ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆ?:

ಅಯ್ಯೋ ಏನಪ್ಪ ಇದು ವಿಚಿತ್ರ ಅಂತೀರಾ, ನಿಜ, ಇನ್ನೂ ಮುಂದೆ ರಾಮನಗರ ಜಿಲ್ಲೆ ಆಗಲಿದೆ ಬೆಂಗಳೂರು ದಕ್ಷಿಣ ಜಿಲ್ಲೆ. ಹದಿನೇಳು ವರ್ಷದ ನಂತರ ರಾಮನಗರ ಹೆಸರನ್ನು ಬದಲಾಯಿಸಲು ಬಹಳ ದೊಡ್ಡ ಗಟ್ಟಿ ಮನಸ್ಸು ಮಾಡಿ ತೀರ್ಮಾನಿಸಿದ ಡಿಕೆಶಿಗೆ ರಾಮ ಒಳ್ಳೇದು ಮಾಡಲಿ ಅಂತ ಜಿಲ್ಲೆಯ ಒಂದು ಗುಂಪಿನ ಜನರ ಆಶಯ.

ಜಿಲ್ಲೆಯ ಜನರ ಅಭಿಪ್ರಾಯವನ್ನ ಕೇಳದೆ, ಮನಸ್ಥಿತಿಯನ್ನರಿಯೆದೆ, ಜನರಿಂದ ಆಯ್ಕೆ ಆಗಿ, ಜನರನ್ನು ಲೆಕ್ಕಿಸದೆ, ನಾನು ಮಾಡಿದ್ದೆ ಸರಿ, ನಾನು ಮಾಡಿದ್ದೆ ಶಾಸನ ಎಂದು ಹಳೆ ಜಿಲ್ಲೆಗೆ ಹೊಸ ಹೆಸರು ಕೊಟ್ಟ ಡಿಕೆಶಿಗೆ ಒಳ್ಳೆದಾಗುತ್ತ ಅಂತ ಅನ್ನುವ ಜನರ ಗುಂಪು ಒಂದೆಡೆ. ಒಟ್ಟಿನಲ್ಲಿ ಮೊಹಮ್ಮದ್ ಬಿನ್ ತೊಗಲಕ್ ಆಳ್ವಿಕೆ ನೆನೆಪಿಸಿದಂತಾಯ್ತು.

ಹೆಸರು ಬದಲಾವಣೆ ಸಾಲದು, ಅಭಿವೃದ್ಧಿ ಮುಖ್ಯ. ಬೆ0ಗಳೂರಿನ ನೋಟವೀಗ ಮತ್ತಷ್ಟು ವಿಸ್ತಾರವಾಗಿದೆ. ಪಕ್ಕದಲ್ಲಿದ್ದ ರಾಮನಗರ ಜಿಲ್ಲೆಯೂ ಇನ್ನು ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಲಿದೆ. ರಾಮನಗರ, ಹಾರೋಹಳ್ಳಿ, ಕನಕಪುರ, ಮಾಗಡಿ, ಚನ್ನಪಟ್ಟಣ ತಾಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಗೆ ಹೊಸ ಹೆಸರಿನ ಸ್ಪರ್ಶ ಹಾಗೂ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸುವುದು ಇದರ ಮುಖ್ಯ ಉದ್ದೇಶ ಅಂತ ಡಿಕೆಶಿ ಹೇಳಿಕೆ.

ಬೆಂಗಳೂರು ಎನ್ನುವ ಹೆಸರಿಗೆ ತನ್ನದೇ ಆದ ಮೌಲ್ಯವಿದೆ. ಸ್ಥಾನಮಾನವಿದೆ. ಜಾಗತಿಕವಾಗಿ ಗುರುತಿಸಿಕೊಂಡಿರುವ ನಗರ. ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಊರು. ಈ ಕಾರಣದಿಂದಲೇ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಕರೆಯುವ ಮೂಲಕ ಬೆಂಗಳೂರನ್ನು ಮತ್ತಷ್ಟು ವಿಸ್ತರಿಸುವ, ಅಭಿವೃದ್ಧಿಪಡಿಸುವ ಗುರಿ ಸರಕಾರದ್ದಾಗಿದೆ ಎಂಬುದು ಡಿಕೆಶಿ ವಾದ.

