ವಿಜಯಪುರ:ಕನ್ನಡದ ಮೊಟ್ಟ ಮೊದಲ ಶಿಲಾಶಾಸನವಾದ ‘ಹಲ್ಮಿಡಿ ಶಾಸನ‘ ದ ಕಲ್ಲಿನ ಪ್ರತಿಕೃತಿಯನ್ನು ಕರ್ನಾಟಕ ರಾಜ್ಯೋತ್ಸವ ದಿನದಂದು ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅನಾವರಣಗೊಳಿಸಲಾಗಿದೆ.
ಕ್ರಿ.ಶ. 450ರ ಕಾಲಕ್ಕೆ ಸೇರಿದ, ಕನ್ನಡ ಭಾಷೆಯ ಅತ್ಯಂತ ಹಳೆಯ ಈ ಶಾಸನವು ನಮ್ಮ ಭಾಷಾ ಪರಂಪರೆಯ ಮಹತ್ವವನ್ನು ಎತ್ತಿಹಿಡಿಯುತ್ತದೆ.
ಕನ್ನಡಿಗರ ಸಾಧನೆ, ಸಾಹಸಗಳನ್ನು ಸಾರುವ ಇಂತಹ ಐತಿಹಾಸಿಕ ಕುರುಹುಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕಾರ್ಯ ಮುಂದುವರೆಯಬೇಕಿದೆ.