ದಾವಣಗೆರೆ: ನಗರದ ಪ್ರಮುಖ ವೃತ್ತಗಳನ್ನು ಯುರೋಪ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್.ಮಲ್ಲಿಕಾರ್ಜುನ್ ಘೋಷಿಸಿದರು.
ಸಚಿವರು ನಗರದ ಎಂಸಿಸಿ ಬಿ ಬ್ಲಾಕ್ ನ ಗುಂಡಿ ಶಾಲೆಯಿಂದ 6 ನೇ ಮೇನ್ ವರೆಗೂ 3,4,5,6 ನೇ ಕ್ರಾಸ್ ರಸ್ತೆ ಮತ್ತು ಪೇವರ್ಸ್ ಅಳವಡಿಕೆ ಕಾಮಗಾರಿ, ವಿವಿಧ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿ, 11ನೇ ಮೇನ್ 8,9,10ನೇ ಕ್ರಾಸ್ ನಲ್ಲಿರುವ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಯುರೋಪ್ ಮಾದರಿಯಲ್ಲಿ ಗುಂಡಿ ಸರ್ಕಲ್, ಕೆಇಬಿ ಸರ್ಕಲ್, ವಿದ್ಯಾರ್ಥಿ ಭವನ, ಜಯದೇವ ವೃತ್ತವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಕಳೆದ ಹದಿನೈದು ದಿನಗಳ ಹಿಂದೆ ಬಂದು ಇಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದೆ. ಈಗ ಮತ್ತೆ ಬಂದಿದ್ದೇನೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಅನೇಕ ಕೆಲಸಗಳು ಆಗಿವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ
ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ನಿಮ್ಮ ಸಹಕಾರ, ಪ್ರೋತ್ಸಾಹ ಎಂದಿನಂತೆ ಇರಲಿ ಎಂದು ಹೇಳಿದರು.
ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ಮಾತನಾಡಿ ಎಂಸಿಸಿ ಬಿ ಬ್ಲಾಕ್ ಗೆ ಹೆಚ್ಚಿನ ಅನುದಾನವನ್ನು ಎಸ್. ಎಸ್. ಮಲ್ಲಿಕಾರ್ಜುನ್ ಅವರು ನೀಡಿದ್ದಾರೆ. ಮುಂದೆಯೂ ನೀಡುವ ವಿಶ್ವಾಸ ಇದೆ. ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಾರ್ಡ್ ಗಳಿಗಿಂತ ಸುಂದರ ಬಡಾವಣೆಯನ್ನಾಗಿಸಲು ಎಲ್ಲಾ ರೀತಿಯ ಸಹಕಾರವನ್ನು ಎಸ್ ಎಸ್ ಎಂ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಕುಂದುವಾಡ ಕೆರೆ ಆಗುವ ಮುನ್ನ ಎಂಸಿಸಿ ಬಿ ಬ್ಲಾಕ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಇದನ್ನು ಮನಗಂಡ ಮಲ್ಲಿಕಾರ್ಜುನ್ ಅವರು, ಕೆರೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ತಂದರು. ಹಾಗಾಗಿ,
ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ. ಜೊತೆಗೆ ಬೋರ್ ವೆಲ್ ಗಳಲ್ಲಿ ನೀರು ಬರುತ್ತಿದ್ದು, ಜನರಿಗೆ ತುಂಬಾನೇ ಅನುಕೂಲವಾಗಿದೆ ಎಂದು ತಿಳಿಸಿದರು.
ಕಾಸರ್ ವಿಠ್ಠಲ್ ಪಾರ್ಕ್ ಅಭಿವೃದ್ದಿಗೆ ರೂ. 1 ಕೋಟಿ, ಸ್ವಿಮ್ಮಿಂಗ್ ಫೂಲ್ ಅಗಲೀಕರಣ ಉದ್ಘಾಟನೆ, ಮಿನಿ ಸ್ವಿಮ್ಮಿಂಗ್ ಫುಲ್ ಗೆ ಅನುದಾನ ನೀಡಲಾಗಿದೆ. ಡಿಜಿಟಲ್ ಗ್ರಂಥಾಲಯಕ್ಕೂ ಹಣ ಬಿಡುಗಡೆ ಮಾಡಲಾಗುತ್ತಿದ್ದು, ಅಭಿವೃದ್ಧಿಯ ಮಹಾಪೂರವೇ ವಾರ್ಡ್ ನಲ್ಲಿ ಹರಿದು ಬರುತ್ತಿದೆ. ಇದಕ್ಕೆ ಮಲ್ಲಿಕಾರ್ಜುನ್ ಅವರ ದೂರದೃಷ್ಟಿತ್ವದ ನಾಯಕತ್ವ, ಅಭಿವೃದ್ಧಿ ಪರ ಚಿಂತನೆಯೇ ಕಾರಣ ಎಂದು ಹೇಳಿದರು.
ಎಸ್. ಎಸ್. ಮಲ್ಲಿಕಾರ್ಜುನ್ ಅವರು ನಮಗೆಲ್ಲರಿಗೂ ಮಾರ್ಗದರ್ಶಕರು. ಅಭಿವೃದ್ಧಿ ವಿಚಾರ ಬಂದಾಗ ಎಂದಿಗೂ ರಾಜಿ ಆದವರಲ್ಲ. ಹಾಗಾಗಿ, ದಾವಣಗೆರೆಯಲ್ಲಿ ಮತ್ತೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗುತ್ತಿದ್ದು, ಮುಂದೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ. ಜನರು ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಿದರೆ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ಆಯುಕ್ತೆ ರೇಣುಕಾ, ಅಂದನೂರು ಮುಪ್ಪಣ್ಣನವರ್, ಗುರುಮೂರ್ತಿ, ಇಂದೂಧರ್ ನಿಶಾನಿಮಠ್, ವಿಜಯಣ್ಣ
ಆಲೂರು, ವೀರಣ್ಣ ಬೆಳ್ಳೂಡಿ, ಜ್ಯೋತಿರ್ಲಿಂಗ, ಮುರುಗೇಶ್, ಗುರು, ಕಬ್ಬೂರು ಶಿವಕುಮಾರ್, ಸಿದ್ದೇಶ್ವರ ಗೌಡ, ಯಶೋಧಾ, ಸರೋಜಮ್ಮ, ಪರಶುರಾಮ್ ಭರಣಿ, ಮಲ್ಲಿಕಾರ್ಜುನ್, ಭರತ್, ಜಾವಿದ್ ಸಾಬ್, ಮಲ್ಲಿಕಾರ್ಜುನ್
ಸ್ವಾಮಿ, ಬೆಳ್ಳೂಡಿ ಉಮೇಶ್, ಆರ್ ಟಿ ಒ ರಾಜು, ಜಬ್ಬಾರ್ ಸಾಬ್, ನಿಖಿಲ್, ನೀಲಕಂಠಪ್ಪ, ರೆಡ್ಡಿ, ಎಂಸಿಸಿ ಬಿ ಬ್ಲಾಕ್ ನ ಹಿರಿಯರು, ನಾಗರಿಕರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.