ಮೂಡಲಗಿ : ಇತ್ತೀಚೆಗೆ ಹುಬ್ಬಳ್ಳಿ ನಗರದ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮೃತಪಟ್ಟ 7 ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ಪರಿಹಾರ ನೀಡಬೇಕೆಂದು ಗುರುಸ್ವಾಮಿ ರವಿ ನೇಸೂರ್ ಆಗ್ರಹಿಸಿದರು.
ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮೂಡಲಗಿ ತಾಲೂಕಾ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಮೃತಪಟ್ಟ ಮಾಲಾಧಾರಿಗಳ ಕುಟುಂಬಗಳಿಗೆ, ಸರಕಾರದಿಂದ ಕೇವಲ 1 ಲಕ್ಷ ರೂಪಾಯಿ ಪರಿಹಾರ ಧನ ನೀಡಿದ್ದು ಸಮಂಜಸವಲ್ಲ, ಮೃತಪಟ್ಟ ಪ್ರತಿ ಮಾಲಾಧಾರಿ ಕುಟುಂಬಗಳಿಗೆ ಶೀಘ್ರ 5ಲಕ್ಷ ರೂಪಾಯಿ ಪರಿಹಾರ ಸಿಗಬೇಕು ಎಂದು ತಾಲೂಕಿನ ಪ್ರತಿಯೊಂದು ಹಳ್ಳಿಗಳ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಆಗ್ರಹವಾಗಿದೆ ಎಂದರು.
ಸಮಾಜ ಸೇವಕ ಗುರು ಗಂಗಣ್ಣವರ ಮಾತನಾಡಿ, ಮೃತಪಟ್ಟ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಬಡ ಕುಟುಂಬದ ಹಿನ್ನೆಲೆಯವರಾಗಿದ್ದು, ಮಾನ್ಯ ಮುಖ್ಯಮಂತ್ರಿಗಳು ಮೃತಪಟ್ಟ ಎಲ್ಲ 7ಮಾಲಾಧಾರಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಬಾಳಯ್ಯ ಹಿರೇಮಠ, ದಾದು ಜಂಡೇಕುರುಬರ, ಕೃಷ್ಣ ಗಿರನ್ನವರ್, ವಿನೋದ ಎಮ್ಮಿ, ಬಸವರಾಜ ತೇಲಿ, ಶಿವು ಮೆಣಸಿ, ಸಂಜು ಕಮತೆ, ಶ್ರೀಶೈಲ್ ವಂಟಗೋಡಿ, ಮೌನೇಶ್ ಬಡಿಗೇರ್, ಹೊಳೆಪ್ಪ ಶಿವಾಪೂರ, ಪ್ರಜ್ವಲ್ ಪುಟಾಣಿ, ಸದಾಶಿವ ಗುಡ್ಲಮನಿ, ರಾಘು ಕಪ್ಪಲಗುದ್ದಿ, ಬಸವರಾಜ ತೇಲಿ, ಸುರೇಶ್ ಎಮೈ ಚಂದ್ರು ಜಂಡೆಕುರುಬರ
ಸುರೇಶ್ ಮೆಳವಕಿ
ಚಿಟ್ಟೆ ಬಾಬು ಸೇರಿದಂತೆ ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಅನೇಕ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಉಪಸ್ಥಿತರಿದ್ದರು.