ತುಮಕೂರು: ತಿಪಟೂರಿನಲ್ಲಿ ಸೆಪ್ಟೆಂಬರ್ 2 ರಂದು ವಿಶ್ವ ತೆಂಗು ದಿನದ ಪ್ರಯುಕ್ತ ನಡೆಯುವ ” ಮಾಧ್ಯಮ ಮತ್ತು ರೈತ ಮಿತ್ರ ” ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಾಧ್ಯಮ ಮಿತ್ರರಿಗೆ ಕಿಟ್ ಮತ್ತು ಸರ್ಟಿಫಿಕೇಟ್ ನೀಡಲಾಗುತ್ತಿದೆ. ನೋಂದಾವಣೆ ಕಡ್ಡಾಯವಾಗಿದ್ದು, ಉಚಿತ ಇರುತ್ತದೆ. ಕಾರ್ಯಕ್ರಮದ ವಿಶೇಷಗಳು: ತಿಪಟೂರಿನ ವಿಶೇಷ ಪೇಯ ‘ ನೀರಾ ‘ ಉಚಿತವಾಗಿ ನೀಡುವ ವ್ಯವಸ್ಥೆ ಇರುತ್ತದೆ. ತೆಂಗನ್ನು ಬಳಸಿ ವಿಶೇಷವಾಗಿ ಮಾಡಿರುವ ಕೊಬ್ಬರಿ ಮಿಠಾಯಿ ರುಚಿ ಸವಿಯುವ ಅವಕಾಶ. ಬೆಲ್ಲ ಕೊಬ್ಬರಿ ಸವಿದು ಸ್ನೇಹತ್ವ ಸಾರಿ ನಲಿಯೋಣ. ಒಂದೇ ಸ್ಥಳದಲ್ಲಿ ತೆಂಗು ವಸ್ತು ಪ್ರದರ್ಶನದಲ್ಲಿ ತೆಂಗಿನ ಪ್ರಪಂಚವನ್ನು ಸುತ್ತುವ ಜೊತೆಗೆ ಗೋಷ್ಠಿ ಗಳ ಮೂಲಕ ಹೊಸ ಹೊಸ ವಿಚಾರಗಳ ಅರಿವಿಗೆ ಅವಕಾಶ. ಸ್ವಾತಂತ್ರ್ಯ ಪೂರ್ವ, ನಂತರದ ದೇಶದ ಅಮೂಲ್ಯ ನಾಣ್ಯ, ಅಂಚೆ ಚೀಟಿ ಪ್ರದರ್ಶನದ ಮೂಲಕ ಇತಿಹಾಸವನ್ನು ಒಮ್ಮೆ ಇಣುಕಿ ನೋಡಿ ಬರುವ ಅಪೂರ್ವ ಅವಕಾಶದ ಜೊತೆಗೆ ಜಿಲ್ಲೆ, ರಾಜ್ಯ ಮತ್ತು ಅಂತರ ರಾಜ್ಯ ಪತ್ರಕರ್ತ ಮಿತ್ರರ ಬೇಟಿ ಮಾಡಿ ವಿಚಾರ ವಿನಿಮಯ ಮಾಡಿಕೊಳ್ಳುವ ಸುವರ್ಣ ಅವಕಾಶ‌. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ (ರಿ), ನವದೆಹಲಿ, ಇವರ ನೇತೃತ್ವಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅಕ್ಷಯ ಕಲ್ಪ, ಕೌಸ್ತುಭ ವೆಂಚರ್ಸ್, ನಮ್ರತಾ ಆಯಿಲ್ ರೀಫೈನರೀಸ್ ಸಹ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಬನ್ನಿ, ಕಲ್ಪತರು ನಾಡಿಗೆ ಹೃದಯ ಪೂರ್ವಕ ಸುಸ್ವಾಗತ ಕೋರುತ್ತೇವೆ ‌ನಿಮ್ಮ ಆಗಮನದ ನಿರೀಕ್ಷೆಯಲ್ಲಿ ‌- ಕಲಾಕೃತಿ ( ರಿ) ತಿಪಟೂರು. ಮತ್ತು ಕಾರ್ಯಕ್ರಮದ ಯಶಸ್ವಿಗೆ ಹಗಲಿರುಳು ಶ್ರಮಿಸುತ್ತಿರುವ ಕಾರ್ಯನಿರತ ಪತ್ರಕರ್ತರು. ‌ಬಿಡುವು ಮಾಡಿಕೊಂಡು ಬನ್ನಿ ಸಹೋದದರೇ ನಮಗಾಗಿ ಒಂದು ದಿನ – ‌ತಿಪಟೂರು ಕೃಷ್ಣ. ಕಾರ್ಯಕ್ರಮದ ಪ್ರಧಾನ ಸಂಚಾಲಕರು. ‌ಆಲ್ಬೂರು ಶಿವರಾಜು, ಸಹ ಸಂಚಾಲಕರು. ಪತ್ರಿಕಾಮಿತ್ರರನ್ನು ಆಹ್ವಾನ ಕೋರಿದ್ದಾರೆ.

LEAVE A REPLY

Please enter your comment!
Please enter your name here