30 ರಿಂದ ರಾತ್ರಿ 9.30 ರ ವರೆಗೆ ನಡೆಯಲಿದೆ. ನಿಯಮಿತದ ಎಲ್ಲ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಸಾರ್ವಜನಿಕರು ನಾಡಿನ ಹೆಮ್ಮೆಯ ಸಾಬೂನು ತಯಾರಿಕಾ ಸಂಸ್ಥೆಯ ಉತ್ಪನ್ನಗಳನ್ನು ಕೊಂಡು ಕಾರ್ಖಾನೆಯ ಪ್ರಗತಿಗೆ ಕೈಜೋಡಿಸಬೇಕು ಎಂದು ವಿನಂತಿಸುತ್ತೇನೆ.
ಅತಿ ಶೀಘ್ರದಲ್ಲಿ ವಿಜಯಪುರ-ಇಟ್ಟಂಗಿಹಾಳ ರಸ್ತೆಯಲ್ಲಿರುವ ಸುಮಾರು 10 ಎಕರೆ ಪ್ರದೇಶದಲ್ಲಿ KSDL ನ ಘಟಕವನ್ನು ಸ್ಥಾಪಿಸಿ, ಸುಮಾರು 400ಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ದೊರಕಿಸಿ ಕೊಡಲಾಗುವುದು. ಇದರಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಜನರಿಗೆ ನಿಯಮಿತದ ಗುಣಮಟ್ಟದ ಉತ್ಪನ್ನಗಳು ಸುಲಭವಾಗಿ ಸಿಗಲಿವೆ.
ಸಮಾರಂಭದಲ್ಲಿ ಮಾನ್ಯ ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಎಂ.ಬಿ.ಪಾಟೀಲ್, ಶಾಸಕರಾದ ಶ್ರೀ ಬಸವನಗೌಡ ಪಾಟೀಲ್ ಯತ್ನಾಳ್, ಶ್ರೀ ವಿಠ್ಠಲ್ ಕಟಕದೋಂಡ, ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಶಾಂತ್ ಅವರು ಸೇರಿದಂತೆ ಜಿಲ್ಲೆಯ ಹಾಗೂ ನಿಯಮಿತದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.