ಮೂಡಲಗಿ:ನ,೨೨- ಪಟ್ಟಣದ ಆರ್ ಡಿ ಎಸ್ ಕಾಲೇಜಿನಲ್ಲಿ ನವೆಂಬರ್, ೨೩ ಮತ್ತು ೨೪ ರಂದು ಎರಡು ದಿನಗಳವರೆಗೆ ಬೆಳಗಾವಿ ಜಿಲ್ಲಾ ೧೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಮ್ಮೇಳನ ಸರ್ವಾಧ್ಯಕ್ಷರಾದ ಪ್ರೊ.ಚಂದ್ರಶೇಖರ ಅಕ್ಕಿ ಸಂದರ್ಶನ.
ದುಂಡಪ್ಪ ಹಾಗೂ ಅಂಬವ್ವ ಈ ದಂಪತಿಗಳ ಮಗನಾಗಿ ತಾಯಿ ತವರೂರಾದ ನಭಾಪೂರದಲ್ಲಿ (ಖನಗಾವಿ) ಡಿಸೆಂಬರ್,೨೪-೧೯೪೮ರಲ್ಲಿ ಚಂದ್ರಶೇಖರ ಅಕ್ಕಿಯವರು ಜನಿಸಿದರು.
ಗೋಕಾಕದಿಂದ ಮೂಡಲಗಿ ತಾಲೂಕನ್ನಾಗಿ ಬೇರ್ಪಟ್ಟು ೭,೮ ವರ್ಷವಾಯಿತು.ಇಂದಿಗೂ ಅವಳಿ ತಾಲೂಕು/ನಗರ ಎಂದು ಕರೆಯೂವುದುಂಟು.
ಪ್ರೊ.ಚಂದ್ರಶೇಖರ ಅಕ್ಕಿಯವರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಅಪಾರ.ಅವರದೆಯಾದ ಪ್ರಕಾಶನಗಳು “ಮೈತ್ರಿ ಪ್ರಕಾಶನ” ಹಾಗೂ “ಪೂರ್ಣಿಮಾ ಪ್ರಕಾಶನ” ಈ ಪ್ರಕಾಶನದಲ್ಲಿ ಅವರ ಬರೆದಂತ ಕೃತಿ ಮುದ್ರಣವಾಗಿದ್ದಾವೆ. ಹಲವಾರು ಸಂಘಗಳಲ್ಲಿ ಗುರ್ತಿಸಿಕೊಂಡು ಹೋರಾಟದ ಮುಂಚುನಿಯಲ್ಲಿ ಇರುತ್ತಿದರು.ನಾಟಕದ ಗೀಳುಕೂಡಾ ಅವರಿಗಿತ್ತು.
ಗೋಕಾವಿ ಹಾಗೂ ಮೂಡಲ ನಾಡಿನಲ್ಲಿ ಶಿಷ್ಯರಿಗೆ ಗುರುಗಳಾಗಿ,ಆತ್ಮೀಯರಿಗೆ ಬಂಧುವಾಗಿ,ನೆಂಟರಿಗೆ ಹತ್ತಿರವಾಗಿ,ಪತ್ನಿಗೆ ಆದರ್ಶ ಪತಿಯಾಗಿ,ಮಕ್ಕಳಿಗೆ ಒಳ್ಳೆಯ ಮಾರ್ಗ ನೀಡುವ ತಂದೆಯಾಗಿ,ಓದುವ ಗೀಳು ಹಾಗೂ ಬರವಣಿಗೆಗೆ ಮನಸ್ಸಿಟ್ಟು ಸಾಹಿತಿಗಳಾದ ಪ್ರೊಫೆಸರ್, ಚಂದ್ರಶೇಖರ ಅಕ್ಕಿಯವರು.
ಸಾಹಿತ್ಯ ವಿಷಯಕ್ಕೆ ಸಂಬಂಧಿಸಿದಂತೆ ಸಭೆ-ಸಮಾರಂಭ ,ಹೋರಾಟ, ಸಂಘಟನೆಯ ಚಟುವಟಿಕೆ ಅಕ್ಕಿ ಅವರ ಮಹತ್ವದ ಪಾತ್ರ.ಸಾಹಿತ್ಯದ ಏನೇ ಕೆಲಸ ಇರಲಿ ನಿರ್ಣಾಯಕರು ಅವರೆ.ಒಲವು-ನಿಲವು,ತರ್ಕಬದ್ಧ-ತೂಕಬದ್ದ ಮಾತುಗಳೇ ಇದಕ್ಕೆಲ್ಲ ಕಾರಣ. ಅವರ ಜೊತೆಯಲ್ಲಿ ಒಂದು ಚಿಕ್ಕ ಸಂದರ್ಶನ.