ರಾಜಧಾನಿ ಬೆಂಗಳೂರಿಗೆ ಅನತಿ ದೂರದಲ್ಲಿರುವ ರಾಮನಗರ ಜಿಲ್ಲೆಗೆ ಸೇರಿದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ಬಹುರಾಷ್ಟ್ರೀಯ ಕಂಪನಿಗಳು ತಲೆ ಎತ್ತಿವೆ. ಇದಕ್ಕೆ ಪೂರಕವೆಂಬಂತೆ ಬೆಂಗಳೂರು-ಮೈಸೂರು ದಶಪಥ ರಸ್ತೆಯೂ ಬಿಡದಿ, ರಾಮನಗರದ, ಚನ್ನಪಟ್ಟಣ ಮೂಲಕ ಹಾದು ಹೋಗಿದ್ದು ಅಭಿವೃದ್ಧಿ ಪಥದಲ್ಲಿ ಮುಂದುವರಿಯಲು ಸಹಕಾರಿಯಾಗಲಿದೆ ಎಂಬುದು ಡಿಕೆಶಿ ವಾದ.

ಕೇವಲ ಜಿಲ್ಲೆ ಮರುನಾಮಕರಣ ಮಾಡದೆ ಇದರ ಜತೆಗೆ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ತಾಲೂಕುಗಳ ಅಭಿವೃದ್ಧಿಗೂ ಒತ್ತು ಸಿಗಬೇಕಿದೆ. ಬಂಡವಾಳ ಹೂಡಿಕೆಯೂ ಹರಿದುಬರಬೇಕಿದೆ, ಸುತ್ತಮುತ್ತಲಿನ ಹೊಲಗದ್ದೆಗಳಿಗೆ ಡಿಮ್ಯಾಂಡ್ ಜಾಸ್ತಿ ಆಗಲಿದೆ. ಸ್ಥಳೀಯರಿಗೆ ಉದ್ಯೋಗ ಭದ್ರತೆ ಕಾಪಾಡುವ ಹೊಣೆ ಡಿಕೆಶಿಯಿಂದಾಗಬೇಕಿದೆ. ಇದರ ಜತೆಗೆ ಈ ಭಾಗದ ವ್ಯಾಪ್ತಿಗೆ ಬರುವ ತಾಲೂಕುಗಳ ಜನರ ಜೀವನ ಮಟ್ಟವೂ ಸುಧಾರಿಸಬೇಕಿದೆ. ಸುಮಾರು ವರ್ಷಗಳಿಂದ ಶಾಸಕರಾಗಿ, ಸಚಿವರಾಗಿ ಡಿಕೆಶಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಯೋಚಿಸದೆ ಏಕಾಏಕಿ ಯೋಚಿಸಿರುವುದರ ಹಿಂದೆ ಗುಪ್ತತೆ ಏನು ಎಂಬುದು ಸ್ಥಳೀಯರ ಪ್ರಶ್ನೆಯಾದರೆ, ಇದೊಂದು ಮಹತ್ತರವಾದ ಮೈಲುಗಲ್ಲು ಎಂಬುದು ಡಿಕೆಶಿಯ ಉತ್ತರ.

ಇನ್ನು ಮುಂದೆ ನಾವು ಬೆಂಗಳೂರಿನವರೇ ಎಂದು ಹೇಳಿಕೊಳ್ಳುವುದಕ್ಕೆ ಹೆಸರು ಬದಲಾವಣೆ ಮತ್ತಷ್ಟು ಬಲ ನೀಡಲಿದೆ ಅಂತ ಡಿಕೆಶಿಯವರ ವಾದ. ಕೈಗಾರಿಕೆಗಳ ಅಭಿವೃದ್ಧಿಯ ಜತೆಗೆ ಮೂಲಸೌಕರ್ಯಗಳ ಅಭಿವೃದ್ಧಿಗೂ ಇದೊಂದು ಮಹತ್ವದ ಹೆಜ್ಜೆಯಾಗಬೇಕಿದೆ.

