ದಾವಣಗೆರೆ: ಕಣ್ಣೆದುರಿಗೆ ರೈಲಿನ ಗಾಲಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ವಯೋವೃದ್ಧನನ್ನು ಹೋಮ್ ಗಾಡ್೯ ರಕ್ಷಿಸಿ ಪ್ರಾಣ ಉಳಿಸಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಎನ್ ಲಕ್ಷ್ಮಣ್ ನಾಯ್ಕ್ ವಯೋವೃದ್ಧನ ಪ್ರಾಣ ರಕ್ಷಿಸಿದ ಹೋಮ್ ಗಾಡ್೯. ರಾಧಾಕೃಷ್ಣ (64) ಪ್ರಾಣಾಪಾಯದಿಂದ ಪಾರಾದ ವಯೋವೃದ್ಧ. ಮೂಲತಃ ಬೆಂಗಳೂರಿನಿಂದ ಹುಬ್ಬಳ್ಳಿಗೆ ಜನಶತಾಬ್ಧಿ ಎಕ್ಸ್ ಪ್ರೆಸ್ ರೈಲಿನ ಡಿ-8ರ ಬೋಗಿಯಲ್ಲಿ 57ನೇ ಸೀಟ್ ನಲ್ಲಿ (ಪಿಎನ್‌ಆರ್ ನಂ.462297393) ಪ್ರಯಾಣಿಸುತ್ತಿದ್ದರು.

ರೈಲು ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದಾಗ ಬಿಸ್ಕೆಟ್ ಖರೀದಿಸಲು ಕೆಳಗೆ ಇಳಿದು ಹೋಗಿದ್ದಾರೆ. ಅಷ್ಟರಲ್ಲಿ ರೈಲು ಚಲಿಸಲು ಪ್ರಾರಂಭಿಸಿದೆ. ರೈಲು ಚಲಿಸುವುದನ್ನು ನೋಡಿದ ರಾಧಾಕೃಷ್ಣ ಅವರು ಓಡಿ ಬಂದು ಚಲಿಸುವ ರೈಲು ಹತ್ತಲು ಹೋಗಿ ಸ್ಪಿಪ್ ಆಗಿ ಕೆಳಗೆ ಬಿದ್ದಿದ್ದು, ಇನ್ನೆನೂ ರೈಲಿನ ಚಕ್ರಕ್ಕೆ ಸಿಲುಕಬೇಕೆನ್ನುವಷ್ಟರಲ್ಲಿ ಎದುರಿಗೆ ನಿಂತಿದ್ದ ಹೋಮ್ ಗಾಡ್೯ ಎನ್.ಲಕ್ಷ್ಮಣ್ ನಾಯ್ಕ್ ಕೂಡಲೇ ಕೈಹಿಡಿದು ಎಳೆದಿದ್ದಾರೆ. ಅಷ್ಟರಲ್ಲಿ ಆರ್ ಪಿಎಫ್ ಮುಖ್ಯ ಪೇದೆ ಅಶೋಕ್ ಓಡಿ ಬಂದು ಎಳೆದು ಗಾಬರಿಗೆ ಒಳಗಾಗಿದ್ದ ವಯೋವೃದ್ಧ ರಾಧಾಕೃಷ್ಣ ಅವರನ್ನು ಸಂತೈಷಿ ಧೈರ್ಯ ತುಂಬಿದ್ದಾರೆ.
ಕೆಳಗೆ ಬಿದ್ದ ಪರಿಣಾಮ ರಾಧಾಕೃಷ್ಣ ಅವರ ಗಲ್ಲದ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಅವರು ಪ್ರಾಣ ಭಯದ ಅಘಾತದಿಂದ ಹೊರ ಬಂದ ಮೇಲೆ ಇನ್ನೊಂದು ರೈಲಿನ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ರಾಧಾಕೃಷ್ಣ ಅವರು ಪ್ರಾಣ ಕಾಪಾಡಿದ ರೈಲ್ವೆ ರಕ್ಷಣಾ ದಳ ದಾವಣಗೆರೆ ಸಿಬ್ಬಂದಿ ಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಸಮಯ ಪ್ರಜ್ಞೆಯಿಂದ ಜೀವ ಕಳೆದುಕೊಳ್ಳುತ್ತಿದ್ದ ವಯೋವೃದ್ಧನನ್ನು ರಕ್ಷಿಸಿದ ಗೃಹರಕ್ಷಕ ದಳ ಹಾಗೂ ರೈಲ್ವೆ ರಕ್ಷಣಾ ದಳ ದ ಸಿಬ್ಬಂದಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here