ಪತ್ರಕರ್ತ-ನಿಮ್ಮ ಮತ್ತು ಹೆಸರಾಂತ ಕಾದಂಬರಿಕಾರರಾದ ಬಸವರಾಜ ಕಟ್ಟೀಮನಿಯ ಸಂಬಂಧ ಹೇಗಿತ್ತು ಗುರುಗಳೇ. ಅಕ್ಕಿ-ಉತ್ತಮ ಬರಹಗಾರರು ಮತ್ತು ಕಪಟ-ಮೋಸ ಇಲ್ಲದ ವ್ಯಕ್ತಿ ಹಾಗೂ ಅವರ ಜೊತೆ ಒಳ್ಳೆಯ ಒಡನಾಟ ಮತ್ತು ನೇರ ನುಡಿ.ಅವರ ಜೊತೆಗಿನ ದಿನಗಳು ನೆನಪು ಮಾತ್ರ ಇಂದು.
ಪತ್ರಕರ್ತ-ನಿಮ್ಮ ಹಾಗೂ ವಿದ್ಯಾರ್ಥಿಗಳ ಸಂಬಂಧ ಹೇಗೆ. ಅಕ್ಕಿ-ನನ್ನ ಮರು ಜನ್ಮ ಇದ್ದರೆ ವಿದ್ಯಾರ್ಥಿಗಳ ಹೊಟ್ಟೆಯಲ್ಲಿ ಹುಟ್ಟಬೇಕು!. ವಿದ್ಯಾರ್ಥಿಗಳು ಪಾಠಕ್ಕೆ ತಮಗೆ ಬೇಕಾದ ಪ್ರಶ್ನೆ ಕೇಳಿದರು,ಬೇಸರ ಮಾಡಿಕೊಳ್ಳದೆ ಮನೆ ಇರಲಿ,ಕಾಲೇಜು ಇರಲಿ ಅವರ ಸಮಸ್ಯೆಗೆ ಸ್ಪಂದಿಸುವುದೆ ನನ್ನ ಕಾಯಕ.
ಪತ್ರಕರ್ತ-ಹಿಂದಿನ ಬರವಣಿಗೆಗೂ ಹಾಗೂ ಇಂದಿನ ಬರವಣಿಗೆಗೂ ಇರುವ ವ್ಯತ್ಯಾಸವೇನೂ ಸ್ವಾಮಿ.
ಅಕ್ಕಿ-ಪಂಪ,ಪೊನ್ನ,ರನ್ನ,ಕುಮಾರವ್ಯಾಸ ಮತ್ತು ಇನ್ನು ಅನೇಕರು ಹಳೆಗನ್ನಡದ ಮಹಾನ ಬರಹಗಾರರು ಜನ್ಮ ತಾಳಿದ ಸಾಹಿತ್ಯ ಭೂಮಿ ಕನ್ನಡನಾಡು.
ಇತ್ತೀಚಿನ ದಿನಗಳಲ್ಲಿ ಪುಸ್ತಕ ಬಿಡುಗಡೆ ಸಾಕಷ್ಟು ಆಗುತ್ತಾ ಇರುತ್ತಾವೆ.ಆದರೆ ಕೆಲವು ಪುಸ್ತಕಗಲ್ಲಿ ಸ್ವಾರಸ್ಯಕರ/ಗಟ್ಟಿ ತನವೆ ಇರುವುದಿಲ್ಲ ಮತ್ತು ಓದುಗರ ಸಂಖ್ಯೆ ಬಹಳ ಕಡಿಮೆಯಾಗಿದೆ.
ಪತ್ರಕರ್ತ-ಮೊಬೈಲದಿಂದ ಓದುಗರ ಸಂಖ್ಯೆ ಕಡಿಮೆ ಆಗುತ್ತಿರುವುದಾ..?
ಅಕ್ಕಿ-ಬಹುತೇಕರು ಆಂಗ್ಲ ಮಾಧ್ಯಮದಲ್ಲಿ ಓದುಸುತ್ತಿರುವ ತಮ್ಮ ಮಕ್ಕಳ ಪಾಠ ಕ್ಕಾಗಿ ಮೊಬೈಲ್ ಬಳಸುತ್ತಿರಬಹುದು?.ಕನ್ನಡದಲ್ಲಿ ಮಕ್ಕಳಿಗೆ ಪಾಠದ ವಿವರಣೆ ತಿಳಿಸಿದ ಹಾಗೆ ಆಂಗ್ಲ ಭಾಷೆಯಲ್ಲಿ ಹೇಳಲು ಕಷ್ಟ!.
