ಮೂಡಲಗಿ:ಜು,29ತಾಲೂಕಿನ ಘಟಪ್ರಭೆ ನದಿಯ ಆರ್ಯಭಟಕ್ಕೆ ಎಷ್ಟೊಂದು ಬದುಕು ಬೀದಿಪಾಲು.
ಕೆಲ ಗ್ರಾಮಗಳು ನಡು ಗಡ್ಡೆಯಾಗಿವೆ.ಕರುಳು ಮಸಗುಪ್ಪಿ ಗ್ರಾಮದಲ್ಲಿ ಸುಮಾರು 600 ಕ್ಕಿಂತಲೂ ಹೆಚ್ಚು ಮನೆಗಳು ನೀರಿನಲ್ಲಿ ನಿಂತಿರುವ ವು.ವಿದ್ಯುತ್ ಸಂಪರ್ಕ ಇಲ್ಲ,ತಿನ್ನಲು ಸರಿಯಾಗಿ ಆಹಾರ ಸಿಗುತ್ತಿಲ್ಲ,ಜೀವನ ಕಷ್ಟವಾಗಿವೆ. ಮನೆಗೆ ಘಟಪ್ರಭಾ ನದಿಯು ನುಗ್ಗಿರುವ ನೀರಿನಿಂದ ಇದೆಲ್ಲಾ ನಮ್ಮ ಬದುಕು ಬೀದಿಪಾಲು ಮನಕಲಕುವ ದೃಶ್ಯ. ಕಾಳಜಿ ಕೇಂದ್ರವೆ ನಿರಾಸಿತರಿಗೆ ಆಶ್ರಯವಾಗಿವೆ.

ಮಸಗುಪ್ಪಿ,ಹುಣಶ್ಯಾಳ ಪಿಜಿ,ಪಟಗುಂದಿ,ಅವರಾದಿ,ತಿಗಡಿ,ಕಮಲದಿನ್ನಿ ಹಾಗೂ ಇನ್ನು ಕೆಲ ಗ್ರಾಮಗಳು ಈ ಎಲ್ಲ ಊರಿನಲ್ಲಿ ಜನರ ಹಾಗೂ ಜಾನುವಾರುಗಳ ಪ್ರವಾಹದಿಂದ ಪರಿಸ್ಥಿತಿ ತುಂಬಾ ಕೆಟ್ಟು ಹೊಗಿರುವುದು.ಸುಣಧೋಳಿ ಗ್ರಾಮದಲ್ಲಿ ಶ್ರೀ ಜಡಿಸಿದ್ಧೇಶ್ವರ ಮಠದ ಒಳಗೆ ಸುತ್ತೂವರೆದ ಘಟಪ್ರಭಾ ನದಿ.
ಮೂಡಲಗಿ ತಾಲೂಕಾಡಳಿತ ನಿರಾಸಿತರಿಗೆ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವ ಕಾರ್ಯ ನಡೆಸಿದ್ದಾರೆ.

ಮಸಗುಪ್ಪಿ ಗ್ರಾಮದ ಜನರ ಬಹುದಿನಗಳ ಬೇಡಿಕೆ,ನಮಗೆ ಬದುಕಲು ಶಾಶ್ವತವಾದ ಸ್ಥಳ ಕೊಡಿ ಎಂದು ಕೇಳುತ್ತಿದ್ದಾರೆ.ನಮ್ಮ ಗ್ರಾಮವು ತಗ್ಗು ಪ್ರದೇಶದಲ್ಲಿ ಇರುವುದರಿಂದ ಮಳೆ ಹೆಚ್ಚಾಗಿ ಬಂದರೆ ನೀರು ಬರುವುದು ಗ್ರಾಮದಲ್ಲಿ. ನಮಗೆ ಬೇರೆ ಜಾಗವನ್ನು ಕೊಡಿ ನಾವು ಅಲ್ಲೇ ಇರುತ್ತೇವೆ ಅಂತ ನಿರಾಶಿತರು ಕೇಳಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here