ನಮಗೆ ಯಾವುದೇ ಮೀಸಲಾತಿ ಬೇಡ “ಲಿಂಗಾಯತ”
ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಕೇಂದ್ರಕ್ಕೆ ಸಿಫಾರಸ್ಸು ಮಾಡಿ ಅಂತ ಇದೆ ಸಿದ್ರಾಮಯ್ಯನವರಿಗೆ ಮನವಿ ಅರ್ಪಿಸಿದಾಗ ಇದೆ ಸಿದ್ರಾಮಯ್ಯನವರು ಅವರ ಆಶಯದಂತೆ ಕೇಂದ್ರಕ್ಕೆ ಸಿಫಾರಸ್ಸು ಮಾಡಿದರು.ಆಗ ಇದೆ ಸ್ವಾಮೀಜಿಗಳು ಎಲ್ಲರೂ ಸಿದ್ದರಾಮಯ್ಯನವರನ್ನು ಇಂದ್ರ ಚಂದ್ರ ಅಭಿನವ ಬಸವಣ್ಣ ಅಂತ ಹಾಡಿ ಹೊಗಳಿದ್ದರು.
ಲಿಂಗಾಯತ ವೀರಶೈವರು ಎರಡೂ ಒಂದೇ ಇಬ್ಬರನ್ನೂ (ಧರ್ಮವನ್ನು) ಸಿದ್ರಾಮಯ್ಯ ಒಡೆಯುತ್ತಿದ್ದಾರೆ ಅಂತ ಬಿಜೆಪಿಯವರು ಬೊಬ್ಬೆ ಹೊಡೆದರು
ಕೇಂದ್ರ ಸರ್ಕಾರ ಮಾನ್ಯತೆ ಕೊಡದೆ ತಿರಸ್ಕರಿಸಿತು ಇದಕ್ಕೆ ಕೇಂದ್ರದ ವಿರುದ್ದ ಪ್ರತಿಭಟನೆ ಹೋರಾಟ ಮಾಡುವುದು ದೂರದ ಮಾತು ಆಟ್ಲಿಸ್ಟ್ ತುಟಿ ಪಿಟಿಕ್ ಅಂತ ಯಾರೂ ಅನ್ನಲಿಲ್ಲ…
ಈಗ ಪೂಜ್ಯ ಸ್ವಾಮೀಜಿಗಳು ಏನೇನೊ ಮಾತಾಡ್ತಿದ್ದಾರೆ.
ಕೇವಲ 3% ಇರೋರಿಗೆ 10% ಮೀಸಲಾತಿ ಕೊಟ್ಟಿದ್ದಾರಲ್ಲ ಅದರಲ್ಲಿ 2% ಕೊಡಿ ಅಂತ ಯಾಕೆ ಕೇಳಬಾರದು ಪೂಜ್ಯ ಮಹಾಸ್ವಾಮಿಗಳು
ನಾನು ಮೀಸಲಾತಿ ವಿರೋಧಿ ಅಲ್ಲ ಆದರೆ ಒಬ್ಬರದನ್ನು ಕಸಿದು ಇನ್ನೊಬ್ಬರಿಗೆ ಕೊಡುವುದನ್ನು ವಿರೋಧಿಸುತ್ತೇನೆ.
ನ್ಯಾಯಕ್ಕಾಗಿ ಪ್ರತಿಭಟನೆ ಮಾಡುವ ಹಾಗೂ ಹೋರಾಟ ಮಾಡುವ ಯಾರೆ ಆಗಿರಲಿ ಅವರ ಮೇಲೆ ಲಾಠಿ ಪ್ರಹಾರವನ್ನು ಖಂಡಿಸುತ್ತೇನೆ ವಿರೋಧಿಸುತ್ತೇನೆ
(ಸಾಮಾಜಿಕ ಜಾಲತಾಣ)