ನಮ್ಮ ದೇಶದ ಪ್ರಾದೇಶಿಕ ಭಾಷೆಯ ಮೇಲೆ ಸವಾರಿ ಮಾಡುತ್ತಿರುವ ಅನ್ಯ ಭಾಷೆ.ಕನ್ನಡದಲ್ಲಿ ಓದಿ ದೊಡ್ಡ ಸಾಧನೆ ಮಾಡಿದವರು ಇಂದಿಗೂ ಇದ್ದಾರೆ,ಮುಂದೆನು ಬರುತ್ತಾರೆ.ಎಲ್ಲ ಭಾಷೆ ಕಲಿಯಲಿ,ಕನ್ನಡ ಭಾಷೆಯ ಗಟ್ಟಿತನ ಅರ್ಥಕೂಡಾ ಆಗಲಿ ಎಲ್ಲರಿಗೂ.ಮಾತೃಭಾಷೆಯು ನಾಡಿ ಸಂಸ್ಕ್ರತಿ ಹೇಳಿ ಕೊಡುತ್ತದೆ. ಸಂಸ್ಕ್ರತಿಯೇ ಇಲ್ಲವಾದರೆ ಬಾಂಧವ್ಯಕ್ಕೆ ಬೆಲೆ ಇದೆಯಾ?. ಮೊದಲು ತಂದೆ-ತಾಯಿ
ಬಿಡಬೇಕು,ಆಮೇಲೆ ಮಕ್ಕಳು ಮೊಬೈಲ್ ನೋಡುವುದು ಬಿಡುತ್ತಾರೆ.
ಪತ್ರಕರ್ತ-ಸರ್ಕಾರಿ ಕನ್ನಡ ಶಾಲೆಗಳು ಪ್ರತಿವರ್ಷವು ಮುಚ್ಚಲು ಪ್ರಮುಖ ಕಾರಣವೇನು ಗುರುಗಳೆ.
ಅಕ್ಕಿ-ಅದಕ್ಕೆಲ್ಲ ಮೊದಲಿಂದಲು ಹೋರಾಟ ಮಾಡಿಕೊಂಡು ಬಂದಿರುವುದು.ಸರ್ಕಾರ ಮನಸ್ಸು ಮಾಡಿದರೆ ಎಲ್ಲವು ಸರಿಯಾಗುತ್ತದೆ.
ಪತ್ರಕರ್ತ-ಕಲ್ಲೋಳಿ ಪಟ್ಟಣದಲ್ಲಿ ೨೦೧೬-ನವೆಂಬರ್,೧೨ ರಂದು ತಾಲೂಕಾ ಸಮ್ಮೇಳನದ ಅಧ್ಯಕ್ಷರಾಗಿದ್ದು,ಈಗ ಜಿಲ್ಲಾ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಿರಿ..ಇದರ ಬಗ್ಗೆ ತಮ್ಮ ಅಭಿಪ್ರಾಯ ವೇನು.
ಅಕ್ಕಿ- ಅದು ಪರಿಷತ್ತಿನ ಆಯ್ಕೆ ಮತ್ತು ಜನರ ಪ್ರೀತಿ-ವಿಶ್ವಾಸ ಸಹ ಕಾರಣ ಇರಬಹುದು?.ನನ್ನ ಕೆಲಸ ಕನ್ನಡ ಸೇವೆ ಮಾಡುವುದು ಅಷ್ಟೇ.ಅದರ ಪ್ರತಿಫಲ ಕಾಲಕ್ಕೆ ತಕ್ಕಂತೆ ಸಿಗುತ್ತದೆ.
ಪತ್ರಕರ್ತ-ನನ್ನ ಕೊನೆಯ ಪ್ರಶ್ನೆ ಅತೀ ಅಮೂಲ್ಯವಾದ ಸಾವಿರಾರು ಪುಸ್ತಕಗಳನ್ನು ಕಲ್ಲೋಳಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಗೆ ಉಡುಗೊರೆಯಾಗಿ ಕೊಟ್ಟಿದ್ದಿರಿ ಏಕೆ?.
ಅಕ್ಕಿ-ಅವು ನನ್ನ ಮನೆಯಲ್ಲಿ ಇರುವುದುಕ್ಕಿಂತ,ನೂರಾರು ವಿದ್ಯಾರ್ಥಿಗಳಿಗೆ ಓದಲು ಸಹಕಾರಿಯಾಗಲಿ ಅಂತ ಕೊಟ್ಟಿರುವುದು.ಅದು ಅಲ್ಲದೇ ಜ್ಞಾನ ನಿಂತ ನೀರಲ್ಲ.
ಪತ್ರಕರ್ತ-ಧನ್ಯವಾದಗಳು ಗುರುಗಳೆ. ಸರ್ವಾಧ್ಯಕ್ಷರ ಸಂಕ್ಷಿಪ್ತ ಮಾಹಿತಿ ಈಗ ನಿಮ್ಮ ಮುಂದೆ ನಮಸ್ಕಾರ.