ವಿಜಯಪುರ:ಬಬಲೇಶ್ವರ ತಾಲೂಕ ಆಡಳಿತ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಜಿಲ್ಲಾಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಮತಿ ಸುಜಾತ ಕಳ್ಳಿಮನಿಯವರು ಭಾಗವಹಿಸಿದ್ದರು. ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಈ ಎರಡು ಹೆಸರಿನಲ್ಲಿ ಜಗತ್ತು ಇಂದು ನಮ್ಮ ಭಾರತವನ್ನು ಗುರುತಿಸುತ್ತದೆ. ಒಬ್ಬರು ಅಹಿಂಸೆ ಮಾರ್ಗದಿಂದ ಹೋರಾಡಿ ಸ್ವಾತಂತ್ರ ತಂದುಕೊಟ್ಟವರು. ಇನ್ನೊಬ್ಬರು ಭಾರತಕ್ಕೆ ಆತ್ಮವೇ ಆಗಿರುವ ಇಡೀ ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸಿ ಕೊಟ್ಟವರು. ಇವರೊಂದಿಗೆ ಅನೇಕ ಮಹಿಳೆಯರು ಕೂಡ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿರುವುದಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ಸರೋಜಿನಿ ನಾಯ್ಡು, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕಸ್ತೂರ ಬಾ ಗಾಂಧಿಯವರೇ ಸಾಕ್ಷಿ.

ಇಂತಹ ಹಿರಿಯರ ತ್ಯಾಗ ಬಲಿದಾನಗಳಿಂದ ದೊರೆತ ಸ್ವಾತಂತ್ರ್ಯವನ್ನು ದೇಶವನ್ನು ಮುನ್ನಡೆಸಲು ಜವಾಬ್ದಾರಿ ತೆಗೆದುಕೊಂಡು ಭಾವೈಕ್ಯ ಭಾರತ ಕಟ್ಟಲು ಒಂದಾಗಬೇಕು ಎಂದು ಶ್ರೀ ಮತಿ ಸುಜಾತ ಕಳ್ಳಿಮನಿಯವರು ಕರೆ ನೀಡಿದರು. ವೇದಿಕೆಯಲ್ಲಿ ತಹಶೀಲ್ದಾರ್ ಸಂತೋಷ್ ಮ್ಯಾಗೇರಿ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ವಿ ಎಸ್ ಹಿರೇಮಠ್, ಮುಖಂಡರಾದ ವಿ ಎಸ್ ಪಾಟೀಲ್, ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗಣ್ಯ ನಾಗರಿಕರು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here