ರಾಯಚೂರು ನಗರದ ಸರ್ವೆ ನಂ. 1212/*/1A (ವಿಸ್ತೀರ್ಣ: 14 ಎಕರೆ 17 ಗುಂಟೆ) ಜಮೀನಿನಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಮತ್ತು ಮಾವಿನ ಕೆರೆಯ ಸೌಂದರ್ಯಕರಣ ಕಾರ್ಯದಲ್ಲಿ ನಮ್ಮ ಜಮೀನನ್ನು ಯಾವುದೇ ರೀತಿಯಲ್ಲಿ ಉಪಯೋಗಿಸದಂತೆ ಕ್ರಮ ಕೈಗೊಳ್ಳುವ ಕುರಿತು ಮಠದ ಭಕ್ತರು ಜಿಲ್ಲಾಧಿಕಾರಿಗಳಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ರಾಯಚೂರು ನಗರದ ಸರ್ವೆ ನಂ. 1212/*/1A ವಿಸ್ತೀರ್ಣ 14 ಎಕರೆ 17 ಗುಂಟೆ ಜಮೀನು ಶ್ರೀ 108 ಸಾವಿರ ದೇವರು ಷ|| ಬ್ರ|| ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಶ್ರೀ 108 ಸಾವಿರ ದೇವರ ಸಂಸ್ಥಾನ ಕಿಲ್ಲೇಬೃಹನ್ಮಠ, ಬೇರೂನ್‌ಕಿಲ್ಲೇ, ರಾಯಚೂರು – 584101 ಇವರಿಗೆ ಸೇರಿದ ಪಟ್ಟ ಜಮೀನಾಗಿದೆ. ಈ ಜಮೀನು ಶ್ರೀಗಳ ಮಠದ ಸ್ವಾಧೀನದಲ್ಲಿದ್ದು, ಮಠದ ಪರಂಪರೆ ಮತ್ತು ಶ್ರದ್ಧಾಲಯದ ಭಾಗವಾಗಿದೆ.

ಆದರೆ, ಕಳೆದ ಕೆಲವು ದಿನಗಳಿಂದ ಈ ಜಮೀನಿನಲ್ಲಿ ಅನಧಿಕೃತವಾಗಿ ಕೆಲ ಸಮಾಜ ಘಾತುಕ ವ್ಯಕ್ತಿಗಳು ಯಾವುದೇ ಪ್ರಾಧಿಕಾರ ಅಥವಾ ಮಠದ ಅನುಮತಿ ಪಡೆಯದೇ ಕಟ್ಟಡಗಳನ್ನು ನಿರ್ಮಿಸುತ್ತಿದ್ದು ಇದೆ . ಈ ರೀತಿಯ ಅನಧಿಕೃತ ನಿರ್ಮಾಣಗಳು ಮಠದ ಸ್ವತ್ತಿಗೆ ಹಾನಿ ಉಂಟುಮಾಡುವ ಜೊತೆಗೆ ಕಾನೂನಿನ ನಿಲುವುಗಳನ್ನೂ ಉಲ್ಲಂಘಿಸುತ್ತವೆ.

ಈ ಕುರಿತು ನಾವು ನಗರಸಭೆಗೆ ಮತ್ತು ನಿಮ್ಮ ಕಚೇರಿಗೆ ದೂರು ಸಲ್ಲಿಸಿದ್ದೇವೆ. ಈ ಪ್ರಕ್ರಿಯೆಯಲ್ಲಿ ಕೆಲವು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯವನ್ನು ನಗರಸಭೆ ಹಮ್ಮಿಕೊಂಡಿತ್ತು. ಆದರೆ, ಎರಡು ಕಟ್ಟಡಗಳು ಮಾತ್ರ ಅರ್ಧಕ್ಕೆ ನಿಲ್ಲಿಸಿದ ಸ್ಥಿತಿಯಲ್ಲಿವೆ. ಉಳಿದ ಅಪೂರ್ಣ ಸ್ಥಿತಿಯಲ್ಲಿ ತೆರವುಗೊಳಿಸದೇ ಬಿಟ್ಟ ಎರೆಡು ಅನಧಿಕೃತ ಕಟ್ಟಡಗಳು ನೆಲಸಮ ಗೊಳಿಸಬೇಕು.

