ಬಾಗಲಕೋಟೆ:ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಾವರಗಿಗ್ರಾಮಪಂಚಾಯತ್ ವ್ಯಾಪ್ತಿಯ ಇಂದವಾರ ಗ್ರಾಮದ ರೈತರಿಗೆ ಕರಡಿ ಕೃಷಿ ಇಲಾಖೆಯವರು ವಿತರಿಸಿದ ತೊಗರಿ ಬೀಜವನ್ನು ತಂದು ಸುಮಾರು ಆರು ಎಕರೆಯಲ್ಲಿ ಬಿತ್ತನೆ ಮಾಡಿದ ರೈತನ ಹೊಲದಲ್ಲಿ ಆಳೆತ್ತರಕ್ಕೆ ತೊಗರಿ ಬೆಳೆದು ನಿಂತಿದೆ.

ಇಂದವಾರ ಗ್ರಾಮದ ರೈತ ಶಿವಪ್ಪ ಕುರಬರ್ ಇವರು ಸುಮಾರು ಹಣ ಸಾಲಸೂಲಮಾಡಿ ಬಿತ್ತನೆಮಾಡಿ ಬೆಳೆಯನ್ನು ಆರೈಕೆಮಾಡಿದ್ದಾರೆ.ಆದರೆ ಆಳೆತ್ತರಕ್ಕೆ ಬೆಳೆದುನಿಂತ ತೊಗರಿಬೆಳೆಯಲ್ಲಿ ಹೂವು,ಕಾಯಿ ಇಲ್ಲದೆ ಜೆ ಗಿಡವಾಗಿದ್ದು ರೈತ ತಲೆ ಮೇಲೆ ಕೈಹೊತ್ತು ಕುಳಿತು ಸಾಲಮಾಡಿ ಬೆಳೆದ ಬೆಳೆಯು ಬಂಜೆಯಂತೆ ನಿಂತಿರುವುದನ್ನು ನೋಡಿ ಕಂಗಾಲಾಗಿ ಬೆಳೆಗಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಎಂದು ಕಣ್ಣೀರಿಡುತಿದ್ದಾರೆ.

ಆಗ ರೈತರ ನೆರವಿಗೆ ಬಂದ ಕರ್ನಾಟಕ ರಾಜ್ಯರೈತಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ನಾಗರಾಜ್ ಹೂಗಾರ್ ರವರು ರೈತ ಶಿವಪ್ಪ ಕುರುಬರ್ ರವರಿಗೆ ಧೈರ್ಯ ಹೇಳಿ ತಾಲೂಕು ಕೃಷಿಅಧಿಕಾರಿಗಳಗಮನಕ್ಕೆ ತರಲು ನಾಲ್ಕಾರು ಬಾರಿ ಖರ್ಚುಮಾಡಿಕೊಂಡು ಕೃಷಿಕಚೇರಿಗೆ ಹೋದರೂಸಹ ಕೃಷಿಅಧಿಗಾರಿಗಳು ಕಚೇರಿಯಲ್ಲಿ ಸಿಕ್ಕಿಲ್ಲಾ ಮತ್ತು ದೂರವಾಣಿಮುಖಾಂತರ ಸಂಪರ್ಕಿಸಿದರೂ ಪ್ರಯೋಜನವಾಗಿರಲಿಲ್ಲಾ.ಆದರೆ ಶ್ರೀ ನಾಗರಾಜ್ ಹೂಗಾರರವರ ನಿರಂತರ ಪ್ರಯತ್ನದಿಂದಾಗಿ

ದಿನಾಂಕ:೦೬-೧೨-೨೦೨೪,ರಂದು ಇಲಕಲ್ ಕರಡಿ ವಲಯದ ಕೃಷಿಅಧಿಕಾರಿಯವರು ಸ್ವತಃ ಇಂದವಾರ ಗ್ರಾಮದ ಶ್ರೀ ಶಿವಪ್ಪ ಕುರುಬರ್ ರವರ ತೊಗರಿಬೆಳೆಯ ಹೊಲಕ್ಕೆ ಹೋಗಿ ಸಮಕ್ಷಮ ಪರಿಶೀಲನೆ ಮಾಡಿಕೊಂಡಿದ್ದಾರೆ.
ಈ ಸಮಯದಲ್ಲಿ ಕೃಷಿಅಧಿಕಾರಿಯವರು ರೈತರಿಸಾಂತ್ವನದ ಮಾತುಗಳನ್ನು ಹೇಳುತ್ತಾ ತಮಗೆ ಆದ ಅನ್ಯಾಯವನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ತಮಗೆ ಸೂಕ್ತರೀತಿಯಲ್ಲಿ ನ್ಯಾಯಯುತವಾಗಿ ಪರಿಹಾರ ಒದಗಿಸಲು ಮತ್ತು ಕಳಪಿ ಬೀಜವಿತರಿಸಿದವರ ಕುರಿತು ಕ್ರಮಕ್ಕೆ ಪೂರಕವಾದ ವರದಿಯನ್ನು ಸರ್ಕಾರಕ್ಕೆ ಮತ್ತು ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.ಈ ಸಂದರ್ಭದಲ್ಲಿ ರೈತರು,ರೈತಸಂಘದ ಪದಾಧಿಕಾರಿಗಳು,ಗ್ರಾಮದ ಮುಖಂಡರು,ಮಾಧ್ಯಮದಕೆಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here