ಮೂಡಲಗಿ:ನ,28- ಸಮೀಪದ ಮುಗಳಖೋಡದಲ್ಲಿ ಜರುಗಿದ ಶ್ರೀ ನಿಜಗುಣ ಶಿವಯೋಗಿ ಜಯಂತಿ ನಿಮಿತ್ಯವಾಗಿ ಶ್ರೀ ಶಂಭುಲಿಂಗ ಭಜನಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೂಡಲಗಿಯ ಸಿದ್ಧಿ ಸೋಂಗು ಕಲಾವಿದರಾದ ಚುಟುಕುಸಾಬ ಮಂಟೂರ (ಜಾತಗಾರ), ಸೈಪನಸಾಬ ಇಮಾಮಸಾಬ ಮಂಟೂರ, ಹುಸೇನಬಿ ಮಂಟೂರ ಹಾಗೂ ಅನೀತ ನೊಂದರಗಿ ಇವರು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಕನ್ನಡ “ಜಾನಪದ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಚುಟುಟುಕಸಾಬ ಮಂಟೂರ (ಜಾತಗಾರ) ಇವರ ಮುತ್ತಾತನ ಕಾಲದಿಂದ ನಡೆದುಕೊಂಡು ಬಂದಿರುವ ಸಿದ್ಧಿ ಸೋಂಗ.ಇದಕ್ಕೆ ಬಹಳ ಇತಿಹಾಸ ಇರುವುದು. ಅವರ ಶ್ರಮಕ್ಕೆ ಬೆಲೆ ಸಿಗಬೇಕು.
ಗಣ್ಯರಾದ ರಾಮಣ್ಣ ಮಾಳಿ ಇವರ ಭಕ್ತೀಯ ಸೇವೆಯಲ್ಲಿ ಭಜನಾ ಮಂಡಳಿ ಅಧ್ಯಕ್ಷ ಮಹಾಲಿಂಗ ಯಡವನ್ನವರ, ಸಂಚಾಲಕ ಬಸವರಾಜ ಗೋಕಾಕ, ಮುಖ್ಯ ಅತಿಥಿಗಳಾದ ಹಸನಸಾಬ ನದಾಫ್ ಹಾಗೂ ಮೀರಾಸಾಬ ನದಾಫ್ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಊರಿನ ಹಿರಿಯ ಪ್ರಮುಖ ಗಣ್ಯರು , ಅನೇಕ ಕಲಾವಿದರು ಹಾಗೂ ಮತ್ತಿತರರು ಇದ್ದರು