ಕೊಲ್ಹಾರ :ವಿಜಯಪೂರ ಮತ್ತು ಭಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಒಕ್ಕೂಟದ ಚುನಾವಣೆಯಲ್ಲಿ,ಕೊಲ್ಹಾರ, ಮುದ್ದೇಬಿಹಾಳ, ನಿಡಗುಂದಿ, ಬ. ಬಾಗೇವಾಡಿ, ತಾಳಿಕೋಟಿ ತಾಲೂಕುಗಳ ಆಡಳಿತ ಮಂಡಳಿಯ ನಿರ್ದೇಶಕರಾಗಿ ಕೋಲ್ಹಾರ ತಾಲೂಕಿನ  ನಾಗರದಿನ್ನಿ  ಗ್ರಾಮದ  ಹಿರಿಯ ಮುಖಂಡರಾದ ನಿಂಗನಗೌಡ . ಆರ್ .ಪಾಟೀಲ ಆಯ್ಕೆಯಾಗಿದ್ದಾರೆ.

ಜು.28.ಭಾನುವಾರ ರಂದು ವಿಜಯಪೂರದಲ್ಲಿ ನಡೆದ ವಿಜಯಪೂರ ಮತ್ತು ಭಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ಬ.ಬಾಗೇವಾಡಿ, ಮುದ್ದೇಬಿಹಾಳ ತಾಳಿಕೋಟಿ, ನಿಡಗುಂದಿ ಕೊಲ್ಹಾರ ತಾಲೂಕುಗಳ, ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಾಲೂಕಿನ ನಾಗರಿದಿನ್ನಿ ಗ್ರಾಮದ ನಿಂಗನಗೌಡ ನಿಂಗನಗೌಡ ಆರ್ ಪಾಟೀಲ ಇವರಿಗೆ 22ಮತ ಹಾಗೂ ನಿಡಗುಂದಿಯ ಬಾಬು ಪಾತ್ರೊಟಿ 24ಮತಗಳನ್ನು ಪಡೆದು ಆಯ್ಕೆಯಾದರು . ಇಬ್ಬರು ಅಭ್ಯರ್ಥಿಗಳು ಜಯ ಸಾಧಿಸಿದ್ದಕ್ಕಾಗಿ ವಿಜಯಪುರ ಜಿಲ್ಲಾ ಹಾಲು ಒಕ್ಕೂಟದ ಕಚೇರಿ ಎದುರುಗಡೆ ಗುಲಾಲು ಎರಿಚಿ, ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಣಮಂತಗೌಡ ಕುಬಕಡ್ಡಿ, ಮುತ್ತು ಸಾವುಕಾರ ಹಳ್ಳೂರ, ಬಸವರಾಜ ಬಿರಾದಾರ, ಅಖಿಲ್ ಗೌಡ ಪಾಟೀಲ, ಮಹಮ್ಮದಗೌಸ ಹವಾಲ್ದಾರ, ಹಣಮಂತ ಹಿರೇಗೌಡರ, ಶಿವನಗೌಡ ಬಿರಾದಾರ, ರಂಗನಗೌಡ ಲಚ್ಚಮನ್ನವರ, ಚಂದ್ರಶೇಖರ ಬಿರಾದಾರ, ಹಾಗೂ ಶ್ರೀಕಾಂತ ಗಣಿ, ಸಂಜುಗೌಡ ಬಿರಾದಾರ ಸೇರಿದಂತೆ  ಅನೇಕ ಜನ ಹಾಜರಿದ್ದರು . 

LEAVE A REPLY

Please enter your comment!
Please enter your name here