ಬೆಂಗಳೂರು:ಕರ್ನಾಟಕದ ಕಲಾಅಭಿಮಾನಿಗಳ ಆರಾಧ್ಯದೈವ ಡಾಕ್ಟರ್ ವಿಷ್ಣುವರ್ಧನ್ ರವರ ಜಯಂತೋತ್ಸವವನ್ನು ರಾಜ್ಯದ ತುಂಬಾ ಎಲ್ಲಡೆ ವಿಷ್ಣು ಜಯಂತಿಯನ್ನು ಅಭಿಮಾನಿಬಳಗ ಆಚರಿಸಿತು.
ಬೆಂಗಳೂರಿನ ವಿಜಯನಗರದ ಬಾಲಗಂಗಾಧರನಾಥ ಸ್ವಾಮಿಜಿ (ಟೋಲ್ ಗೇಟ್)ವೃತ್ತದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಸೇನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪಿ.ಸರವಣ ರವರ ಮುಖಂಡತ್ವದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಚರಿಸಲಾಯಿತು.ಶ್ರೀ ವಿಷ್ಣುವರ್ಧನ್ ರವರ ಪುತ್ಥಳಿಯನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು ಅಲ್ಲದೆ ಸಿಹಿ ಹಂಚಿ ಡಾಕ್ಟರ್ ವಿಷ್ಣುವರ್ಧನ್ ರವರ ಜನ್ಮ ದಿನಾಚರಣೆ ಯನ್ನು ಅಭಿಮಾನಿಗಳು ಆಚರಿಸಿದರು.
ಡಾಕ್ಟರ್ ವಿಷ್ಣುವರ್ಧನ್ ರವರ ಅಪಾರ ಅಭಿಮಾನಿಗಳು ಈ ಸಂದರ್ಭದಲ್ಲಿ ಪಿ.ಸರವಣ ಸೇರಿದಂತೆ ನ್ಯಾಯವಾದಿ ಶ್ರೀ ರಮೇಶ್ ಗೌಡ,ಬಾಲಾಜಿ,ಯಾಧವ್ ಕುಮಾರ್,ಕೃಷ್ಣ,ಕಿರಣ,ಸುರೇಶ್,ರೇವಣ್ಣ,ಪತ್ರಕರ್ತ ಎಸ್.ಕೆ.ಒಡೆಯರ್,ಪ್ರಮೋದ್,ಶ್ರೀನಿವಾಸ್,ಮುಂತಾದ ಅನೇಕರು ಭಾಗವಹಿಸಿದ್ದರು.
ನಂತರ ರಾಜಾಜಿನಗರ ಆರನೇ ಹಂತದ ಮಹಾಪುಷ ಡಾಕ್ಟರ್ ವಿಷ್ಣುವರ್ಧನ್ ಅಭಿಮಾಣಿಸಂಘದವರು ಏರ್ಪಡಿಸಿದ್ದ ಜಯಂತೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ
ಅಲ್ಲಿಂದ ಕಾಮಾಕ್ಷಿಪಾಳ್ಯದ ಡಾಕ್ಟರ್ ವಿಷ್ಣುವರ್ಧನ್ ರವರ ಅಭಿಮಾನಿ ಶ್ರೀ ರೇವಣ್ಣ ಮತ್ತು ಅವರ ಕುಟುಂಬದವರು ವಿಷ್ಣುವರ್ಧನ್ ರವರ ಜಯಂತಿಪ್ರಯುಕ್ತ ಅನಾಥಾಶ್ರಮದಲ್ಲಿ ನಾನ್ ವೆಜ್ ಊಟ ಹಾಕಿಸುವ ಮುಖಾತರ ಡಾಕ್ಟರ್ ವಿಷ್ಣುವರ್ಧನ್ ರವರ ಹುಟ್ಟುಹಬ್ಬವನ್ನು ಅರ್ಥಪೂರ್ಣ ವಾಗಿ ಆಚರಿಸಿದರು.ಈ ಸಂದರ್ಭದಲ್ಲಿ ಸರವಣ ರವರು ಅನಾಥಾಶ್ರಮಕ್ಕೆ ತಮ್ಮ ಕೈಲಾದ ಧನಸಹಾಯವನ್ನು ಮಾಡಿ ಮಾತನಾಡಿದರು.ಅನಾಥಾಲಯಗಳಲ್ಲಿ ಊಟ ಹಾಕಿಸುವ ಮೂಲಕ ಶ್ರೀ ರೇವಣ್ಣ ಅರ್ಥಪೂರ್ಣ ವಾಗಿ ವಿಷ್ಣುವರ್ಧನ್ ರವರ ಜಯಂತಿ ಆಚರಿಸಿದ್ದು ಬಹಳ ಒಳ್ಳೆಯಕೆಲಸವಾಗಿದೆ.ನಾನೂ ಕೂಡಾ ಫೆಬ್ರವರಿ ತಿಂಗಳಲ್ಲಿ ನನ್ನ ಮಗನ ಹುಟ್ಟುಹಬ್ಬವನ್ನು ಇಲ್ಲಿಯೇ ಆಚರಿಸುತ್ತೇನೆಂದು ಹೇಳಿದರು.
ನಂತರ ನ್ಯಾಯವಾದಿ ರಮೇಶ್ ಗೌಡರು ರಾಜಾಜಿನಗರದ ಶ್ರೀ ರಾಮಮಂದಿರದಹತ್ತಿರ ಶ್ರೀ ಸುರೇಶ್ ಅಧ್ಯಕ್ಷತೆಯಲ್ಲಿ ಆಚರಿಸಲಾದ ಡಾಕ್ಟರ್ ವಿಷ್ಣುವರ್ಧನ್ ರವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ
ನಂತ ಶೇಷಾದ್ರಿಪುರಂ ವೃತ್ತದಲ್ಲಿರುವ ಡಾಕ್ಟರ್ ವಿಷ್ಣುವರ್ಧನ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಓಕಳಿಪುರಂ ವೇತ್ತದಲ್ಲಿರುವ ಡಾಕ್ಟರ್ ವಿಷ್ಣುವರ್ಧನ್ ರವರ ಪುತಥಳಿಗೆ ಮಾಲಾರ್ಪಣೆ ಮಾಡಿದರು ನ್ಯಾಯವಾದಿ ರಮೇಶ್ ಗೌಡರೊಂದಿಗೆ ಪತ್ರಕರ್ತ ಎಸ್.ಕೆ.ಒಡೆಯರ್,ಶ್ರೀ ಪೋತಪ್ಪ,ಶ್ರೀ ಸುರೇಶ್ ಹಾಗೂ ಇನ್ನೂ ಅನೇಕರು ಸಾಥ್ ನೀಡಿದರು.