ಮಹಾನಗರ ಪಾಲಿಕೆಯ ಕಲ್ಯಾಣ ಇಲಾಖೆಯಲ್ಲಿ 2024-25 ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವರ್ಗಗಳ ಪೌರಕಾರ್ಮಿಕರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು, ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗ, ವಿಶೇಷ ಚೇತನದ ವರ್ಗ, ತೃತೀಯ ಲಿಂಗಿಗಳ ಮತ್ತು ಮಹಿಳಾ ವರ್ಗದ ಅರ್ಹ ಅಭ್ಯರ್ಥಿಗಳಿಂದ ಭೌತಿಕ ಹಾಗೂ ಅಂತರ್ಜಾಲ ತಂತ್ರಾಂಶ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

  1. ಒಂಟಿ ಮನೆ ನಿರ್ಮಾಣ / ಅಮೃತ ಮಹೋತ್ಸವ ಯೋಜನೆ.
  2. ಶೈಕ್ಷಣಿಕ ಕಾರ್ಯಕ್ರಮದಡಿಯಲ್ಲಿ ಶಾಲಾ ಶುಲ್ಕ ಮರುಪಾವತಿ / ಉನ್ನತ ವ್ಯಾಸಂಗಕ್ಕೆ / ವಿದೇಶ ವ್ಯಾಸಂಗಕ್ಕಾಗಿ ಸಹಾಯಧನ.
  3. ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಗಂಭೀರ ಸ್ವರೂಪ ಕಾಯಿಲೆಗಳಿಗೆ / ಹಿರಿಯ ನಾಗರೀಕರ ಆರೋಗ್ಯ ತಪಾಸಣೆ / ವಿಶೇಷ ಚೇತನರಿಗೆ ಅಂಗ ಜೋಡಣೆ / ಅಂಗವೈಫಲ್ಯ ಸರಿಪಡಿಸುವ ಶಸ್ತ್ರಚಿಕಿತ್ಸೆಗೆ / ವಿಶೇಷ ಚೇತನರಿಗೆ ಫೀಜಿಯೋತೆರಫಿಗೆ ಸಹಾಯಧನ.
  4. ಆರ್ಥಿಕ ಸಹಾಯ ಹಾಗೂ ಪ್ರೋತ್ಸಾಹ ಧನದಡಿಯಲ್ಲಿ ಸಂಗೀತ ಸಾಧನ ಖರೀದಿಸಲು / ಕ್ರೀಡಾಪಡುಗಳಿಗೆ, ಸಣ್ಣ ಉದ್ಯಮ ಹಾಗೂ ಸ್ವಯಂ ಉದ್ಯೋಗಕ್ಕೆ / ವಿಶೇಷ ಚೇತನರಿಗೆ ಮೆಡಿಕಲ್ ಶಾಫ್‌ಗೆ / ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸ್ವಂತ ಸಣ್ಣ ಕೈಗಾರಿಕೋದ್ಯಮ ಸ್ಥಾಪಿಸಲು / ಆಟೋ, ಕಾರ್ ಖರೀದಿಸಲು ಸಹಾಯಧನ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ.
  5. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿರುವ / ನಡೆಸುವ ಸಂಘಸಂಸ್ಥೆಗಳಿಗೆ / ವಿಶೇಷ ಚೇತನ ಸಂಸ್ಥೆಗಳಿಗೆ ವಿದ್ಯಾಸಂಸ್ಥೆಗಳಿಗೆ ಆರ್ಥಿಕ ಸಹಾಯ,
  6. ಪೌರಕಾರ್ಮಿಕರಿಗೆ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಎಲೆಕ್ಟಿಕಲ್ ದ್ವಿಚಕ್ರ ವಾಹನ ವಿತರಣೆ (ಗಾರ್ಮೆಂಟ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು).
  7. ಮಹಿಳಾ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ.
  8. ವಿಶೇಷ ಚೇತನರಿಗೆ ಹೆಚ್ಚುವರಿಯಾಗಿ ಅಳವಡಿಸಿರುವ ಉಚಿತ ದ್ವಿಚಕ್ರ ವಾಹನ ವಿತರಣೆ.
  9. ವಿಶೇಷ ಚೇತನರಿಗೆ ಉಚಿತ ಎಲೆಕ್ಟಿಕಲ್ ವೀಲ್ ಚೇರ್ ವಿತರಣೆ.
  10. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಬೀದಿ ಬದಿ ವ್ಯಾಪಾರಿಗಳಿಗೆ ಇ-ಮಾರಾಟದ ವಾಹನ ಖರೀದಿಗೆ ಸಹಾಯಧನ ಶೇ.90ರಷ್ಟು ಅಥವಾ ರೂ.1.50 ಲಕ್ಷಗಳವರೆಗೆ ಯಾವುದು ಕಡಿಮೆಯೋ ಸದರಿ ಮೊತ್ತದ ಸಹಾಯಧನ.
  11. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ, ಪೌರ ಕಾರ್ಮಿಕರ ಮಕ್ಕಳಿಗೆ ಹಾಗೂ ಎಲ್ಲಾ ವರ್ಗದ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ

ಸೂಚನೆ: ಮೇಲ್ಕಂಡ ಕಲ್ಯಾಣ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ಪಾಲಿಕೆ Website: https://site.bbmp.gov.in/departmentwebsites/welfare/welfareactivies.html ನಿಂದ ಪಡೆಯಬಹುದಾಗಿದೆ. ಅನುದಾನದ ಲಭ್ಯತೆಯನ್ನು ಪರಿಗಣಿಸಿ ಮೇಲ್ಕಂಡ ಕಾರ್ಯಕ್ರಗಳಿಗೆ ಆಯ್ಕೆಯಾಗುವ ಫಲಾನುಭವಿಗಳಿಗೆ ಸೌಲಭ್ಯವನ್ನು ನೀಡಲಾಗುವುದು / ವಿತರಿಸಲಾಗುವುದು.

2024-25 ನೇ ಸಾಲಿನ ಪಾಲಿಕೆಯ ಅನುಮೋದಿತ ಮಾರ್ಗಸೂಚಿಗಳ ಅನುಸಾರ ಅರ್ಜಿಯನ್ನು ನಗರ ಪಾಲಿಕೆಯ ಸಂಬಂಧಪಟ್ಟ ವಲಯ ಸಹಾಯಕ ಕಂದಾಯ ಅಧಿಕಾರಿ (ಕಲ್ಯಾಣ) ರವರ ಕಛೇರಿಯಿಂದ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಭೌತಿಕ ಅರ್ಜಿಗಳನ್ನು ದಿನಾಂಕ: 04-02-2025 ರೊಳಗೆ ಆಯಾ ವಲಯಗಳ ಸಹಾಯಕ ಕಂದಾಯ ಅಧಿಕಾರಿ (ಕಲ್ಯಾಣ) ರವರ ಕಛೇರಿಗಳಲ್ಲಿ ಸಲ್ಲಿಸಬಹುದಾಗರುತ್ತದೆ ಎಂದು
ವಿಶೇಷ ಆಯುಕ್ತರು (ಕಲ್ಯಾಣ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here