ದಾವಣಗೆರೆ:ದಿನಾಂಕ 16/12/2024 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನಾ ಸಮಾರಂಭವನ್ನು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದ್ದು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಪ್ರಾಂಶುಪಾಲರು ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಪ್ರಶಸ್ತಿ ವಿಜೇತರಾದ ಶ್ರೀ ಪರಶುರಾಮ್ ಕಟಾವ್ಕರ್ ರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಡಾ ಹೆಚ್ ಆರ್ ತಿಪ್ಪೇಸ್ವಾಮಿ ಜಿಲ್ಲಾ ನೋಡಲ್ ಅಧಿಕಾರಿಗಳು ದಾವಣಗೆರೆ ವಿಶ್ವವಿದ್ಯಾಲಯ. ಇವರು ಆಗಮಿಸಿ ತಮ್ಮ ಅಮೂಲ್ಯವಾದ ಮಾತುಗಳ ಮೂಲಕ ಸ್ವಯಂಸೇವಕರಲ್ಲಿ ಪ್ರೇರೆಪಣೆಯನ್ನು ಮೂಡಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಬಸವರಾಜ್ ಸಿ ತಹಶೀಲ್ದಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಇವರು ವಹಿಸಿಕೊಂಡಿದ್ದರು. ಇವರೊಂದಿಗೆ ಪ್ರೊ ರುದ್ರಪ್ಪ ಕೆ ಎಂ ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ದಾವಣಗೆರೆ, ಡಾ ಗುರುರಾಜ್ ಜೆ ಪಿ ಸಂಚಾಲಕರು IQAC, ಜಗದೀಶ್ ಸರ್ ಇತಿಹಾಸ ವಿಭಾಗ ಶ್ರೀಮತಿ ಪ್ರತಿಭಾ ಅಧೀಕ್ಷಕರು, ಪ್ರೊ. ರಾಜಕುಮಾರ್ ಎಂ ಸಹಪ್ರಾಧ್ಯಾಪಕರು ಇತಿಹಾಸ ವಿಭಾಗ ಪ್ರೊ. ಸುರೇಶ ಎಚ್ ಎನ್ ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕರು, ವೆಂಕಟೇಶ ಬಾಬು ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕರು. ರೆಹಮಾನ್ ಸರ್. ರೂಪಶ್ರೀ ಮೇಡಂ ಮೊದಲಾದ ಪ್ರಾಧ್ಯಾಪಕರು NSS ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ರವಿಕುಮಾರ್ ಜಿ ಮತ್ತು ಮಂಜುನಾಥ ಎನ್ ಜಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 150 ಕ್ಕಿಂತ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here