ಅನೈತಿಕ ಸಂಬಂಧ ಹಿನ್ನೆಲೆ ಪೊಲೀಸರು ಬಂಧಿಸುವ ವಿಡಿಯೋ ಮಾಡಿ ಬಿತ್ತರಿಸಿದ ಹಿನ್ನೆಲೆ ಸ್ಥಳೀಯ ಪತ್ರಿಕೆ ಸಂಪಾದಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿದ ರಿಯಲ್ ಎಸ್ಟೇಟ್ ದಂಧೆ ಕೋರ ನಾರಾಯಣರೆಡ್ಡಿ ಎಂಬಾತ ಪರಸ್ತ್ರೀ ಜೊತೆ ಅನೈತಿಕ ಸಂಬಂಧ ಹೊಂದಿದ್ದ ದೂರಿನ ಮೇರೆಗೆ ಪೊಲೀಸರು ರೆಡ್‌ಹ್ಯಾಂಡ್ ಬಂಧನ ಮಾಡಿದ್ದರು.
ನಾರಾಯಣ ರೆಡ್ಡಿಯನ್ನು ಪೊಲೀಸರ ಬಂಧಿಸುವ ವಿಡಿಯೋ ರೆಕಾರ್ಡ್ ಮಾಡಿದ್ದ ಪತ್ರಕರ್ತ ಹಾಗೂ ಗಡಿನಾಡು ನ್ಯೂಸ್ ಚಾನಲ್ಲ ಸಂಪಾದಕರಾದ ರಾಮಾಂಜಿನಪ್ಪ ಅವರು
ತಮ್ಮ ಯೂಟೂಬ್ ಚಾನೆಲ್‌ಗೂ ಅಪ್‌ಲೋಡ್ ಮಾಡಿದ್ದರು.
ಈ ವಿಡಿಯೋ ವೈರಲ್ ಆದ ಹಿನ್ನೆಲೆ ಹೆಣ್ಣುಬಾಕ ನಾರಾಯಣ ರೆಡ್ಡಿಯು ಮೂವರು ಮಹಿಳೆಯರನ್ನ ಕರೆತಂದು ಪತ್ರಕರ್ತನಿಗೆ ಚಪ್ಪಲಿಯಲ್ಲಿ ಹೊಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಹಲ್ಲೆ ಬಿಡಿಸಲು ಬಂದವರನ್ನ ತಡೆಯುತ್ತಿದ್ದ ನಾರಾಯಣರೆಡ್ಡಿ
ಹಲ್ಲೆಗೊಳಗಾದ ಸಂಪಾದಕ ರಾಮಾಂಜಿನಪ್ಪ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಇದನ್ನು ಈ ಅಲ್ಲೇ ಖಂಡಿಸಬೇಕಾಗಿ ಎಲ್ಲರಲ್ಲೂ ಮನವಿ ಮಾಡುತ್ತೇವೆ.ಹಣ,ಜಾತಿ,ಅಧಿಕಾರ,ಭ್ರಷ್ಟರ ದಬ್ಬಾಳಿಕೆಗಳು ಪತ್ರಕರ್ತರ ಮೇಲೆ ದಿನದಿನ ಹೆಚ್ಚಾಗುತ್ತಿವೆ ಗೃಹಸಚಿವರು ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಂಡು ಪತ್ರಕರ್ತರಿಗೆ ನ್ಯಾಯ ಒದಗಿಸಬೇಕು ಇದರಬಗ್ಗೆ
ಸರಿಯಾದ ರೀತಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.