ಕರ್ನಾಟಕವು 2023-24 ರಲ್ಲಿ ಶೇ. 10.2 ರ ಅಭೂತಪೂರ್ವ ಆರ್ಥಿಕ ಬೆಳವಣಿಗೆ ಸಾಧಿಸಿದ್ದು, ದೇಶದ GSDP ದರವನ್ನು ಮೀರಿಸಿದೆ. GST ಸಂಗ್ರಹಣೆಯಲ್ಲೂ ಶೇ. 10ರಷ್ಟು ಏರಿಕೆ ದಾಖಲಿಸಿರುವ ರಾಜ್ಯವು ವ್ಯಾಪಾರ ಸ್ನೇಹಿ ವಾತಾವರಣ ಮತ್ತು ಜನಪರ ನೀತಿಗಳ ಮೂಲಕ ಬೆಳವಣಿಗೆಯ ದಿಕ್ಕಿನಲ್ಲಿ ಸಾಗುತ್ತಿದೆ.
ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವ ಬದ್ಧತೆಯೊಂದಿಗೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಈ ಗುರಿ ಸಾಧಿಸಲು, ನಮ್ಮ ಇಲಾಖೆ 2025-30ರ ಅವಧಿಗೆ ಪ್ರಗತಿ ಕೇಂದ್ರಿತ ಕೈಗಾರಿಕಾ ನೀತಿಯನ್ನು ರೂಪಿಸುತ್ತಿದೆ.
ಈ ಹೊಸ ಕೈಗಾರಿಕಾ ನೀತಿ, ಉದ್ಯಮಗಳ ಬೇಡಿಕೆಗಳಿಗೆ ಸ್ಪಂದಿಸಿ, ತಂತ್ರಜ್ಞಾನ ಅಳವಡಿಕೆ, ಕೌಶಲಾಭಿವೃದ್ಧಿ, ಮತ್ತು ಮಾನವ ಸಂಪನ್ಮೂಲ ಸದ್ಬಳಕೆಗೆ ಒತ್ತು ನೀಡಿ ರಾಜ್ಯದ ಆರ್ಥಿಕತೆಗೆ ಶಕ್ತಿ ತುಂಬಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.