ಬೆಂಗಳೂರು ಸುತ್ತಮುತ್ತ ರಿಯಲ್ ಎಸ್ಟೇಟ್ ಉದ್ಯಮ ಇನ್ನಷ್ಟು ಸರಕಾರದ ಈ ನಿರ್ಧಾರ ರಾಜಕೀಯ ಕೆಸರೆರಚಾಟಕ್ಕೂ ದಾರಿ ಮಾಡಿಕೊಡುವುದನ್ನು ತಳ್ಳಿಹಾಕುವಂತಿಲ್ಲ. ಕೆಲ ಸಮಯದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ವಿಷಯವನ್ನು ಪ್ರಸ್ತಾಪಿಸಿ ಸರಕಾರಕ್ಕೆ ಮನವಿ ನೀಡಿದಾಗಲೇ ಪ್ರತಿಪಕ್ಷಗಳಿಂದ ಅಪಸ್ವರ ಎದ್ದಿತ್ತು. ಈಗ ಅದು ಮತ್ತಷ್ಟು ಮುಂದುವರಿಯುವ ಸಾಧ್ಯತೆ ಇಲ್ಲದಿಲ್ಲ. 2007ರಲ್ಲಿ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಮನಗರ ಜಿಲ್ಲೆಯನ್ನು ಘೋಷಿಸಿದ್ದರು. ಈಗ 17 ವರ್ಷಗಳ ಬಳಿಕ ರಾಮನಗರ ಜಿಲ್ಲೆಗೆ ಮರು ನಾಮಕರಣವಾಗುತ್ತಿದೆ.

ಹೆಸರು ಬದಲಾವಣೆಗಷ್ಟೇ ಸರಕಾರ ಸೀಮಿತವಾಗದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಸ್ಟ‌ರ್ ಪ್ಲಾನ್ ರೂಪಿಸುವ ಅಗತ್ಯತೆ ತೋರಬೇಕಿದೆ. ಒಂದಡೆ ಡಿಕೆಶಿ ಮಾಡಿದ್ದು ಸರಿ ಅನ್ನುವ ಒಂದು ವರ್ಗದ ಗುಂಪಿದ್ದರೆ, ಇನ್ನೊಂದೆಡೆ ರಾಮನಗರ ಜಿಲ್ಲೆಯ ಹೆಸರಿಗೆ ಮಾನಸಿಕವಾಗಿ ಹೊಂದಿಕೊಂಡಿರುವವರ ವಿರೋಧ. ಜನರ ನಾಡಿಮಿಡಿತ ಅರಿಯದೆ ಮಾಡಿದ್ದು ಸರಿಯಿಲ್ಲ ಅನ್ನುವ ಗುಂಪು ಒಂದೆಡೆ.

ಇನ್ನೂ ಹೆಚ್ ಡಿ ಕುಮಾರಸ್ವಾಮಿ ಮತ್ತೆ 2028ಕ್ಕೆ ರಾಮನಗರ ಜಿಲ್ಲೆ ಎಂಬ ಹೆಸರು ಬದಲಾವಣೆ ಮಾಡ್ತೀವಿ ಅಂತ ಹೇಳಿಕೆ. ಅಧಿಕಾರಿಗಳು, ರಾಜಕೀಯ ನಾಯಕರು ಅಧಿಕಾರಕ್ಕೆ ಬಂದರೆ ತಮಗೆ ಹೇಗೆ ಬೇಕೋ ಹಾಗೆ ಕಾನೂನು ಕಟ್ಲೆ ಮಾಡಬಹುದು ಎನ್ನುವುದಕ್ಕೆ ಇದೇ ಉದಾಹರಣೆ.

