ಬೆಂಗಳೂರು:ಅಂತರಾಷ್ಟ್ರೀಯ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಜೆಡಿಎಸ್ ಸೇವಾದಳ ರಾಜ್ಯಾಧ್ಯಕ್ಷರಾದ ಶ್ರೀ ಬಸವರಾಜು ಪಾದಯಾತ್ರಿ ರವರ ನೇತೃತ್ವದಲ್ಲಿ ಯಲಹಂಕ ಕ್ಷೇತ್ರದ ವ್ಯಾಪ್ತಿಯ ಬಿ ಬಿ ಎಂ ಪಿ ವಾರ್ಡ್ ನಂಬರ್ 3ರಲ್ಲಿ ಸೇವೆ ಸಲ್ಲಿಸುವ ಪೌರಕಾರ್ಮಿಕರಿಗೆ ಸಿಹಿ ತಿನ್ನಿಸಿ ತಂಪು ಪಾನಿಯನ್ನು ವಿತರಿಸಿ ಅವರು ಸಲ್ಲಿಸುವ ಸೇವಗೆ ಹಾಗೂ ಕರೋನ ಎಂಬ ಮಾರಕವಾದ ರೋಗ ಹರಡಿದ ಸಮಯದಲ್ಲಿ ತಮ್ಮ ಹಾಗೂ ಕುಟುಂಬದ ಜೀವವನ್ನ ಲೆಕ್ಕಿಸದೆ ಜನಸಾಮಾನ್ಯರ ಆರೋಗ್ಯದ ರಕ್ಷಣೆಗಾಗಿ ಸೇವೆ ಸಲ್ಲಿಸದ ಪೌರ ಕಾರ್ಮಿಕರನ್ನು ಶ್ಲಾಘಿಸಿ ಅಂತರಾಷ್ಟ್ರೀಯ ಪೌರಕಾರ್ಮಿಕ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ . ಮತ್ತು ಅವರ ಪೌರಕಾರ್ಮಿಕರಿಗೆಹಾಗೂ ಕುಟುಂಬದ ಬದುಕಿನ ಹೋರಾಟಕ್ಕಾಗಿ ಸರ್ಕಾರವು ಇನ್ನೂ ಅತಿ ಹೆಚ್ಚಿನ ಸದುಪಯೋಗವನ್ನು ನೀಡಿ ಅವರಿಗೆ ಜೀವನೋಪಾಯಕ್ಕಾಗಿ. ನಿವೃತ್ತಿ ಬದುಕಿಗೆ ಸರ್ಕಾರವು ಗಮನ ಹರಿಸಿ ಇನ್ನು ಹೆಚ್ಚಿನದಾಗಿ ಆದ್ಯತಾ ವಲಯ ಘೋಷಿಸಿ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ನಮ್ಮ ದೇಶದ ಜನಪ್ರಿಯ ಪ್ರಧಾನಮಂತ್ರಿ ಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ರವರ ಜನಪ್ರಿಯ ಕಾರ್ಯಕ್ರಮ ಸ್ವಚ್ಛ ಭಾರತ ಆಂದೋಲನ ಹಾಗೂ ಮಾಜಿ ಪ್ರಧಾನಿ ಮಣ್ಣಿನಮಗ ಸನ್ಮಾನ್ಯ ಶ್ರೀ ದೇವೇಗೌಡ್ರು ಅಪ್ಪಾಜಿ ರವರ ನಿರ್ಮಲ ಕರ್ನಾಟಕ ಗ್ರಾಮ ಸ್ವಚ್ಛತೆ ಗಾಗಿ ಪ್ರತಿಯೊಂದು ಮನೆಗೂ ಶೌಚಾಲಯಗಳನ್ನು ನೀಡುವ ಸಲುವಾಗಿ ಜಾರಿಗೆ ತಂದ ಯೋಜನೆಯನ್ನ ಹಾಗೂ ಸನ್ಮಾನ್ಯ ಶ್ರೀ ಕುಮಾರಣ್ಣರವರು ಆಡಳಿತ ಅವಧಿಯಲ್ಲಿ ಪೌರ ಕಾರ್ಮಿಕರಿಗೆ ವಿಶೇಷ ಯೋಜನೆ ಜಾರಿಗೆ ತಂದ ವರ್ಷಕ್ಕೆ ಸಾವಿರ ಸುವರ್ಣ ಗ್ರಾಮೋದಯ ಯೋಜನೆಯ ಪ್ರಗತಿ ಯನ್ನು ಸ್ಮರಿಸಿಕೊಂಡರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಸೇವಾದಳ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿಆದ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಉಸ್ತುವಾರಿ ಆದ ಶ್ರೀ ವಲ್ಸಲ್ ಕುಮಾರ್ ರವರು ಹಾಗೂ ಕಲ್ಬುರ್ಗಿ ಜಿಲ್ಲಾ ಜೆಡಿಎಸ್ ಸೇವಾದಳ ಜಿಲ್ಲಾಧ್ಯಕ್ಷರು ಆದ ಶ್ರೀ ನರಸಯ್ಯ ಗುತ್ತೇದಾರ್ ರವರು ಹಾಗೂ ಸೇವಾದಳ ರಾಜ್ಯಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಜಾತ್ಯಾತೀತ ಜನತಾ ಯುವಶಕ್ತಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಲಿಂಗರಾಜು ಎನ್ ಸಿ ರವರು ಹಾಗೂ ರಾಜ್ಯ ಕಾರ್ಯದರ್ಶಿ ಆದ ಶ್ರೀ ಶ್ರೀನಿವಾಸ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here