ವಿಜಯಪುರ:ನಗರದ ಮಧ್ಯವರ್ತಿ ಸ್ಥಳವಾದ ಕೇಂದ್ರ ಬಸ್ ನಿಲ್ದಾಣ ಹತ್ತಿರ ಡಿಸಿ ಕಚೇರಿ ರಸ್ತೆ ಮತ್ತು ಡಿಡಿಪಿಆಯ್ ಕಚೇರಿ ಹತ್ತಿರ ವೃತ್ತದಲ್ಲಿ ಹಲವಾರು ವರ್ಷಗಳಿಂದ ದನ – ಜಾನುವಾರುಗಳಿಗೆ.ಕಣಕಿ.ಹಸಿರುಹುಲ್ಲು.ತಪ್ಪಲುಗಳನ್ನು. ತಲೆ-ತಲಾಂತರದಿಂದ ಮಾರುತ್ತಿದ್ದ ಕೆಲುವು ಕುಟುಂಬ.ಗ್ರಾಮೀಣ ಜನರಿಗೆ ಇಲ್ಲಿ ಮಾರಲು ಅವಕಾಶ ಇಲ್ಲ ಎಂದು ಮಹಾನಗರ ಪಾಲಿಕೆಯ ಕೆಲವು ಅಧಿಕಾರಿಗಳು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆ.ಇದನ್ನು ಪ್ರತಿಭಟಿಸಿ ಇಂದು ಜಿಲ್ಲಾಡಳಿತ ಕಚೇರಿಗೆ.ಮಹಾನಗರ ಪಾಲಿಕೆಯ ಆಯುಕ್ತರಿಗೆ.ನಗರ ಶಾಸಕರಿಗೆ ಉಸ್ತುವಾರಿ ಸಚಿವರಿಗೆ ಈಗ ಇರುವಲ್ಲಿಯೇ ಕಣಕಿ.ಹುಲ್ಲು ಮಾರಲು ಅವಕಾಶ ನೀಡಿ.ಇಲ್ಲವೇ ಪರ್ಯಾಯ ವ್ಯವಸ್ಥೆ ಕಲ್ಪಿಸಿ.ಬೀದಿ ಬದಿ ವ್ಯಾಪಾರ ಮಾಡುವ ಹಲವಾರು ಕುಟುಂಬಗಳನ್ನು ಬೀದಿಗೆ ತರಬೇಡಿ ಎಂದು ಆಗ್ರಹಿಸಿ ಇಂದು ಮನವಿ ಸಲ್ಲಿಸಲಾಯಿತು.ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀ ದಾನೇಶ್ ಅವಟಿಯವರ ಮುಂದಾಳತ್ವದಲ್ಲಿ ಸರ್ಕಾರದ ಗಮನ ಸೆಳೆಯಲು ಸಂಭಂದಿಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಯಿತು.
Home ಸಾರ್ವಜನಿಕ ಧ್ವನಿ ದನ-ಜಾನುವಾರುಗಳಿಗೆ.ಕಣಕಿ.ಹಸಿರುಹುಲ್ಲು.ತಪ್ಪಲುಗಳ ಬೀದಿ ವ್ಯಾಪಾರಸ್ತರಿಗೆ ಅಧಿಕಾರಿಗಳ ಕಿರುಕುಳ.