ಬೆಳಗಾವಿ:ಬಾಗಲಕೋಟೆ ಜಿಲ್ಲೆಯಲ್ಲಿ ಪುರ್ನವಸತಿ ಕೃಷ್ಣಾ ಮೇಲ್ದಂಡೆ ಯೋಜನೆಯ ಇಲಾಖೆಯಲ್ಲಿ ಮುಳುಗಡೆಯಾದ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಹಾಗೂ ವಿಶೇಷ ಭೂ-ಸ್ವಾಧೀನ ಅಧಿಕಾರಿಗಳು ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ನವ ನಗರ ಬಾಗಲಕೋಟೆ ಹಾಗೂ ಆಲಮಟ್ಟಿ ನಾರಯಣಪೂರ, ಇಲಕಲ್ಲ, ಬಿಳಗಿಯಲ್ಲಿ ಸ್ವಾಧೀನ ಪಡಿಸಿಕೊಂಡಿರುವ ರೈತರ ಜಮೀನುಗಳಿಗೆ ಪರಿಹಾರಕ್ಕಾಗಿ ವಿಶೇಷ ಕೋರ್ಟನ್ನು ನಿರ್ಮಿಸಬೇಕೆಂದು ರೈತಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಹೂಗಾರ್ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ.
ಬೆಳಗಾವಿಯಲ್ಲಿ ನಡೆದ ರೈತಹೋರಾಟ ಸಂದರ್ಭದಲ್ಲಿ ಅಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಿದ್ದಾರೆ.
1) 1979 ರಲ್ಲಿ ಹಿನ್ನಿರಿನಲ್ಲಿ ಮುಳುಗಡೆಯಾದ ಗ್ರಾಮಗಳಿಗೆ ಇನ್ನುವರೆಗೂ ಯಾವದೇ ತರಹದ ಪುರ್ನವಸತಿ ಕೃಷ್ಣಾ ಮೇಲ್ದಂಡೆ ಯೋಜನೆ ಆಲವಟ್ಟಿ ಹಾಗೂ ನವನಗರ ಬಾಗಲಕೋಟ ಪುರ್ನವಸತಿ ಅಧಿಕಾರಿಗಳು/ ಇಲ್ಲವರೆಗಾದರೂ ಯಾವದೇ ಕೆಲಸ ಮಾಡಿರುವುದಿಲ್ಲ.
2) ಕೃಷ್ಣಾ ಮೇಲ್ದಂಡೆ ಯೋಜನೆ 1979 ಹಾಗೂ 1980 ರಲ್ಲಿ ನ್ಯಾಯಾಲುದಲ್ಲಿ ಎಲ್.ಎ.ಸಿ. ಕೇಶ್ ಹಾಗೂ ಎಲ್.ಎ.ಸಿ ಅಪೀಲ ಇನ್ನುವರೆಗಾದರೂ ಆದೇಶ ಆಗಿರುವುದಿಲ್ಲ. ಅದಕ್ಕಾಗಿ ದಯಾಳುಗಳಾದ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ನಮ್ಮ ಜಿಲ್ಲೆಯಲ್ಲಿ ಎಲ್.ಎ.ಸಿ. ಕೇಶ್ ಹಾಗೂ ಎಲ್.ಎ.ಸಿ ಆಫೀಲ ಆದೇಶ ಮಾಡುವುದಕ್ಕೆ ಒಂದು ಪ್ರತ್ಯೇಕ ನ್ಯಾಯಾಲಯ ಹಾಗೂ ನ್ಯಾಯಾಧೀಶರನ್ನು ನಿಯೋಜಿಸಬೇಕೆಂದು ನಮ್ಮ ಜಿಲ್ಲೆಯಲ್ಲಿ ಇರುವ ಕೃಷ್ಣ ಮೇಲ್ದಂಡ ಯೋಜನೆಯಲ್ಲಿ 18- ಸ್ವಾಧೀನಾಧಿಕಾರಿಗಳು ಸ್ವಾಧೀನ ಪಡೆಸಿಕೊಂಡಿರುವ ಜಮೀನುಗಳಿಗೆ ನ್ಯಾಯವನ್ನು ಕೊಡಿಸಬೇಕು ಸಂತ್ರಸ್ಥರ ಕಣೀರು ವರೆಸಬೇಕು. ಸ್ವಾಧೀನ ಪಡೆಸಿಕೊಂಡ ಜಮೀನುಗಳ ಪರಿಹಾರಕ್ಕಾಗಿ
3) ಬಾಗಲಕೋಟೆ ಜಿಲ್ಲೆಯಲ್ಲಿರುವ ಕ್ರಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ತುಂಬಿ ಹರಿಯುತ್ತಿದ್ದು, ನದಿ ದಂಡೆಯಲ್ಲಿರುವ ಗ್ರಾಮಗಳು ಹಾಗೂ ಜಮೀನುಗಳು ಸಂಪೂರ್ಣ ನದಿ ನೀರಿನಲ್ಲಿ ಮುಳುಗಿ ಹೋಗಿದ್ದು, ಅಲ್ಲಿರುವ ಸಂತ್ರಸ್ಥರಿಗೆ ಇಲ್ಲಿವರೆಗಾದರೂ ಸರ್ಕಾರ ರಾಜ್ಯ ಸರ್ಕಾರ ವಾಗಲಿ ಹಾಗೂ ಕೇಂದ್ರ ಸರ್ಕಾರವಾಗಲಿ ಯಾವದೇ ತರಹದ ಸ್ಪಂದನೆ ಮಾಡಿರುವುದಿಲ್ಲ.