ಹಾಗೆಯೇ, ಮಾವಿನ ಕೆರೆ ಸೌಂದರ್ಯಕರಣ ಯೋಜನೆ ಹಮ್ಮಿಕೊಂಡಿರುವ ಸಂದರ್ಭದಲ್ಲಿ, ನಮ್ಮ ಮಠದ ಜಮೀನು ಯಾವುದೇ ರೀತಿಯ ಪ್ರಾಧಿಕಾರ ಅಥವಾ ಪ್ರಸ್ತಾವನೆ ಇಲ್ಲದೆ ಉಪಯೋಗವಾಗುವ ಸಾಧ್ಯತೆಯ ಬಗ್ಗೆ ಆತಂಕವಿದೆ.

ಆದ್ದರಿಂದ, ಮಾನ್ಯರೇ, ನೀವು ಈ ವಿಷಯವನ್ನು ತಕ್ಷಣವೇ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿಕೊಳ್ಳುತ್ತೇವೆ:

  1. ಅನಧಿಕೃತ ಕಟ್ಟಡಗಳ ತನಿಖೆ:
    ಮಠದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ಕಟ್ಟಡಗಳ ದೃಢೀಕರಣ ಮಾಡಿ, ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.
  2. ತಕ್ಷಣದ ತೆರವು ಕಾರ್ಯ:
    ಈಗಾಗಲೇ ಕಾನೂನು ಬಾಹಿರವಾಗಿ ನಿರ್ಮಿಸಲಾಗಿರುವ ಮತ್ತು ತೆರವು ಕಾರ್ಯ ಅಪೂರ್ಣವಾಗಿ ಬಾಕಿ ಉಳಿದಿರುವ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ .
  3. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ:
    ಈ ಕಾನೂನು ಬಾಹಿರ ಕೃತ್ಯಕ್ಕೆ ಹೊಣೆಗಾರರಾಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡು ಮತ್ತು ಮುಂದಿನ ದಿನಗಳಲ್ಲಿ ಅನಧಿಕೃತ ನಿರ್ಮಾಣಗಳನ್ನು ತಡೆಗಟ್ಟಲು ಸಮರ್ಪಕ ನಿಯಂತ್ರಣ ಹೇರಬೇಕಾಗಿ ವಿನಂತಿ .
  4. ಮಾವಿನ ಕೆರೆ ಸೌಂದರ್ಯಕರಣ:
    ಈ ಯೋಜನೆಯ ಸಮಯದಲ್ಲಿ ನಮ್ಮ ಮಠದ ಜಮೀನು ಅಥವಾ ಅದರ ಭಾಗವನ್ನು ಯಾವುದೇ ರೀತಿಯ ನಿರ್ಮಾಣ ಅಥವಾ ಉಪಯೋಗಗಳಿಗೆ ಬಳಸದಂತೆ ಸ್ಪಷ್ಟ ಸೂಚನೆ ನೀಡಿಬೇಕಾಗಿ ವಿನಂತಿ .

ನಿಮ್ಮ ಕಚೇರಿ ಈ ಕುರಿತು ಅಗತ್ಯ ಕ್ರಮ ಕೈಗೊಂಡು ನಮ್ಮ ಮಠದ ಹಕ್ಕುಗಳು ಮತ್ತು ಪರಂಪರೆಯನ್ನು ಕಾಪಾಡಲು ಸಹಾಯ ಮಾಡಬೇಕೆಂದು ಕೋರಿಕೊಳ್ಳುತ್ತೇವೆ ಎಂದು ಅಂಬಾಜಿ ರಾವು ಮೈದರ್ಕರ್ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here