ದಾವಣಗೆರೆ:ಹಣಕಾಸು ಸಚಿವರೇ…. ನಿಮ್ಮ ಬಜೆಟ್‌ನಲ್ಲಿ ದುಡಿಯುವ ವರ್ಗಕ್ಕೆ ಯಾವುದೇ ಕೊಡುಗೆ ಇಲ್ಲವೇ? ಅವರನ್ನು ಬದಿಗೆ ಸರಿಸಿ ದೇಶವನ್ನು ವಿಕಸಿತ ಭಾರತ ಮಾಡುವ ಯೋಜನೆಯೇ?
ಕಾರ್ಮಿಕರನ್ನು ಶೋಷಣೆ ಮಾಡಿ ಬಂಡವಾಳಷಾಹಿಗಳನ್ನು ಪೋಷಿಸುವ ಬಜೆಟ್ ಇದಾಗಿದೆ. ಸಮಾಜದ ತಳಮಟ್ಟದಲ್ಲಿ ಕೆಲಸ ಮಾಡುವ ಬಿಸಿಯೂಟ ತಯಾರಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಗೌರವಯುತವಾಗಿ ಜೀವಿಸುವಂತೆ ಮಾಡುವ ನಿಟ್ಟಿನಲ್ಲಿ ಯಾವುದೇ ಕೊಡುಗೆ ನೀಡಿಲ್ಲ. ನಿರುದ್ಯೋಗ ನಿರ್ಮೂಲನೆ ನೆಪದಲ್ಲಿ ಉದ್ಯೋಗ ಸಂಬಂಧಿತ ಪ್ರೋತ್ಸಾಹ ಧನದ ಮೂಲಕ ಬಂಡವಾಳಶಾಹಿ ವ್ಯವಸ್ಥೆಯನ್ನು ಪೋಷಣೆ ಮಾಡುವ ಯೋಜನೆ ಹಾಕಿದ್ದಾರೆ. ನಿರುದ್ಯೋಗ ಹಾಗೂ ಬಡತನ ನಿರ್ಮೂಲನೆ ಬಗ್ಗೆ ಪ್ರಸ್ತಾಪಿಸಿದ್ದಾರೆ ಆದರೆ ನಿರ್ದಿಷ್ಟವಾದ ಯೋಜನೆಗಳಿಲ್ಲ. ಸರಕಾರದ ಕಾರ್ಮಿಕ ವಿರೋಧಿ ಧೋರಣೆಯ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ.