ತೆಲಂಗಾಣದಲ್ಲಿ, ತೆಲಂಗಾಣ ರಾಷ್ಟ್ರ ಕುರುಬ ಸಂಗಮ ರವರು ಆಯೋಜಿಸಲಾದ “ದೊಡ್ಡಿ ಕೊಮಾರಯ್ಯ ಕುರುಮಲ ಆತ್ಮಗೌರವ ಎಂಬ ನೂತನ ಭವನದ” ಉದ್ಘಾಟನಾ ಸಮಾರಂಭದಲ್ಲಿ ಮಾನ್ಯ ತೆಲಂಗಾಣ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಅನುಮೂಲ ರೇವಂತ್ ರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣನವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾನ್ಯ ಹರ್ಯಾಣ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ಭಂಡರೂ ದತ್ತಾತ್ರೇಯ ಕುರುಮ ರವರು, ಸಾರಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಪೊನ್ನಂ ಪ್ರಭಾಕರ ರವರು, IT, E&C, ಕೈಗಾರಿಕೆ ಮತ್ತು ವಾಣಿಜ್ಯ ಮತ್ತು ಶಾಸಕಾಂಗ ವ್ಯವಹಾರಗಳ ಸಚಿವರಾದ ಶ್ರೀ ದುಡ್ಡಿಲ್ಲ ಶ್ರೀಧರ್ ಬಾಬು ರವರು, ರಾಜೇಂದ್ರನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಟಿ ಪ್ರಕಾಶ್ ಗೌಡ ರವರು, ತೆಲಂಗಾಣ ಸರ್ಕಾರದ ವಿಪ್ ಹಾಗೂ ಶಾಸಕರಾದ ಶ್ರೀ ಬೀರಲ್ಲಯ್ಯ ರವರು, ತೆಲಂಗಾಣ ರಾಷ್ಟ್ರ ಕುರುಮ ಸಂಘದ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಯೆಗ್ಗೆ ಮಲ್ಲೇಶಂ ರವರು ಮತ್ತು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿಗಳಾದ ಎಂ.ಹೆಚ್.
ಕೋಟಪ್ಪರವರು ಉಪಸ್ಥಿತರಿದ್ದರು.