ಇದೆಲ್ಲ ಒಂದು ಕಡೆಯಾದರೆ, ಇನ್ನೂ ಕೋಲಾರ ಭಾಗ ಬೆಂಗಳೂರುಗೆ ಕೇವಲ 55 ಕಿಮಿ. ಕೆಜಿಫ್, ನರಸಾಪುರ, ಹೊಸಕೋಟೆ ಭಾಗ ಕೈಗಾರಿಕೆಗೆ ಹೆಸರುವಾಸಿ, ಹಾಗಾಗಿ, ಕೋಲಾರ ಮತ್ತಿತರೆ ಅಕ್ಕಪಕ್ಕದ ಭಾಗದವರು ಬೆಂಗಳೂರು ಪೂರ್ವ ಜಿಲ್ಲೆ ಎಂದು ಮರುನಾಮಕರಣ ಮಾಡಿ ಎಂದು ಕೇಳಿದರೆ ಅಚ್ಚರಿಯಿಲ್ಲ. ಕೇವಲ ಡಿಕೆಶಿಯವರ ಜಿಲ್ಲೆ ಅಭಿರುದ್ದಿ ಆದರೆ ಸಾಕೆ?, ನಮ್ಮ ಜಿಲ್ಲೆಗೂ ಈ ರೀತಿಯ ಸೌಭಾಗ್ಯ ಸಿಗಲಿ ಅಂತ ಅಂದ್ರು ಅಚ್ಚರಿಯಿಲ್ಲ.

ಅದೇ ರೀತಿಯಾಗಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮತ್ತಿತರೆ ಭಾಗ ಬೆಂಗಳೂರು ಪಶ್ಚಿಮ ಆದರೂ ಆಗಬಹುದು.

ಇನ್ನೂ ತುಮುಕೂರಿನ ಕೆಲವು ಭಾಗ, ಕುಣಿಗಲ್ ಮತ್ತಿತರೆ ಬೆಂಗಳೂರು ಉತ್ತರವಾದರೂ ಆಗಬಹುದು ಅನ್ನುವುದು ಜನರ ಅಭಿಪ್ರಾಯ.

ಏನೋ, ಅವರವರ ಸರಕಾರ ಬಂದಾಗ ಅವರವರಿಗೆ ಅನುಕೂಲ ಆಗುವಂತೆ ಕಾನೂನು ಕಟ್ಲೆ ಆಗೋದು ಸಹಜ. ಬಡವ ನೀ ಮಡಿಗಿದಂಗಿರು ಎಂಬುದು ಜನರ ಸ್ಥಿತಿ. ಜನರು ಕೇವಲ ಮತ ಹಾಕಲು ಸೀಮಿತ. ಇನ್ನೂ ನಿಷ್ಠಾವಂತ ಪತ್ರಕರ್ತರು ವಾಸ್ತವ ವಸ್ತುಸ್ಥಿತಿ ವ್ಯಕ್ತಪಡಿಸಿದರೆ ಅವರ ಮೇಲೆ ಮಾನನಷ್ಟ ಕೇಸು, ಸರಕಾರದ ಕೆಲಸಕ್ಕೆ ಅದ್ದಪಡಿಸುವಿಕೆ ಎಂಬ ಕೇಸು.

