ವಿಜಯಪುರ: ದೇವರೂ ಲುಮೆಗೆ ಆಡಂಬರದ ಪೂಜೆ- ಪುರಸ್ಕಾರ.ಗದ್ದಲ-ಗೌಜೂ ಬೇಕಾಗಿಲ್ಲ.ನಿಷ್ಕಾಮಸೇವೆ. ಹೃದಯಪೂರ್ವಕ ಭಕ್ತಿ ಯೊಂದೇ ಸಾಕು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ.ನ್ಯಾಯವಾದಿ ದಾನೇಶ ಅವಟಿ ನುಡಿದರು.
ನಗರದ ಅಲ್ಲಾಪುರ – ರಂಭಾಪುರ ರಸ್ತೆಯ ಬಸವೇಶ್ವರ ಹಾಗೂ ಶಾರದಾ ಕಾಲೋನಿಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಸೇವಾ ಸಮಿತಿಯವರು ಏರ್ಪಡಿಸಿದ್ದ,ಮೂರನೇಯ ವರ್ಷದ ಶ್ರೀ ನಾಡದೇವಿ ಉತ್ಸವದ ಆರನೇಯ ದಿನವಾದ ಗುರವಾರ ದಿನಾಂಕ 10-10-2024 ರಂದು ಜರುಗಿದ ವಿದೂಷಿ ಶ್ರೀಮತಿ ಲಕ್ಷ್ಮೀ ತೇರದಾಳಮಠ ಇವರ ತಂಡದ ನೃತ್ಯ ಕಲಾ ಪ್ರದರ್ಶನ ಕಾರ್ಯಕ್ರಮದ ಮುಖ್ಯ ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಅವರು ಪಂಚ ಮಹಾಭೂತಗಳಿಂದ ಸೃಷ್ಟಿಯಾದ ಈ ಭೂಮಂಡಲ ದಲ್ಲಿ ಶಿವ ಮತ್ತು ಶಕ್ತಿಯ ಸಂಗಮದಿಂದ ರಚಿತಗೊಂಡಿದೆ.ಮಾನವನು ಈ ಸೃಷ್ಟಿಯಲ್ಲಿ ಅತ್ಯಂತ ಸಣ್ಣ ಅಣುವಾಗಿದ್ದಾನೆ.ಸಕಲ ಚರಾಚರ ಜೀವ ರಾಶಿಗಳಲ್ಲಿ ಮಾನವನೆ ಶ್ರೇಷ್ಠನಾಗಿದ್ದು ಮೋಕ್ಷವೇ ಮಾನವನ ಪರಮೋಚ್ಚ ಗುರಿಯಾಗಿದೆ. ಮಹಾನವಮಿ ಹಬ್ಬವೂ ಅಸೂರಿ ಶಕ್ತಿಯ ಮೇಲೆ ದೈವಿ ಶಕ್ತಿಯ ವಿಜಯವೇ ವಿಜಯದಶಮಿಯಾಗಿದೆ. ಸಾಂಕೇತಿಕ ರೂಪದ ಬೀಜಾಕ್ಷರ.ಅಂಕಿಸಂಖ್ಯೆ.ಚಿಹ್ನೆ.ಮುದ್ರೆಗಳು ವೈಜ್ಞಾನಿಕ ಹಿನ್ನಲೆಯನ್ನು ಹೊಂದಿದ್ದು. ಪ್ರಾಜ್ಞರಿಂದ ಅವುಗಳ ಮಹತ್ವ ಅರಿತು ಅಳವಡಿಸಿಕೊಂಡು ಜೀವನ ಪಾವನಗೊಳಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಸಂಜು ಶಿಳ್ಳಿನ ಅವರು ಮಾತನಾಡಿ ಭಾರತ ದೇಶದ ಜೀವನ ಪದ್ಧತಿಯಲ್ಲಿ ಅನೇಕ ಹಬ್ಬ ಹರಿದಿನ ಜಾತ್ರೆ ಉತ್ಸವ ಆಚರಣೆ ಹಾಸು ಹೊಕ್ಕಾಗಿವೆ. ಅವು ನಮ್ಮ ಸಂಸ್ಕೃತಿ ಪರಂಪರೆಯ ಪ್ರತೀ ಕವಾಗಿದ್ದು ಅವುಗಳನ್ನು ಅರಿತು ಆಚರಿಸುವದಲ್ಲದೆ.ಕಾರ್ಯಕ್ರಮದಲ್ಲಿ ದೇಶಭಕ್ತಿ.ಧರ್ಮ ರಕ್ಷಣೆ. ಆದರ್ಶ ಜೀವನ ಪದ್ಧತಿ ಕುರಿತು ಮಾನವೀಯ ಗುಣಗಳನ್ನು ಬೆಳೆಸುವ ಕಾರ್ಯವಾಗಬೇಕು ಎಂದು ಕರೆ ನೀಡಿದರು.
ಖ್ಯಾತ ಉದ್ಯಮಿ ವಿಜಯಕುಮಾರ ದೋಣಿ ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿ ಸಾಂದರ್ಭಿಕವಾಗಿ ಮಾತನಾಡಿದರು. ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಸೇವಾ ಸಮಿತಿ ಉಪಾಧ್ಯಕ್ಷ ಪ್ರಥಮ ದರ್ಜೆ ಗುತ್ತಿಗೆದಾರ ವೀರನಗೌಡ.ಬ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೇ ಎಸ್.ಎಸ್.ಆಸ್ಪತ್ರೆ ಸಿಈಓ ಡಾ. ಶರಣು ಮಳಖೇಡ.ಹೊನ್ನಪ್ಪ (ಮತ್ತು) ಗುತ್ತ್ಯಾಳ. ಬಾಬುರಾವ್ ಕಂಚಗಾರ. ಮಲ್ಲಿಕಾರ್ಜುನ ಕಪಾಳೆ. ಬಾಪೂಗೌಡ ಬಿರಾದಾರ. ಸಾಹೇಬಗೌಡ ಬಿರಾದಾರ. ಈರಣ್ಣ ಅಮರಣ್ಣವರ. ಬಸನಗೌಡ ಬಿರಾದಾರ(ಕಡಕೋಳ).ಚಂದ್ರಶೇಖರ ಸಿಂಧೂರ.ಶಶಿಧರ ನಾಗಶೆಟ್ಟಿ. ನೀಲಕಂಠ ಸಾಯ ಗಾoವ.ಕೆಂಚಪ್ಪ ಲೋಗಾವಿ. ಸದಾನಂದ ಹಿರೇಮಠ. ಸಮಿತಿಯ ಗೌರವಾಧ್ಯಕ್ಷ ಓಂ ಪ್ರಕಾಶ್ ಗಿರಗಾoವಕರ.ಅಧ್ಯಕ್ಷ ಗಂಗಾಧರ ನಿರ್ವಾಣಶೆಟ್ಟಿ. ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಶ್ರೀಮತಿ ಕಾಂತಾ ಪಂಡಿತ ಪ್ರಾರ್ಥಿಸಿದರು. ಗಂಗಾಧರ ಬಾಗೇವಾಡಿ ನಿರೂಪಿಸಿದರು. ನಾರಯಣ ತೆಳಗಡೆ ವಂದಿಸಿದರು.ಮಹಿಳೆಯರು ಮಕ್ಕಳಿಂದಭರತನಾಟ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ನಾಡದೇವಿಯ ಪೂಜೆ.ಆರತಿ.ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿತು.
(ದಾನೇಶ ಅವಟಿ ವಕೀಲರು.)