ಬಾಲಗಕೋಟೆ ಜಿಲ್ಲೆಯಲ್ಲಿರುವ ಹುನಗುಂದ ತಾಲೂಕಿನಲ್ಲಿ ಹನಿ’ ನೀರಾವರಿ ಹಾಗೂ ಡ್ರಿಪ್ ಎರಿಗೇಷನ್ ಮಾಡಿದ್ದು, ಅದು ಸಂಪೂರ್ಣ ಪೇಲಾಗಿ ಹೋಗಿರುತ್ತದೆ.
5) ಇದೇ ತಾಲೂಕಿನಲ್ಲಿರುವ ಇಬಕಲ್ಲ ತಾಲೂಕಿನಲ್ಲಿ ನಂದವಾಡಗಿ ಎತ ನೀರಾವರಿ ಇದನ್ನು ಹನಿ ನೀರಾವರಿ ಅಲ್ಲಾ ಹರಿ ನೀರಾವರಿ ಕಾಲುವೆ ಮುಖಾಂತರ ಬರತಕ್ಕಂತಹ ನೀರಾವರಿ ಮಾಡಬೇಕು.
6) ಜಿಲ್ಲೆಯಲ್ಲಿ ಇಲ್ಲಿಯವರೆಗೂ ಬೆಳೆ ಪರಿಹಾರವೂ 25% ರೈತರಿಗೆ ಮುಟ್ಟಿದ್ದು ಇನ್ನೂ 75% ರೈತರಿಗೆ ಬಂದಿರುವುದಿಲ್ಲ.
7) ಇದೇ ಜಿಲ್ಲೆಯಲ್ಲಿರುವ ಪುರಾತನಕಾಲದ ದೇವಾಲಯಗಳನ್ನು ಪ್ರವಾಸೋದ್ಯಮ ಇಲಾಖೆಯು ಪುರಾತನ ದೇವಾಲಯಗಳಾದ ಬಾಗಲಕೋಟೆ ಜಿಲ್ಲೆಯಲ್ಲಿ ಬಾಗಲಕೋಟೆ ತಾಲೂಕಿನಲ್ಲಿರುವ ಸುಕ್ಷೇತ್ರ ಹಳ್ಳೂರು ಬಸವೇಶ್ವರ ಹಾಗೂ ಮೇಲ್ಗುಡಿಗಳನ್ನು ಅಭಿವೃದ್ಧಿ ಪಡಿಸಬೇಕು.
8) ಈ ಜಿಲ್ಲೆಯಲ್ಲಿರುವ ಹುನಗುಂದ ತಾಲೂಕಿನಲ್ಲಿ ಜಿಲ್ಲಾ ಸತ್ರ ನ್ಯಾಯಾಲಯ ಹುನಗುಂದದಲ್ಲಿ ರೈತರು ಹಾಗೂ ಕಕ್ಷಿದಾರರೂ ಕುಳಿತುಕೊಳ್ಳಲು ಟೆಂಟ್ ಇರುವುದಿಲ್ಲ ನ್ಯಾಯಾಲಯದಲ್ಲ ಸರಿಯಾದ ಶೌಚಾಲಯ ಇರುವುದಿಲ್ಲ. ಕುಡಿಯಲು ನೀರು ಇರುವುದಿಲ್ಲ.
9) ರೈತ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ರಾಜ್ಯದಲ್ಲಿ ಹೋರಾಟ. ಹೋಗಿ ಬರುವುದಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಪಾಸ್ ನೀಡಬೇಕು. ಹಾಗೂ ಗೌರವಧನವನ್ನು ಕೊಡಬೇಕೆಂದು ತಮ್ಮಲ್ಲಿ ಅಖಿಚಿ ಕರ್ನಾಟಕ ರಾಜ್ಯ ರೈತ ಸಂಘ (ರಿ) ಬೆಂಗಳೂರು ಹಾಗೂ ದುಬಾಗಲಕೋಟ ರವರು ಗೌರವ ಪೂರ್ವಕ ಮನವಿ. ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಅಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ, ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷರು ಮಹಾದೇವಿ ಹೊಯಿಳಗೋಳ, ಬಾಗಲಕೋಟ ಜಿಲ್ಲೆ ಗೌರವ ಅಧ್ಯಕ್ಷರು ವೀರನಗೌಡ ಪಾಟೀಲ,ಬಾಗಲಕೋಟ ಜಿಲ್ಲಾ ಅಧ್ಯಕ್ಷರು, ನಾಗರಾಜ ಬಿ ಹೂಗಾರ, ಜಿಲ್ಲಾ ಉಪಾಧ್ಯಕ್ಷ ರುದ್ರಪ್ಪ ಬೆನಕನ ಡೋನಿ, ಜಿಲ್ಲಾ ಕಾರ್ಯದರ್ಶಿ ಸುರೇಶ ಕುಂಬಾರ , ಜಿಲ್ಲಾ ಖಜಾಂಚಿ. ಬೀರಪ್ಪ ಕುರುಬರ, ಜಿಲ್ಲಾ ಸಂಚಾಲಕ ಮಲಿಕಾಜಪ್ಪ ಕುಂಬಾರ, ಜಿಲ್ಲಾ ಉಪ ಕಾರ್ಯದರ್ಶಿ ಚಂದ್ರಕಾಂತ ಕಿರಸುರ, ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ಸರ್ವ ಸದಸ್ಯರು.ಉಪಸ್ಥಿತರಿದ್ದರು.