ಇವತ್ತೂ, ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ (ಹೊಸ ಬೆಂಗಳೂರು ದಕ್ಷಿಣ ಜೆಲ್ಲೆ) ಮುಲಾಸೌಕರ್ಯವಿಲ್ಲದೆ ನರಳುತ್ತಿದೆ. ಜಿಲ್ಲೆಯ ರೈತರಿಗೆ ಸರಿಯಾಗಿ ಬೆಲೆ ಪರಿಹಾರ ಸಿಗುತ್ತಿಲ್ಲ. ಯುವಕರಿಗೆ ಉದ್ಯೋಗ ಕಡಿತವಿದೆ. ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಇಲ್ಲ. ಮೂಲ ಸೌಕರ್ಯ ಶೂನ್ಯ. ಜಿಲ್ಲೆಯ ಪ್ರವಾಸಿ ಉದ್ಯಮ ಉದ್ದಾರ ಆಗಬೇಕಿದೆ. ನಮ್ಮ ನೀರು ನಮ್ಮ ಹಕ್ಕು, ಮೇಕೆದಾಟು ಆಣೆಕಟ್ಟು ಬೇಗ ಆಗಲಿ. ಜಿಲ್ಲೆಯ ಕೇಂದ್ರದಿಂದ ಹತ್ತಿರದಲ್ಲಿರುವ ತಮಿಳುನಾಡುಗೆ ರಸ್ತೆ ಸಂಪರ್ಕ ಆದರೆ ವ್ಯಾಪಾರ ಅಭಿರುದ್ದಿ ಆಗಲು ಕೈ ಜೋಡಿಸಿದಂತೆ. ಮೈಸೂರಿಂದ ಬರುವ ವಾಹನಗಳು ಬೆಂಗಳೂರು ನಗರ ಪ್ರವೇಶಿಸದೆ ಹೊಸೂರು ಅಥವಾ ಕೃಷ್ಣಗಿರಿಗೆ (ತನಾ) ಹೋಗಬಹುದು. ಇದನ್ನೆಲ್ಲ ಆದಷ್ಟು ವೇಗವಾಗಿ ಮಾಡಬೇಕಿದೆ. ಜಿಲ್ಲೆಯ ಹೆಸರು ಬದಲಾವಣೆಯಿಂದ ಜಿಲ್ಲಾಧಿಕಾರಿಗಳು, ಉಪಜಿಲ್ಲಾಧಿಕಾರಿಗಳು, ಜಿಲ್ಲೆಯ ನ್ಯಾಯಮೂರ್ತಿಗಳು ಮತ್ತಿತರರು ಸರಕಾರದ ಅಧಿಕಾರಿಗಳು ಬೆಂಗಳೂರು ನಗರದಲ್ಲಿ ವಾಸ ಮಾಡೋದು ತಪ್ಪುತ್ತಾ ನೋಡಬೇಕಿದೆ. ರಾಮನಗರ ಜಿಲ್ಲೆ ಎಂಬ ಹೆಸರಿನಿಂದ ಆಗದ್ದು, ಬೆಂಗಳೂರು ದಕ್ಷಿಣ ಜಿಲ್ಲೆ ಎಂಬ ಹೆಸರಿನಿಂದಾದರೂ ಆಗಲಿ.

ಒಟ್ಟಿನಲ್ಲಿ ಹೊಸ ಹೆಸರಿನನಿಂದ ಜಿಲ್ಲೆಯ ಜನರಿಗೆ ಒಳ್ಳೇದಾಗ್ಲಿ. ನಿಮ್ಮ ಆಸ್ತಿ ಪಾಸ್ತಿನ ಬೇರೆ ರಾಜ್ಯದವರಿಗೆ ಅಥವಾ ಬೇರೆ ದೇಶದವರಿಗೆ ಮಾರಿಕೊಂಡು ನಿರ್ಗತಿಕರಾಗಬೇಡಿ. ಆಮೇಲೆ, ಸ್ಥಳೀಯರಿಗೆ ಆದ್ಯತೆ ಇಲ್ಲ ಅಂತ ಕೊರಗಬೇಡಿ. ನಿಮ್ಮ ಆಸ್ತಿತ್ವ ನಿಮ್ಮ ಕೈಲಿ. ನಿಮ್ಮ ಭವಿಷ್ಯ ನಿಮ್ಮ ಕೈಲಿ. ನಾವು ಯಾರ ಪರನೂ ಅಲ್ಲ, ಯಾರ ವಿರೋಧನೂ ಅಲ್ಲ. ಇರುವ ವಾಸ್ತವ ಸ್ಥಿತಿ ವ್ಯಕ್ತಪಡಿಸಿಸುವುದು ನಮ್ಮ ಕಲಸ. ಜೈ ಕರ್ನಾಟಕ, ಜೈ ಭಾರತ.

(ಶಿವಪ್ರಸಾದ್. ಜಿ.ಸೂರ್ಯಾಗ್ನಿ ಶಿವು)

LEAVE A REPLY

Please enter your comment!
Please enter your name here