ಬೆಂಗಳೂರು:ಡಾ.ಸಿ.ಸೋಮಶೇಖರ – ಶ್ರೀಮತಿ ಎನ್.ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ (ರಿ). ಬೆಂಗಳೂರು ಇವರ ವತಿಯಿಂದ ಕುಮಾರಕೃಪಾ ರಸ್ತೆಯ ಗಾಂಧೀ ಭವನದಲ್ಲಿ ಆಯೋಜಿಸಲಾದ ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ “ಸಂಸ್ಕೃತಿ ಸಂಗಮ – 2024” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ರೈಲ್ವೆ ರಾಜ್ಯಸಚಿವ ವಿ.ಸೋಮಣ್ಣ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ, ಬೆಳಗಾವಿ ನಾಗನೂರಿನ ಶ್ರೀ ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಹಿರಿಯ ಸಾಹಿತಿಗಳಾದ ನಾಡೋಜ ಡಾ.ಹಂ.ಪ.ನಾಗರಾಜಯ್ಯನವರು, ನಿರ್ದೇಶಕರಾದ ಶ್ರೀ ಟಿ.ಎನ್.ಸೀತಾರಾಮ್ ಅವರು, ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಅವರು ಹಾಗೂ ಗಣ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here